‘ಶಿವಣ್ಣ, ಪ್ರಕಾಶ್ ರೈ ಕ್ಷಮೆಯನ್ನು ಸ್ವೀಕರಿಸಲು ಸಾಧ್ಯವಿಲ್ಲ’; ಸಿದ್ದಾರ್ಥ್

ಈ ಘಟನೆಯನ್ನು ಪ್ರಕಾಶ್ ರಾಜ್ ಹಾಗೂ ಶಿವರಾಜ್​ಕುಮಾರ್ ಖಂಡಿಸಿದರು. ಸೋಶಿಯಲ್ ಮೀಡಿಯಾ ಮೂಲಕ ಪ್ರಕಾಶ್ ರಾಜ್ ಧ್ವನಿ ಎತ್ತಿದ್ದರು. ಶಿವರಾಜ್​ಕುಮಾರ್ ಅವರು ಬಂದ್ ದಿನ ಈ ಘಟನೆಯನ್ನು ಖಂಡಿಸಿದರು. ಕನ್ನಡಿಗರ ಪರವಾಗಿ ಇವರು ಕ್ಷಮೆ ಕೇಳಿದರು. ಇದಕ್ಕೆ ಸಿದ್ದಾರ್ಥ್ ಸಂತಸ ವ್ಯಕ್ತಪಡಿಸಿದ್ದಾರೆ.

‘ಶಿವಣ್ಣ, ಪ್ರಕಾಶ್ ರೈ ಕ್ಷಮೆಯನ್ನು ಸ್ವೀಕರಿಸಲು ಸಾಧ್ಯವಿಲ್ಲ’; ಸಿದ್ದಾರ್ಥ್
ಪ್ರಕಾಶ್-ಸಿದ್ದಾರ್ಥ್-ಶಿವಣ್ಣ
Follow us
|

Updated on:Oct 07, 2023 | 6:36 AM

ಕೆಲ ದಿನಗಳ ಹಿಂದೆ ತಮಿಳು ನಟ ಸಿದ್ದಾರ್ಥ್ ಅವರು ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಕೆಲ ಕನ್ನಡ ಪರ ಸಂಘಟನೆಗಳು ಅವರ ಸುದ್ದಿಗೋಷ್ಠಿಗೆ ಅಡಚಣೆ ಉಂಟು ಮಾಡಿದ್ದರು. ಇದರಿಂದ ಅವರು ಸುದ್ದಿಗೋಷ್ಠಿಯಿಂದ ಅರ್ಧಕ್ಕೆ ಹೊರ ನಡೆಯಬೇಕಾದ ಪರಿಸ್ಥಿತಿ ಬಂದೊದಗಿತ್ತು. ಈ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಪ್ರಕಾಶ್ ರಾಜ್ (Prakash Raj) ಹಾಗೂ ಶಿವರಾಜ್​ಕುಮಾರ್ ಅವರ ಸಿದ್ದಾರ್ಥ್​ಗೆ ಕ್ಷಮೆ ಕೇಳಿದರು. ಈ ಕುರಿತು ಸಿದ್ದಾರ್ಥ್ ಮಾತನಾಡಿದ್ದಾರೆ. ಅವರ ಕ್ಷಮೆಯನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರದಲ್ಲಿ ಭಾರೀ ಪ್ರತಿಭಟನೆಗಳು ನಡೆದವು. ತಮಿಳು ಸಿನಿಮಾಗಳನ್ನು ಬ್ಯಾನ್ ಮಾಡಬೇಕು ಎನ್ನುವ ಆಗ್ರಹ ಕೂಡ ಕೇಳಿ ಬಂತು. ಈ ಸಂದರ್ಭದಲ್ಲಿ ಎಸ್​ಆರ್​ವಿ ಥಿಯೇಟರ್​ನಲ್ಲಿ ಸಿದ್ದಾರ್ಥ್ ಸುದ್ದಿಗೋಷ್ಠಿ ಆಯೋಜನೆ ಮಾಡಿದ್ದರು. ಅವರು ನಟಿಸಿ, ನಿರ್ಮಿಸಿರುವ ‘ಚಿಕ್ಕು’ ಸಿನಿಮಾದ ಶೋ ಕೂಡ ಇತ್ತು. ಆದರೆ, ಕನ್ನಡ ಪರ ಹೋರಾಟಗಾರರು ಸುದ್ದಿಗೋಷ್ಠಿಗೆ ಅಡಚಣೆ ಮಾಡಿದರು. ಹೀಗಾಗಿ, ಸಿದ್ದಾರ್ಥ್ ಅವರು ಅರ್ಧಕ್ಕೆ ಹೊರ ನಡೆದರು.

ಈ ಘಟನೆಯನ್ನು ಪ್ರಕಾಶ್ ರಾಜ್ ಹಾಗೂ ಶಿವರಾಜ್​ಕುಮಾರ್ ಖಂಡಿಸಿದರು. ಸೋಶಿಯಲ್ ಮೀಡಿಯಾ ಮೂಲಕ ಪ್ರಕಾಶ್ ರಾಜ್ ಧ್ವನಿ ಎತ್ತಿದ್ದರು. ಶಿವರಾಜ್​ಕುಮಾರ್ ಅವರು ಬಂದ್ ದಿನ ಈ ಘಟನೆಯನ್ನು ಖಂಡಿಸಿದರು. ಕನ್ನಡಿಗರ ಪರವಾಗಿ ಇವರು ಕ್ಷಮೆ ಕೇಳಿದರು. ಇದಕ್ಕೆ ಸಿದ್ದಾರ್ಥ್ ಸಂತಸ ವ್ಯಕ್ತಪಡಿಸಿದ್ದಾರೆ.

‘ಶಿವರಾಜ್​ಕುಮಾರ್ ಹಾಗೂ ಪ್ರಕಾಶ್ ರಾಜ್ ಅವರ ಕ್ಷಮೆಯನ್ನು ಸ್ವೀಕರಿಸಲು ಸಾಧ್ಯವಿಲ್ಲ. ಆದರೆ, ಅವರು ಯಾವುದೇ ತಪ್ಪು ಮಾಡಿಲ್ಲ. ಇದು ಅವರಿಂದ ಆದ ದೋಷ ಕೂಡ ಅಲ್ಲ. ಅವರು ಕ್ಷಮೆ ಕೇಳುವ ಅಗತ್ಯವೇ ಇರಲಿಲ್ಲ. ಆದರೂ ಅವರು ಸಾರಿ ಎಂದರು. ಇದಕ್ಕೆ ಅವರ ಉದಾರ ಹೃದಯವೇ ಕಾರಣ. ಇದಕ್ಕೆ ನಾನು ಅವರಿಗೆ ಧನ್ಯವಾದ ಹೇಳುತ್ತೇನೆ’ ಎಂದಿದ್ದಾರೆ ಸಿದ್ದಾರ್ಥ್.

ಇದನ್ನೂ ಓದಿ: ‘​ನಮ್ಮ ಇಂಡಸ್ಟ್ರಿ ಪರವಾಗಿ ಸಿದ್ದಾರ್ಥ್​ಗೆ ನಾನು ಕ್ಷಮೆ ಕೇಳುತ್ತೇನೆ’; ನೇರ ಮಾತಲ್ಲಿ ಹೇಳಿದ ಶಿವಣ್ಣ

‘ಚಿಕ್ಕು’ ಪ್ರದರ್ಶನ ಕಾಣುವ ಸಂದರ್ಭದಲ್ಲಿ ಕರ್ನಾಟಕದಲ್ಲಿ ಬಂದ್ ಇತ್ತು ಎಂದು ಕೆಲವರು ಸುದ್ದಿ ಹಬ್ಬಿಸಿದ್ದರು. ಇದಕ್ಕೆ ಅವರು ಸ್ಪಷ್ಟನೆ ನೀಡಿದ್ದಾರೆ. ನಮ್ಮ ಸಿನಿಮಾ ರಿಲೀಸ್ ಆದಾಗ ಬಂದ್ ಇರಲಿಲ್ಲ ಎಂದಿದ್ದಾರೆ ಸಿದ್ದಾರ್ಥ್.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 3:06 pm, Fri, 6 October 23

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!