AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನನ್ನ ಕರಿಯರ್ ಪ್ಲಾನ್ ಬೇರೆಯೇ ಇದೆ’; ಬಿಗ್ ಬಾಸ್ ಎಂಟ್ರಿ ಬಗ್ಗೆ ರಂಜನಿ ರಾಘವನ್ ಸ್ಪಷ್ಟನೆ

Ranjani Raghavan: ಪ್ರತಿ ವರ್ಷ ಬಿಗ್ ಬಾಸ್ ಬಂದಾಗಲೂ ಒಂದಷ್ಟು ಸೆಲೆಬ್ರಿಟಿಗಳ ಹೆಸರು ಕೇಳಿ ಬರುತ್ತದೆ. ಇದರಲ್ಲಿ ಕೆಲವು ಸುಳ್ಳಾದರೆ, ಇನ್ನೂ ಕೆಲವು ನಿಜ ಆಗಿರುತ್ತದೆ. ಈ ಬಾರಿ ‘ಬಿಗ್ ಬಾಸ್ ಕನ್ನಡ ಸೀಸನ್ 10’ ಆರಂಭಕ್ಕೆ ಇನ್ನೇನು ಕೆಲವೇ ದಿನ ಇದೆ. ಈ ಸಂದರ್ಭದಲ್ಲಿ ಹಲವರ ಹೆಸರುಗಳು ಓಡಾಡುತ್ತಿವೆ. ಆ ಪೈಕಿ ರಂಜನಿ ರಾಘವನ್ ಹೆಸರು ಕೂಡ ಇದೆ.

‘ನನ್ನ ಕರಿಯರ್ ಪ್ಲಾನ್ ಬೇರೆಯೇ ಇದೆ’; ಬಿಗ್ ಬಾಸ್ ಎಂಟ್ರಿ ಬಗ್ಗೆ ರಂಜನಿ ರಾಘವನ್ ಸ್ಪಷ್ಟನೆ
ರಂಜನಿ ರಾಘವನ್
ರಾಜೇಶ್ ದುಗ್ಗುಮನೆ
|

Updated on:Oct 06, 2023 | 9:04 AM

Share

ನಟಿ ರಂಜನಿ ರಾಘವನ್ ಹೆಸರು ಇತ್ತೀಚೆಗೆ ಸಾಕಷ್ಟು ಚರ್ಚೆಯಲ್ಲಿದೆ. ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10’ಗೆ (BBK 10) ಎಂಟ್ರಿ ಕೊಡುತ್ತಾರೆ ಎಂದು ಸುದ್ದಿ ಹಬ್ಬಿತ್ತು. ಇದಕ್ಕೆ ಸ್ವತಃ ರಂಜನಿ ರಾಘವನ್ ಅವರು ಸ್ಪಷ್ಟನೆ ನೀಡಿದ್ದಾರೆ. ಈ ವಿಚಾರ ಸುಳ್ಳು ಎಂದು ಅವರು ಹೇಳಿಕೆ ನೀಡಿದ್ದಾರೆ. ಬಿಗ್ ಬಾಸ್​ಗೆ ಹೋಗುತ್ತಿರುವುದು ಸುಳ್ಳು ಎಂದಿರುವ ಅವರು, ಕರಿಯರ್​ನಲ್ಲಿ ಬೇರೆಯದೇ ಪ್ಲ್ಯಾನ್ ಇರುವುದಾಗಿ ಸ್ಪಷ್ಟಪಡಿಸಿದ್ದಾರೆ. ಅವರ ಕಡೆಯಿಂದಲೇ ಸ್ಪಷ್ಟನೆ ಸಿಕ್ಕಿರುವುದಕ್ಕೆ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಅವರು ದೊಡ್ಮನೆಗೆ ಹೋಗುತ್ತಿಲ್ಲ ಎನ್ನುವ ವಿಚಾರ ಕೆಲವರಿಗೆ ಬೇಸರ ಮೂಡಿಸಿದೆ.

ಪ್ರತಿ ವರ್ಷ ಬಿಗ್ ಬಾಸ್ ಬಂದಾಗಲೂ ಒಂದಷ್ಟು ಸೆಲೆಬ್ರಿಟಿಗಳ ಹೆಸರು ಕೇಳಿ ಬರುತ್ತದೆ. ಇದರಲ್ಲಿ ಕೆಲವು ಸುಳ್ಳಾದರೆ, ಇನ್ನೂ ಕೆಲವು ನಿಜ ಆಗಿರುತ್ತದೆ. ಈ ಬಾರಿ ‘ಬಿಗ್ ಬಾಸ್ ಕನ್ನಡ ಸೀಸನ್ 10’ ಆರಂಭಕ್ಕೆ ಇನ್ನೇನು ಕೆಲವೇ ದಿನ ಇದೆ. ಈ ಸಂದರ್ಭದಲ್ಲಿ ಹಲವರ ಹೆಸರುಗಳು ಓಡಾಡುತ್ತಿವೆ. ಆ ಪೈಕಿ ರಂಜನಿ ರಾಘವನ್ ಹೆಸರು ಕೂಡ ಇದೆ. ಈ ಬಗ್ಗೆ ಅವರು ಹೊಸ ಪೋಸ್ಟ್ ಹಾಕಿದ್ದಾರೆ.

‘ನಾನು ಬಿಗ್ ಬಾಸ್​ಗೆ ಹೋಗ್ತಾ ಇಲ್ಲ. ಸುಳ್ಳು ಸುದ್ದಿ. ನನ್ನ ಕರಿಯರ್ ಪ್ಲಾನ್ ಬೇರೆ ಇದೆ. ಸೂಕ್ತ ಸಮಯದಲ್ಲಿ ತಿಳಿಸುವೆ. ನಿಮ್ಮ ಪ್ರೀತಿ-ಪ್ರೋತ್ಸಾಹ ಹೀಗೆಯೇ ಇರಲಿ’ ಎಂದು ರಂಜನಿ ರಾಘವನ್ ಅವರು ಮನವಿ ಮಾಡಿದ್ದಾರೆ. ಇದಕ್ಕೆ ಅನೇಕರು ಕಮೆಂಟ್ ಮಾಡಿದ್ದಾರೆ. ‘ಇದು ಒಳ್ಳೆಯ ನಿರ್ಧಾರ’ ಎಂದು ಕೆಲವರು ಹೇಳಿದ್ದಾರೆ.

ಇದನ್ನೂ ಓದಿ: ‘ನಿಮ್ಮ ಅಂದ ಮತ್ತಷ್ಟು ಹೆಚ್ಚಾಯ್ತು’; ರಂಜನಿ ರಾಘವನ್ ಹೊಸ ಫೋಟೋಗೆ ಫ್ಯಾನ್ಸ್ ಕಮೆಂಟ್

ರಂಜನಿ ರಾಘವನ್ ಅವರು ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಕಿರುತೆರೆ ಮೂಲಕ ರಂಜನಿ ಫೇಮಸ್ ಆದರು. ಸಿನಿಮಾಗಳಲ್ಲೂ ರಂಜನಿ ನಟಿಸಿದರು. ಅವರು ಕಥೆಗಾರ್ತಿ ಕೂಡ ಹೌದು. ಅವರು ಮುಂದಿನ ಪ್ಲಾನ್ ಬಗ್ಗೆ ಶೀಘ್ರವೇ ಅಪ್​ಡೇಟ್ ಸಿಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ಭಾನುವಾರ (ಅಕ್ಟೋಬರ್ 8) ಬಿಗ್ ಬಾಸ್ ಆರಂಭ ಆಗುತ್ತಿದೆ. ಕಿಚ್ಚ ಸುದೀಪ್ ಇದರ ನೇತೃತ್ವ ವಹಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:35 am, Fri, 6 October 23