‘ನಿಮ್ಮ ಅಂದ ಮತ್ತಷ್ಟು ಹೆಚ್ಚಾಯ್ತು’; ರಂಜನಿ ರಾಘವನ್ ಹೊಸ ಫೋಟೋಗೆ ಫ್ಯಾನ್ಸ್ ಕಮೆಂಟ್
ರಂಜನಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರನ್ನು ಸಾಂಪ್ರದಾಯಿಕ ಉಡುಗೆಯಲ್ಲಿ ನೋಡಲು ಅಭಿಮಾನಿಗಳು ಕಾದು ಕುಳಿತಿರುತ್ತಾರೆ. ಸದ್ಯ ಅವರು ಹಂಚಿಕೊಂಡಿರುವ ಹೊಸ ಫೋಟೋಗಳು ಸಖತ್ ವೈರಲ್ ಆಗುತ್ತಿದೆ. ಇದಕ್ಕೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಕ್ಕಿದೆ.
Updated on: Aug 26, 2023 | 2:06 PM

ನಟಿ ರಂಜನಿ ರಾಘವನ್ ಅವರು ಕಿರುತೆರೆ ಮೂಲಕ ಹೆಚ್ಚು ಫೇಮಸ್ ಆದವರು. ಈಗ ಅವರು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಟ್ರೆಡಿಷನಲ್ ಲುಕ್ನಲ್ಲಿ ಅವರು ಆಗಾಗ ಗಮನ ಸೆಳೆಯುತ್ತಾರೆ. ಅವರ ಹೊಸ ಫೋಟೋಗಳು ಸಖತ್ ವೈರಲ್ ಆಗುತ್ತಿದೆ.

ರಂಜನಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರನ್ನು ಸಾಂಪ್ರದಾಯಿಕ ಉಡುಗೆಯಲ್ಲಿ ನೋಡಲು ಅಭಿಮಾನಿಗಳು ಕಾದು ಕುಳಿತಿರುತ್ತಾರೆ. ಸದ್ಯ ಅವರು ಹಂಚಿಕೊಂಡಿರುವ ಹೊಸ ಫೋಟೋಗಳು ಸಖತ್ ವೈರಲ್ ಆಗುತ್ತಿದೆ. ಇದಕ್ಕೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಕ್ಕಿದೆ.

ಆಗಸ್ಟ್ 25ರಂದು ಎಲ್ಲಾ ಕಡೆಗಳಲ್ಲಿ ವರಮಹಾಲಕ್ಷ್ಮಿ ಹಬ್ಬ ಆಚರಿಸಲಾಗಿದೆ. ಈ ಹಬ್ಬಕ್ಕಾಗಿ ಸೀರೆ ಉಟ್ಟು ನಟಿಯರು ಮಿಂಚಿದ್ದಾರೆ. ರಂಜನಿ ಕೂಡ ಇದೇ ಹಬ್ಬಕ್ಕಾಗಿ ಈ ರೀತಿ ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದರು.

‘ಲಂಗ ಬ್ಲೌಸ್, ಸರ-ಬಳೆ ತೊಟ್ಟು ಹೂವು ಮುಡಿದು ರೆಡಿ ಆಗೋಕೇ ಟೈಮ್ ಆಗೋಯ್ತು. ಕ್ಯಾಪ್ಷನ್ ಕೂಡಾ ಹುಡುಕಬೇಕೇ?’ ಎಂದು ಅವರು ಈ ಫೋಟೋಗೆ ಅಡಿಬರಹ ನೀಡಿದ್ದಾರೆ. ಇದಕ್ಕೆ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡಿದ್ದಾರೆ.

‘ನಿಮ್ಮ ಅಂದ ಮತ್ತಷ್ಟು ಹೆಚ್ಚಿದೆ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು, ‘ಕ್ಯಾಪ್ಶನ್ ಬೇಡ. ನಿಮ್ಮ ನಗು ಸಾಕು’ ಎಂದು ಬರೆದುಕೊಂಡಿದ್ದಾರೆ. ಈ ಫೋಟೋಗೆ ಸಾವಿರಾರು ಲೈಕ್ಸ್ ಸಿಕ್ಕಿದೆ.

ರಂಜನಿ ಅವರು ‘ಪುಟ್ಟ ಗೌರಿ ಮದುವೆ’ ಧಾರಾವಾಹಿಯಲ್ಲಿ ಮೊದಲು ನಟಿಸಿದರು. ಅವರು ಮಾಡಿದ ಗೌರಿ ಪಾತ್ರ ಸಾಕಷ್ಟು ಗಮನ ಸೆಳೆಯಿತು. ಈ ಧಾರಾವಾಹಿ 2014-18ರವರೆಗೆ ಪ್ರಸಾರ ಕಂಡಿತು. ಆ ಬಳಿಕ ‘ಕನ್ನಡತಿ’ ಧಾರಾವಾಹಿಯಲ್ಲಿ ನಟಿಸಿದರು.

‘ಕನ್ನಡತಿ’ ಧಾರಾವಾಹಿಯಲ್ಲಿ ರಂಜನಿ ಮಾಡಿದ ಭುವನೇಶ್ವರಿ ಪಾತ್ರ ಗಮನ ಸೆಳೆಯಿತು. ಈ ಧಾರಾವಾಹಿ ಪೂರ್ಣಗೊಂಡ ಬಳಿಕ ಅವರು ಸಿನಿಮಾರಂಗದತ್ತ ಗಮನ ಹರಿಸುತ್ತಿದ್ದಾರೆ. ಪುಸ್ತಕಗಳನ್ನು ಕೂಡ ರಂಜನಿ ಬರೆದಿದ್ದಾರೆ.



















