ಮುಂಬೈ ಬೀದಿಗಳಲ್ಲಿ ಯಶ್ ಮುಖ ಮುಚ್ಚಿಕೊಂಡು ಓಡಾಡಿದ್ದಕ್ಕೆ ‘ಟಾಕ್ಸಿಕ್ ಟೀಸರ್‌ನಲ್ಲಿ ಸಿಕ್ತು ಉತ್ತರ
‘ಟಾಕ್ಸಿಕ್' ಸಿನಿಮಾ ಟೀಸರ್ ಬಿಡುಗಡೆಯಾಗಿ ಯಶ್ ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದೆ. ಟೀಸರ್‌ನಲ್ಲಿ ಯಶ್ ವಿವಿಧ ಗೆಟಪ್‌ಗಳಲ್ಲಿ ಕಾಣಿಸಿಕೊಂಡಿದ್ದು, ಯಂಗ್ ಲುಕ್ ವಿಶೇಷ ಗಮನ ಸೆಳೆದಿದೆ. ಕೆಲವು ವಾರಗಳ ಹಿಂದೆ ಯಶ್ ಮುಖ ಮುಚ್ಚಿಕೊಂಡು ಓಡಾಡಿದ್ದು ಏಕೆ ಎಂಬ ಪ್ರಶ್ನೆಗೆ ಟೀಸರ್ ಉತ್ತರ ನೀಡಿದೆ. ಮುಂದಿನ ಸಿನಿಮಾದ ಲುಕ್ ಗೌಪ್ಯವಾಗಿಡಲು ಸೆಲೆಬ್ರಿಟಿಗಳು ಬಳಸುವ ಇದೇ ತಂತ್ರವನ್ನು ಯಶ್ ಕೂಡ ಬಳಸಿದ್ದಾರೆ.

‘ಟಾಕ್ಸಿಕ್’ ಸಿನಿಮಾ ಟೀಸರ್ ರಿಲೀಸ್ ಆಗಿ ಸೆನ್ಸೇಷನ್ ಸೃಷ್ಟಿಸಿದೆ. ಯಶ್ (Yash) ಅಭಿಮಾನಿಗಳು ಟೀಸರ್ನ ಬಹುವಾಗಿ ಇಷ್ಟಪಟ್ಟಿದ್ದಾರೆ. ಯಶ್ ಅವರು ವಿವಿಧ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಲುಕ್ ಗಮನ ಸೆಳೆದಿದೆ. ಇದರಲ್ಲಿ ಯಶ್ ಅವರು ಯಂಗ್ ಲುಕ್ನಲ್ಲಿ ಕಾಣಿಸಿಕೊಂಡ ಲುಕ್ ಕೂಡ ಗಮನ ಸೆಳೆದಿದೆ. ಯಶ್ ಅವರು ಈ ಮೊದಲು ಮುಖವನ್ನು ಮುಚ್ಚಿಕೊಂಡು ಓಡಾಡಿದ್ದರು. ಅದು ಏಕೆ ಎಂಬ ಪ್ರಶ್ನೆ ಮೂಡಿತ್ತು. ಟಾಕ್ಸಿಕ್ ಟೀಸರ್ ಮೂಲಕ ಅದಕ್ಕೆ ಉತ್ತರ ಸಿಕ್ಕಂತೆ ಆಗಿದೆ.
ಕೆಲ ವಾರಗಳ ಹಿಂದೆ ಯಶ್ ಮುಂಬೈ ಬೀದಿಗಳಲ್ಲಿ ಕಾಣಿಸಿಕೊಂಡಿದ್ದರು. ಆಗ ಅವರು ಮುಖವನ್ನು ಬಟ್ಟೆಯಿಂದ ಮುಚ್ಚಿಕೊಂಡಿದ್ದರು. ಈ ವಿಡಿಯೋ ಗಮನ ಸೆಳೆಯಿತು. ಯಶ್ ಅವರು ಯಾವಾಗಲೂ ಹೀಗೆ ಕಾಣಿಸಿಕೊಂಡವರಲ್ಲ. ಅವರು ಈ ರೀತಿ ಮಾಡಿದ್ದೇಕೆ ಎಂಬ ಪ್ರಶ್ನೆ ಮೂಡಿತ್ತು. ಅವರು ಗಡ್ಡ ಹಾಗೂ ಕೂದಲಿಗೆ ಕತ್ತರಿ ಹಾಕಿರಬಹುದು ಎಂಬುದು ಅನೇಕರ ಊಹೆ ಆಗಿತ್ತು. ಆ ಊಹೆ ನಿಜವಾಗಿದೆ.
ಯಶ್ ಅವರು ಯಂಗ್ ವರ್ಷನ್ ಅಲ್ಲಿ ಕಾಣಿಸಿಕೊಳ್ಳುವ ಉದ್ದೇಶದಿಂದ ಗಡ್ಡ ಹಾಗೂ ತಲೆಕೂದಲು ಕತ್ತರಿಸಿದ್ದರು ಎಂಬುದು ಟೀಸರ್ ನೋಡಿದ ಬಳಿಕ ಪಕ್ಕಾ ಆಗಿದೆ. ಒಂದಷ್ಟು ಎಡಿಟ್ಗಳನ್ನು ಮಾಡಿ ಟೀಸರ್‌ನಲ್ಲಿ ಮತ್ತಷ್ಟು ಯಂಗ್ ಆಗಿ ಕಾಣುವಂತೆ ಮಾಡಲಾಗಿದೆ. ಇದು ಗಮನ ಸೆಳೆದಿದೆ.
Now u got the answer y he covered his face 😭😭 is not it Guysss #ToxicTeaser #Toxic #ToxicOnMARCH19th #ToxicTheMovie #DaddyIsHome @TheNameIsYash . pic.twitter.com/fgfTNb65mH
— 𝗬𝗮𝘀𝗵𝗶𝗸𝗮🪷ᵗᵒˣⁱᶜ ¹⁹ ⁰³ ²⁶ (@iamyashikarsy) February 20, 2026
ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಈ ಟೆಕ್ನಿಕ್ನ ಫಾಲೋ ಮಾಡುತ್ತಾರೆ. ಮುಂದಿನ ಸಿನಿಮಾದ ಲುಕ್ ರಿವೀಲ್ ಆಗಬಾರದು ಎಂಬ ಕಾರಣಕ್ಕೆ ಈ ರೀತಿಯಲ್ಲಿ ಮುಖಕ್ಕೆ ಬಟ್ಟೆ ಧರಿಸಿ ಓಡಾಡುತ್ತಾರೆ. ಯಶ್ ಕೂಡ ಇದೇ ತಂತ್ರ ಬಳಸಿದ್ದಾರೆ. ಯಶ್ ಅವರು ಸದ್ಯ ಯಾವ ಲುಕ್ನಲ್ಲಿ ಇದ್ದಾರೆ ಎಂಬ ಕುತೂಹಲ ಅಭಿಮಾನಿಗಳಿಗೆ ಮೂಡಿದೆ.
ಇದನ್ನೂ ಓದಿ: ‘ವಿಂಟೇಜ್ ಯಶ್ ಈಸ್ ಬ್ಯಾಕ್’; ‘ಟಾಕ್ಸಿಕ್ ಟೀಸರ್ ನೋಡಿ ಯಶ್ ಫ್ಯಾನ್ಸ್ ಖುಷ್
‘ಟಾಕ್ಸಿಕ್’ ಚಿತ್ರವನ್ನು ಗೀತು ಮೋಹನ್ದಾಸ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ಕೆವಿಎನ್ ನಿರ್ಮಾಣ ಸಂಸ್ಥೆ ಬಂಡವಾಳ ಹೂಡುತ್ತಾ ಇದೆ. ಯಶ್ ಕೂಡ ಚಿತ್ರದ ನಿರ್ಮಾಪಕ. ಈ ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಶಿ ಮೊದಲಾದವರು ನಟಿಸಿದ್ದಾರೆ. ಮಾರ್ಚ್ 19ಕ್ಕೆ ಸಿನಿಮಾ ತೆರೆಗೆ ಬರುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




