AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂಟರೆಸ್ಟಿಂಗ್​ ಟೀಸರ್​ನಲ್ಲಿ ರಿವೀಲ್​ ಆಯ್ತು ‘ಅನ್​ಲಾಕ್​ ರಾಘವ’ನ ಮೂಡ್​; ಏನಿದರ ವಿಶೇಷ?

‘ಅನ್​ಲಾಕ್​ ರಾಘವ’ ಸಿನಿಮಾದ ‘ಮೂಡ್ಸ್ ಆಫ್ ರಾಘವ’ ಟೀಸರ್​ನಲ್ಲಿ ಕಥೆಯ ಎಮೋಷನ್​ಗಳನ್ನು ತೋರಿಸಲಾಗಿದೆ. ಪ್ರೀತಿ, ಖುಷಿ, ಕೋಪ​ದಲ್ಲಿ ರಾಘವ ಹೇಗೆಲ್ಲ ಇರುತ್ತಾನೆ ಎಂಬುದರ ಝಲಕ್​ ಈ ಟೀಸರ್​ನಲ್ಲಿ ಕಾಣಿಸಿದೆ. 24 ಗಂಟೆ ಕಳೆಯುವುದರೊಳಗೆ ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದ್ದು, ಸಿನಿಪ್ರಿಯರ ಮೆಚ್ಚುಗೆ ಗಳಿಸಿದೆ.

ಇಂಟರೆಸ್ಟಿಂಗ್​ ಟೀಸರ್​ನಲ್ಲಿ ರಿವೀಲ್​ ಆಯ್ತು ‘ಅನ್​ಲಾಕ್​ ರಾಘವ’ನ ಮೂಡ್​; ಏನಿದರ ವಿಶೇಷ?
ಮಿಲಿಂದ್​ ಗೌತಮ್​
Follow us
ಮದನ್​ ಕುಮಾರ್​
|

Updated on: Oct 05, 2023 | 6:28 PM

ಒಳ್ಳೆಯ ಸಿನಿಮಾ ಮಾಡುವುದು ಎಷ್ಟು ಮುಖ್ಯವೋ ಪ್ರೇಕ್ಷಕರ ಗಮನ ಸೆಳೆಯುವುದು ಕೂಡ ಅಷ್ಟೇ ಮುಖ್ಯ. ಅದಕ್ಕಾಗಿ ಚಿತ್ರರಂಗದಲ್ಲಿ ಹಲವು ಬಗೆಯ ಪ್ರಯೋಗಗಳು ನಡೆಯುತ್ತವೆ. ರಿಲೀಸ್​ಗೂ ಮುನ್ನವೇ ಹಲವಾರು ಬಗೆಯಲ್ಲಿ ಹೈಪ್​ ಹೆಚ್ಚಿಸುವ ಕೆಲಸ ಆಗುತ್ತಿದೆ. ಈಗ ಕನ್ನಡದ ‘ಅನ್​ಲಾಕ್​ ರಾಘವ’ (Unlock Raghava) ಸಿನಿಮಾ ತಂಡ ಕೂಡ ಅಂತಹ ಪ್ರಯತ್ನಗಳನ್ನು ಮಾಡುತ್ತಿದೆ. ಸೆಟ್ಟೇರಿದ ದಿನದಿಂದಲೂ ಈ ಸಿನಿಮಾ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಚಿತ್ರದಲ್ಲಿ ಒಂದಷ್ಟು ವಿಶೇಷತೆಗಳಿವೆ. ಅವುಗಳ ಸಾಲಿಗೆ ಇಂಟರೆಸ್ಟಿಂಗ್​ ಆದಂತಹ ಒಂದು ಟೀಸರ್​ ಕೂಡ ಸೇರ್ಪಡೆ ಆಗಿದೆ. ‘ಮೂಡ್ಸ್ ಆಫ್ ರಾಘವ’ (Moods Of Raghava) ಎಂಬ ಶೀರ್ಷಿಕೆಯಲ್ಲಿ ಟೀಸರ್​ ಬಿಡುಗಡೆ ಮಾಡಲಾಗಿದೆ.

‘ಅನ್​ಲಾಕ್​ ರಾಘವ’ ಸಿನಿಮಾದ ‘ಮೂಡ್ಸ್ ಆಫ್ ರಾಘವ’ ಟೀಸರ್​ನಲ್ಲಿ ಕಥೆಯ ಎಮೋಷನ್​ಗಳನ್ನು ತೋರಿಸಲಾಗಿದೆ. ಪ್ರೀತಿ, ಖುಷಿ, ಕೋಪ​ದಲ್ಲಿ ರಾಘವ ಹೇಗೆಲ್ಲ ಇರುತ್ತಾನೆ ಎಂಬುದರ ಝಲಕ್​ ಈ ಟೀಸರ್​ನಲ್ಲಿ ಕಾಣಿಸಿದೆ. ಅದಕ್ಕೆ ತಕ್ಕಂತೆಯೇ ಹಿನ್ನೆಲೆ ಸಂಗೀತ ಗಮನ ಸೆಳೆಯುತ್ತಿದೆ. ಅಕ್ಟೋಬರ್​ 4ರಂದು ಈ ಟೀಸರ್​ ಬಿಡುಗಡೆ ಆಗಿದೆ. 24 ಗಂಟೆ ಕಳೆಯುವುದರೊಳಗೆ ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ. ಆ ಮೂಲಕ ಸಿನಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ.

‘ಮೂಡ್ಸ್ ಆಫ್ ರಾಘವ’ ಟೀಸರ್​:

‘ಮಯೂರ ಮೋಷನ್ ಪಿಕ್ಚರ್ಸ್’ ಬ್ಯಾನರ್ ಮೂಲಕ ಮಂಜುನಾಥ್ ದಾಸೇಗೌಡ ಮತ್ತು ಗಿರೀಶ್ ಕುಮಾರ್ ಅವರು ಒಟ್ಟಾಗಿ ‘ಅನ್​ಲಾಕ್ ರಾಘವ’ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ದೀಪಕ್ ಮಧುವನಹಳ್ಳಿ ಅವರ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ರಾಜ್ಯ ಪ್ರಶಸ್ತಿ ಹಾಗೂ ರಾಷ್ಟ್ರ ಪ್ರಶಸ್ತಿ ಪಡೆದಿರುವ ಡೈರೆಕ್ಟರ್​ ಸತ್ಯಪ್ರಕಾಶ್ ಅವರು ಈ ಸಿನಿಮಾಗೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಲವಿತ್ ಅವರು ಛಾಯಾಗ್ರಾಹಣ ಮಾಡಿದ್ದಾರೆ. ಅನೂಪ್ ಸೀಳಿನ್ ಸಂಗೀತ ನಿರ್ದೇಶಕ ಮತ್ತು ಅಜಯ್ ಕುಮಾರ್ ಅವರ ಸಂಕಲನ ಈ ಸಿನಿಮಾಗಿದೆ.

ಗರುಡ ಪುರಾಣ ಟೀಸರ್ ಬಿಡುಗಡೆ ಮಾಡಿದ ಅಶ್ವಿನಿ ಪುನೀತ್ ರಾಜ್​ಕುಮಾರ್

ಮಿಲಿಂದ್ ಗೌತಮ್​ ಅವರು ‘ಅನ್​ಲಾಕ್​ ರಾಘವ’ ಸಿನಿಮಾಗೆ ನಾಯಕ. ಅವರಿಗೆ ಜೋಡಿಯಾಗಿ ರೇಚಲ್ ಡೇವಿಡ್ ಅವರು ನಟಿಸಿದ್ದಾರೆ. ಅವಿನಾಶ್, ಸಾಧುಕೋಕಿಲ, ಶೋಭರಾಜ್, ವೀಣಾ ಸುಂದರ್, ರಮೇಶ್ ಭಟ್, ಸುಂದರ್, ಸಾಯಿ ಕುಡ್ಲ, ಧರ್ಮಣ್ಣ ಕಡೂರು, ಭೂಮಿ ಶೆಟ್ಟಿ, ಮೂಗೂರು ಸುರೇಶ್ ಸೇರಿದಂತೆ ಅನೇಕ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ‘ಅನ್​ಲಾಕ್​ ರಾಘವ’ ಸಿನಿಮಾದ ಹಾಡುಗಳಿಗೆ ಧನಂಜಯ್ ಮಾಸ್ಟರ್ ಮತ್ತು ಮುರಳಿ ಮಾಸ್ಟರ್ ನೃತ್ಯನಿರ್ದೇಶನ ಮಾಡಿದ್ದಾರೆ. ವಿನೋದ್ ಮಾಸ್ಟರ್, ಅರ್ಜುನ್ ಮಾಸ್ಟರ್ ಅವರು ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದಾರೆ. ಟೀಸರ್​ ನೋಡಿದ ನೆಟ್ಟಿಗರು ಪಾಸಿಟಿವ್​ ಆಗಿ ಕಮೆಂಟ್​ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Daily Devotional: ಬೂದುಗುಂಬಳ ಕಾಯಿಯ ಮಹತ್ವ ಹಾಗೂ ಅದರ ಉಪಯೋಗ ತಿಳಿಯಿರಿ
Daily Devotional: ಬೂದುಗುಂಬಳ ಕಾಯಿಯ ಮಹತ್ವ ಹಾಗೂ ಅದರ ಉಪಯೋಗ ತಿಳಿಯಿರಿ
Daily Horoscope: ಕೆಲಸದಲ್ಲಿನ ನಿಮ್ಮ ಚುರುಕುತನದಿಂದ ಮೆಚ್ಚುಗೆ ಗಳಿಸುವಿರಿ
Daily Horoscope: ಕೆಲಸದಲ್ಲಿನ ನಿಮ್ಮ ಚುರುಕುತನದಿಂದ ಮೆಚ್ಚುಗೆ ಗಳಿಸುವಿರಿ
ಜಾನಪದವೇ ಎಲ್ಲ ಕಲೆಗಳ ಮೂಲ, ಅದು ಜಾನಪದವಲ್ಲ ಜ್ಞಾನಪದ: ವೆಂಕಪ್ಪ
ಜಾನಪದವೇ ಎಲ್ಲ ಕಲೆಗಳ ಮೂಲ, ಅದು ಜಾನಪದವಲ್ಲ ಜ್ಞಾನಪದ: ವೆಂಕಪ್ಪ
ಜಪಾನ್​ನಲ್ಲಿ ಭಾರತದ ಮೊದಲ ಬುಲೆಟ್ ರೈಲಿನ ಪ್ರಾಯೋಗಿಕ ಸಂಚಾರ ಆರಂಭ
ಜಪಾನ್​ನಲ್ಲಿ ಭಾರತದ ಮೊದಲ ಬುಲೆಟ್ ರೈಲಿನ ಪ್ರಾಯೋಗಿಕ ಸಂಚಾರ ಆರಂಭ
ಐಪಿಎಲ್‌ನಲ್ಲಿ 7 ಸಾವಿರ ರನ್ ಪೂರೈಸಿದ ರೋಹಿತ್
ಐಪಿಎಲ್‌ನಲ್ಲಿ 7 ಸಾವಿರ ರನ್ ಪೂರೈಸಿದ ರೋಹಿತ್
ನೈಜೀರಿಯಾದ ಮೊಕ್ವಾ ನಗರದಲ್ಲಿ ಡ್ಯಾಂ ಕುಸಿದು ಭಾರೀ ಪ್ರವಾಹ; 111 ಜನ ಸಾವು
ನೈಜೀರಿಯಾದ ಮೊಕ್ವಾ ನಗರದಲ್ಲಿ ಡ್ಯಾಂ ಕುಸಿದು ಭಾರೀ ಪ್ರವಾಹ; 111 ಜನ ಸಾವು
‘ಕಮಲ್ ಹಾಸನ್​ನ ಪ್ರೀತಿಸುತ್ತೇವೆ, ಆದ್ರೆ ಅವರು ಮಾಡಿದ್ದು ತಪ್ಪು’: ವಸಿಷ್ಠ
‘ಕಮಲ್ ಹಾಸನ್​ನ ಪ್ರೀತಿಸುತ್ತೇವೆ, ಆದ್ರೆ ಅವರು ಮಾಡಿದ್ದು ತಪ್ಪು’: ವಸಿಷ್ಠ
ಹಂಚಿಕೆದಾರರಿಗೆ ನಷ್ಟವಾದರೆ ಕಮಲ್ ಹಾಸನ್​ನಿಂದ ವಸೂಲಿ ಮಾಡಲಿ: ನಾರಾಯಣಗೌಡ
ಹಂಚಿಕೆದಾರರಿಗೆ ನಷ್ಟವಾದರೆ ಕಮಲ್ ಹಾಸನ್​ನಿಂದ ವಸೂಲಿ ಮಾಡಲಿ: ನಾರಾಯಣಗೌಡ
ಶಿವಣ್ಣ ಆರೋಗ್ಯದಲ್ಲಿ ಏರುಪೇರಾಗಿದೆ, ಅವರನ್ನು ದಶಕಗಳಿಂದ ಬಲ್ಲೆ: ಸೋಮಣ್ಣ
ಶಿವಣ್ಣ ಆರೋಗ್ಯದಲ್ಲಿ ಏರುಪೇರಾಗಿದೆ, ಅವರನ್ನು ದಶಕಗಳಿಂದ ಬಲ್ಲೆ: ಸೋಮಣ್ಣ
ದುಬೈನಲ್ಲಿ ಪಾಕ್ ಕ್ರಿಕೆಟಗರಿಗೆ ಕೇರಳ ಸಮುದಾಯದವರಿಂದ ಅದ್ದೂರಿ ಸ್ವಾಗತ
ದುಬೈನಲ್ಲಿ ಪಾಕ್ ಕ್ರಿಕೆಟಗರಿಗೆ ಕೇರಳ ಸಮುದಾಯದವರಿಂದ ಅದ್ದೂರಿ ಸ್ವಾಗತ