‘ಚಟ್ಟ’ ಪೋಸ್ಟರ್ ಬಿಡುಗಡೆ: ನೀವಂದುಕೊಂಡಂತಲ್ಲ ಇದರ ಅರ್ಥ

New Movie: ಹೊಸಬರ ತಂಡವೊಂದು ‘ಚಟ್ಟ’ ಹೆಸರಿನ ಸಿನಿಮಾ ಮಾಡಲು ಮುಂದಾಗಿದೆ. ಆದರೆ ಸಿನಿಮಾದ ಹೆಸರು ಎಲ್ಲರೂ ಊಹಿಸುವ ಅರ್ಥವನ್ನು ಹೊಂದಿಲ್ಲ ಬದಲಿಗೆ ಬೇರೆಯದ್ದೇ ಅರ್ಥವನ್ನು ಹೊಂದಿದೆ.

‘ಚಟ್ಟ’ ಪೋಸ್ಟರ್ ಬಿಡುಗಡೆ: ನೀವಂದುಕೊಂಡಂತಲ್ಲ ಇದರ ಅರ್ಥ
ಚಟ್ಟ ಸಿನಿಮಾ
Follow us
ಮಂಜುನಾಥ ಸಿ.
|

Updated on: Nov 23, 2023 | 11:38 PM

ಸಿನಿಮಾಗಳ ಹೆಸರು ಚೆನ್ನಾಗಿದ್ದರಷ್ಟೆ ಸಿನಿಮಾದ ಬಗ್ಗೆ ಮೂಲಭೂತ ಕುತೂಹಲ ಪ್ರೇಕ್ಷಕರಿಗೆ ಉಂಟಾಗುತ್ತದೆ. ಸಿನಿಮಾದ ಹೆಸರು ಕ್ಯಾಚಿಯಾಗಿ, ಕುತೂಹಲ ಹುಟ್ಟಿಸುವಂತೆ ಇಲ್ಲವಾದರೆ ಸಿನಿಮಾ ತಂಡ ಮೊದಲ ಮೆಟ್ಟಿಲಲ್ಲೇ ಎಡವಿದಂತೆ. ಹಾಗಾಗಿ ಚಿತ್ರತಂಡಗಳು ಹೆಚ್ಚುವರಿ ಗಮನ ವಹಿಸಿ ಸಿನಿಮಾ ಪೋಸ್ಟರ್ (Movie Poster) ತಯಾರಿಸುತ್ತವೆ. ಸಿನಿಮಾ ಮೇಕರ್‌ಗಳು ಅದನ್ನೇ ಗಮನದಲ್ಲಿಟ್ಟುಕೊಂಡು ಏನಾದರೊಂದು ಹೊಸದನ್ನು ನೀಡಬೇಕೆನ್ನುವ ಆಶಯ ನಿರ್ಮಾಪಕರದ್ದು. ಈ ನಡುವೆ ಬಗೆಬಗೆಯ ಶೀರ್ಷಿಕೆಗಳ ಮೂಲಕವೇ ಸಿನಿಮಾಗಳು ಸೆಟ್ಟೇರುತ್ತಿವೆ. ಇದೀಗ ಅಂಥದ್ದೇ ವಿಭಿನ್ನ ಸಿನಿಮಾ ಮೂಲಕ ಗಮನ ಸೆಳೆಯುತ್ತಿದೆ ‘ಚಟ್ಟ’ ಸಿನಿಮಾ.

‘ಚಟ್ಟ’ ಹೀಗೊಂದು ವಿಭಿನ್ನ ಶೀರ್ಷಿಕೆ ಮೂಲಕ ಚಿತ್ರತಂಡವೊಂದು ಪ್ರೇಕ್ಷಕರ ಎದುರು ಬರಲು ಸಜ್ಜಾಗಿದೆ. ಈ ಚಿತ್ರತಂಡದ ಸಾರಥ್ಯ ವಹಿಸಿರುವುದು ನಿರ್ದೇಶಕ ಭಾನು ಪ್ರಕಾಶ್. ಸಹಾಯಕ ನಿರ್ದೇಶಕ ಆಗಿ ಗುರುತಿಸಿಕೊಂಡಿರುವ ಭಾನು ಪ್ರಕಾಶ್ ಇದೀಗ ಸಿನಿಮಾ ನಿರ್ದೇಶಕನ ಕ್ಯಾಪ್ ಧರಿಸಿದ್ದರಿ ಅಖಾಡಕ್ಕೆ ಇಳಿದಿದ್ದಾರೆ. ‘ಕೇರ್ ಆಫ್ ಫುಟ್ಬಾತ್’ ಸೇರಿದಂತೆ ಒಂದಷ್ಟು ಕನ್ನಡ ಹಾಗೂ ತೆಲುಗು ಇಂಡಸ್ಟ್ರೀಯಲ್ಲಿಯೂ ನಿರ್ದೇಶನದ ಪಟ್ಟುಗಳನ್ನು ಕಲಿತುಕೊಂಡಿರುವ ಭಾನು ಪ್ರಕಾಶ್, ತಮ್ಮ ಅನುಭವ, ಪ್ರತಿಭೆ ಹಾಗೂ ಗೆಲ್ಲುವ ಭರವಸೆ ಚಟ್ಟ ಸಿನಿಮಾ ಕಟ್ಟಲು ಮುಂದಾಗಿದ್ದಾರೆ. ಇದು ಇವರ ಮೊದಲ ಪೂರ್ಣ ಪ್ರಮಾಣದ ಸಿನಿಮಾ.

ಬೆಂಗಳೂರಿನಲ್ಲಿ ಇತ್ತೀಚೆಗಷ್ಟೇ ಅದ್ಧೂರಿಯಾಗಿ ಸೆಟ್ ಹಾಕಿ ಶೀರ್ಷಿಕೆ ಅನಾವರಣ ಕಾರ್ಯಕ್ರಮ ಮಾಡಲಾಗಿದೆ. ಕವಿರತ್ನ ವಿ.ನಾಗೇಂದ್ರ ಪ್ರಸಾದ್, ನಿರ್ದೇಶಕ ಜೋಸೈಮನ್ ಶೀರ್ಷಿಕೆ ಅನಾವರಣ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಭಾನು ಪ್ರಕಾಶ್ ‘ಚಟ್ಟ ಎಂದರೆ ನಾವು ಅಂದುಕೊಂಡಂತೆ ಎತ್ತಿಕೊಂಡು ಹೋಗುವುದಲ್ಲ. ಲೋಕದಲ್ಲಿಯೂ ಪುಸ್ತಕ. ಆ ಪುಸ್ತಕದ ಕೊನೆಯ ಪೇಜ್ ನಮ್ಮ ಸಿನಿಮಾ’ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ:ಕಣ್ಸನ್ನೆ ಸುಂದರಿ ಪ್ರಿಯಾ ಪ್ರಕಾಶ್ ವಾರಿಯರ್ ನಟಿಸುತ್ತಿರುವ ಸಿನಿಮಾಗಳೆಷ್ಟು? ಕನ್ನಡ ಸಿನಿಮಾದ ಕತೆ ಏನಾಯ್ತು?

ಕೆಎಂ ಕ್ರಿಯೇಷನ್ಸ್ ನಿರ್ಮಾಣದ ಚಟ್ಟ ಸಿನಿಮಾವನ್ನು ಕುಮಾರ್ ಎಂ, ಅಣಜಿ ರಮೇಶ್, ಡಿ.ಒಬಲ್ ರೆಡ್ಡಿ, ಕುಮಾರ್ ಎಂ ನಿರ್ಮಾಣ ಮಾಡುತ್ತಿದ್ದಾರೆ. ಕೆ ರಾಮ್ ರಾಮ್ ಮೂರ್ತಿ, ವಾಸುದೇವನ್, ಪ್ರಕಾಶ್ ಗೌಡ ಕೋ ಪ್ರೊಡ್ಯೂಸರ್ ಆಗಿ, ಮುರಳಿ ಕೃಷ್ಣ ಸಿ.ಎಚ್.ಉತನೂರೂಪ್ಪ ಎಕ್ಸಿ ಕ್ಯೂಟಿವ್ ಪ್ರೊಡ್ಯೂಸರ್ ಆಗಿ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಮಿಸ್ಟ್ರೀ ಡ್ರಾಮಾ ಕಥಾಹಂದರ ಹೊಂದಿರುವ ಚಟ್ಟ ಸಿನಿಮಾ ಫೆಬ್ರವರಿಯಿಂದ ಶೂಟಿಂಗ್ ಚಾಲುವಾಗಲಿದೆ. ಅದಕ್ಕೂ ಮುನ್ನ ಚಿತ್ರತಂಡ ತಾರಾಬಗಳ ಹಾಗೂ ತಾಂತ್ರಿಕ ವರ್ಗವನ್ನು ರಿವೀಲ್ ಮಾಡಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ