100 ಕೋಟಿ ಹಣ ವಂಚನೆ ಪ್ರಕರಣ: ಪ್ರಕಾಶ್ ರೈಗೆ ಸಮನ್ಸ್

Prakash Raj: ನಟ ಪ್ರಕಾಶ್ ರೈಗೆ ಇಡಿ ಸಂಕಷ್ಟ ಎದುರಾಗಿದೆ. 100 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕಾಶ್ ರೈಗೆ ಕೇಂದ್ರ ತನಿಖಾ ಸಂಸ್ಥೆ ಇಡಿ ಸಮನ್ಸ್ ಜಾರಿ ಮಾಡಿದೆ.

100 ಕೋಟಿ ಹಣ ವಂಚನೆ ಪ್ರಕರಣ: ಪ್ರಕಾಶ್ ರೈಗೆ ಸಮನ್ಸ್
ಪ್ರಕಾಶ್ ರೈ
Follow us
|

Updated on: Nov 23, 2023 | 8:01 PM

ತಮ್ಮ ಹೇಳಿಕೆಗಳ ಮೂಲಕ ವಿವಾದಕ್ಕೆ ಗುರಿಯಾಗುತ್ತಿದ್ದ, ಸಂಕಷ್ಟಗಳಿಗೆ ಈಡಾಗುತ್ತಿದ್ದ ನಟ ಪ್ರಕಾಶ್ ರೈ (Prakash Raj) ಇದೀಗ ಹಣದ ಕಾರಣಕ್ಕೆ ಇಕ್ಕಟ್ಟೊಂದಕ್ಕೆ ಸಿಲುಕಿದಂತಿದೆ. 100 ಕೋಟಿ ಹಣ ವಂಚನೆ ಪ್ರಕರಣ ಸಂಬಂಧ ನಟ ಪ್ರಕಾಶ್ ರೈಗೆ ಸಮನ್ಸ್ ಜಾರಿ ಆಗಿದ್ದು ಪ್ರಕರಣದ ತನಿಖೆ ನಡೆಸಿರುವ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳ ಮುಂದೆ ಹಾಜರಾಗಿ ವಿಚಾರಣೆ ಎದುರಿಸಬೇಕಾಗಿದೆ.

ಪ್ರಣವ್ ಜ್ಯುವೆಲರ್ಸ್ ಹೆಸರಿನ ಆಭರಣ ಮಾರಾಟ ಸಂಸ್ಥೆಯೊಂದಕ್ಕೆ ಸಂಬಂಧಿಸಿದಂತೆ ನಡೆದಿದೆ ಎನ್ನಲಾಗುತ್ತಿರುವ 100 ಕೋಟಿ ವಂಚನೆ ಪ್ರಕರಣವನ್ನು ಜಾರಿ ನಿರ್ದೇಶನಾಲಯ (ಇಡಿ) ನಡೆಸುತ್ತಿದೆ. ಪ್ರಣವ್ ಜ್ಯುವೆಲರ್ಸ್​ಗೆ ನಟ ಪ್ರಕಾರ್ ರೈ ರಾಯಭಾರಿ ಆಗಿದ್ದರು, ಇದೇ ಕಾರಣಕ್ಕೆ ನಟ ಪ್ರಕಾಶ್ ರೈಗೆ ಸಮನ್ಸ್ ನೀಡಿರುವ ಇಡಿ ವಿಚಾರಣೆಗೆ ಹಾಜರಾಗುವಂತೆ ಹೇಳಿದೆ.

ತ್ರಿರುಚಿ ಮೂಲದ ಪ್ರಣವ್ ಜ್ಯುವೆಲರ್ಸ್​ಗೆ ಬಹಳ ಸಮಯದಿಂದಲೂ ಪ್ರಕಾಶ್ ರೈ ರಾಯಭಾರಿ ಆಗಿದ್ದರು. ಈ ಸಂಸ್ಥೆಯು ಇತ್ತೀಚೆಗೆ ನಷ್ಟ ಘೋಷಿಸಿ ತನ್ನ ಅಂಗಡಿಗಳನ್ನು ಬಂದ್ ಮಾಡಿದೆ. ಅಂಗಡಿಗಳನ್ನು ಬಂದ್ ಮಾಡಿದ ಬೆನ್ನಲ್ಲೆ ಹಲವಾರು ಗ್ರಾಹಕರು ಪ್ರಣವ್ ಜ್ಯುವೆಲರ್ಸ್ ವಿರುದ್ಧ ದೂರು ದಾಖಲಿಸಿದ್ದಾರೆ. ಪ್ರಣವ್ ಜ್ಯುವೆಲರ್ಸ್​, ಚಿನ್ನದ ಹೂಡಿಕೆ ಸ್ಕೀಂನಲ್ಲಿ ಗ್ರಾಹಕರಿಂದ ಲಕ್ಷಾಂತರ ರೂಪಾಯಿ ಹಣ ಪಡೆದುಕೊಂಡಿರುವ ವಿಚಾರ ಬಹಿರಂಗವಾಗಿದ್ದು, ಗ್ರಾಹಕರಿಂದ ಪಡೆದುಕೊಂಡಿರುವ ಹಣ ಸುಮಾರು 100 ಕೋಟಿಗೂ ಹೆಚ್ಚಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ:‘ನನ್ನ ಮಗನಿಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಂತೆ ಅನಿಸುತ್ತಿದೆ’; ಪ್ರಕಾಶ್ ರಾಜ್ ಹೀಗೆ ಹೇಳಿದ್ದು ಏಕೆ?

ಪ್ರಣವ್ ಜ್ಯುವೆಲರ್ಸ್​ನ ಮಳಿಗೆಗಳು ಇದೇ ಅಕ್ಟೋಬರ್​ನಲ್ಲಿ ಬಂದ್ ಆದವು. ಪ್ರಣವ್ ಜ್ಯುವೆಲರ್ಸ್ ವಿರುದ್ಧ ಸರಣಿ ದೂರುಗಳು ದಾಖಲಾದ ಬೆನ್ನಲ್ಲೆ ಅವರ ಮಾಲೀಕರಾದ ಮದನ್ ಹಾಗೂ ಅವರ ಪತ್ನಿಯ ವಿರುದ್ಧ ಲುಕೌಟ್ ನೊಟೀಸ್ ಜಾರಿ ಆಗಿದೆ. ಪ್ರಕರಣದ ಕುರಿತಾಗಿ ನಿನ್ನೆ (ನವೆಂಬರ್ 22) ಹೇಳಿಕೆ ಬಿಡುಗಡೆ ಮಾಡಿರುವ ಇಡಿ, ಹೆಚ್ಚಿನ ಲಾಭದ ಆಸೆ ತೋರಿಸಿ ಸುಮಾರು 100 ಕೋಟಿಗೂ ಹೆಚ್ಚು ಹಣವನ್ನು ಪ್ರಣವ್ ಜ್ಯುವೆಲರ್ಸ್ ಗ್ರಾಹಕರಿಂದ ಸಂಗ್ರಹಿಸಿದೆ. ಲಾಭ ಇರಲಿ ಹೂಡಿಕೆ ಮಾಡಿರುವ ಹಣವನ್ನು ಸಹ ಯಾರಿಗೂ ಮರಳಿ ನೀಡಿಲ್ಲ ಈ ಸಂಸ್ಥೆ.

ಕೇಂದ್ರದ ಟೀಕಾಕಾರರಾಗಿರುವ ಪ್ರಕಾಶ್ ರೈ, ಕೇಂದ್ರವನ್ನು ಟೀಕಿಸುವ ಭರದಲ್ಲಿ ಆಗಾಗ್ಗೆ ಇಡಿ, ಸಿಬಿಐಗಳ ಹೆಸರು ಬಳಸಿರುವುದುಂಟು. ಈಗ ಅದೇ ಇಡಿಯು ಪ್ರಕಾಶ್ ರೈಗೆ ಸಮನ್ಸ್ ಜಾರಿ ಮಾಡಿದೆ. ಈ ವಂಚನೆ ಪ್ರಕರಣದಲ್ಲಿ ಪ್ರಕಾಶ್ ರೈ ಅನ್ನು ಸಹ ಆರೋಪಿಯನ್ನಾಗಿಸಲಾಗುತ್ತದೆಯೇ ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ