ಮುಂದಿನ ಸಿನಿಮಾ ಬಗ್ಗೆ ಶೀಘ್ರವೇ ಅಪ್​ಡೇಟ್: ಯಶ್

Yash: ನಟ ಯಶ್ ಮುಂದಿನ ಸಿನಿಮಾ ಯಾವುದಾಗಿರಲಿದೆ ಎಂಬ ಬಗ್ಗೆ ಚರ್ಚೆ ಜೋರಾಗಿ ನಡೆಯುತ್ತಿದೆ. ಇತ್ತೀಚೆಗೆ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟ ಯಶ್ ತಮ್ಮ ಮುಂದಿನ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.

ಮುಂದಿನ ಸಿನಿಮಾ ಬಗ್ಗೆ ಶೀಘ್ರವೇ ಅಪ್​ಡೇಟ್: ಯಶ್
ಯಶ್
Follow us
ಮಂಜುನಾಥ ಸಿ.
|

Updated on: Nov 23, 2023 | 3:49 PM

ನಟ ಯಶ್ (Yash) ಮುಂದಿನ ಸಿನಿಮಾ ಬಗ್ಗೆ ಕರ್ನಾಟಕದಲ್ಲಿ ಮಾತ್ರವಲ್ಲ ಪ್ಯಾನ್ ಇಂಡಿಯಾ (Pan India) ಲೆವೆಲ್​ನಲ್ಲಿ ಕುತೂಹಲವಿದೆ. ‘ಕೆಜಿಎಫ್ 2’ ಸಿನಿಮಾ ಮೂಲಕ ಮ್ಯಾಜಿಕ್ ಮಾಡಿರುವ ಯಶ್ ಮುಂದೆ ಏನು ಮಾಡಲಿದ್ದರೆ. ‘ಕೆಜಿಎಫ್’ಗಿಂತಲೂ ಬೃಹತ್ ಆದದನ್ನು ನೀಡಬಹುದೇ? ಎಂಬ ಕಾತರ ಸಿನಿಮಾ ಪ್ರೇಮಿಗಳಿಗೆ. ಅದಕ್ಕೆ ತಕ್ಕಂತೆ ಯಶ್ ಸಹ ತಮ್ಮ ಮುಂದಿನ ಸಿನಿಮಾ ಘೋಷಣೆ ಮಾಡಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿದ್ದಾರೆ. ಯಶ್ ಮೌನವಾಗಿರುವ ಕಾರಣದಿಂದ ಅವರ ಸಿನಿಮಾಗಳ ಬಗ್ಗೆ ಗಾಳಿ ಸುದ್ದಿಗಳು ಸಹ ತುಸು ಗಟ್ಟಿಯಾಗಿಯೇ ಹರಿದಾಡುತ್ತಿವೆ.

ಆದರೆ ಇದೀಗ ಯಶ್, ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ತಮ್ಮ ಮುಂದಿನ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ‘‘ನನಗೆ ನಿಮ್ಮ ಕಾತರ ಅರ್ಥವಾಗುತ್ತದೆ. ನನ್ನನ್ನು ದೊಡ್ಡದಾಗಿ ಬೆನ್ನುತಟ್ಟಿದ್ದೀರ. ಆದರೆ ನಾನು ಸುಮ್ಮನೆ ಕೂತಿಲ್ಲ, ನಾನು ರಿಲ್ಯಾಕ್ಸ್ ಆಗುತ್ತಿಲ್ಲ, ಬದಲಿಗೆ ದೊಡ್ಡ ಮಟ್ಟದ ಕೆಲಸಕ್ಕೆ ಸಜ್ಜಾಗುತ್ತಿದ್ದೇನೆ. ಸಾಧಾರಣವಾದ ಕೆಲಸ ಮಾಡಲು ನನಗೆ ಇಷ್ಟವಿಲ್ಲ, ಎಲ್ಲರೂ ಹೆಮ್ಮೆ ಪಡುವಂತಹಾ ಕೆಲಸವನ್ನೇ ಮಾಡುತ್ತೇನೆ’’ ಎಂದಿದ್ದಾರೆ.

‘‘ನಾನು ಯಾವತ್ತೂ ಸಿನಿಮಾ ಅನೌನ್ಸ್​ಮೆಂಟ್ ಎಂದು ಹೇಳಿಲ್ಲ. ಆದರೆ ಪ್ರತಿ ಹಬ್ಬ ಬಂದಾಗ, ಹುಟ್ಟುಹಬ್ಬ ಬಂದಾಗೆಲ್ಲ ಯಶ್ ಸಿನಿಮಾ ಘೋಷಣೆ ಎಂದು ಸುದ್ದಿ ಹಾಕ್ತಾರೆ ಇದರಿಂದ ಗೊಂದಲ ಸೃಷ್ಟಿಯಾಗಿದೆ. ಖಂಡಿತ ಸಿನಿಮಾ ಅಪ್​ಡೇಟ್ ಕೊಡುತ್ತೀನಿ, ಎಲ್ಲ ಊಟ ರೆಡಿಯಾದ ಮೇಲೆ ಬಡಿಸಿದರೇನೆ ಚೆಂದ. ಅರ್ಧಂಬರ್ಧ ಅಡುಗೆ ಮಾಡಿ ಊಟಕ್ಕೆ ಕರೆಯುವುದು ಸರಿ ಹೋಗುವುದಿಲ್ಲ. ನೀವೆಲ್ಲರೂ ಹೆಮ್ಮೆ ಪಡುವಂತಹಾ ಕೆಲಸ ಮಾಡುತ್ತೀನಿ’’ ಎಂದಿದ್ದಾರೆ ಯಶ್.

ಇದನ್ನೂ ಓದಿ:ದೀಪಾವಳಿಗೂ ಬರಲೇ ಇಲ್ಲ ಯಶ್ ಮುಂದಿನ ಸಿನಿಮಾ ಅಪ್​ಡೇಟ್​; ಬರ್ತ್​ಡೇ ಮೇಲೆ ನಿರೀಕ್ಷೆ

ಕಳೆದ ಏಳು ವರ್ಷದಲ್ಲಿ ಯಶ್ ನಟಿಸಿರುವ ಕೇವಲ ಎರಡು ಸಿನಿಮಾಗಳಷ್ಟೆ ಬಿಡುಗಡೆ ಆಗಿವೆ ಅದುವೇ ‘ಕೆಜಿಎಫ್ 1’ ಹಾಗೂ ‘ಕೆಜಿಎಫ್ 2’. ಇದೀಗ ಹೊಸ ಸಿನಿಮಾಕ್ಕೆ ಯಶ್ ಭರ್ಜರಿ ತಯಾರಿ ನಡೆಸಿದ್ದಾರೆ. ಹಾಲಿವುಡ್​ನ ತಂತ್ರಜ್ಞರನ್ನು ಕನ್ನಡಕ್ಕೆ ಕರೆತರುತ್ತಿದ್ದಾರೆ. ಈಗಾಗಲೇ ಕತೆಯನ್ನು ಲಾಕ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾವನ್ನು ನಿರ್ದೇಶಕಿಯೊಬ್ಬರು ನಿರ್ದೇಶನ ಮಾಡಲಿದ್ದಾರೆ. ಶ್ರೀಲಂಕಾನಲ್ಲಿ ಸಿನಿಮಾದ ಚಿತ್ರೀಕರಣ ನಡೆಯಲಿದೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ