AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾನ್ವಿತಾ ಹೊಸ ಸಿನಿಮಾ ಪೋಸ್ಟರ್ ಬಿಡುಗಡೆ: ಹೆಸರೇನು?

ಇತ್ತೀಚೆಗಷ್ಟೆ ತಾಯಿಯನ್ನು ಕಳೆದುಕೊಂಡು ದುಃಖದಲ್ಲಿದ್ದ ಮಾನ್ವಿತಾ ಕಾಮತ್ ಆ ನೋವು ನುಂಗಿಕೊಂಡು ಸಿನಿಮಾಕ್ಕಾಗಿ ಮತ್ತೆ ಸಾರ್ವಜನಿಕ ವೇದಿಕೆಗಳಲ್ಲಿ ಕಾಣಿಸಿಕೊಳ್ಳಲು ಆರಂಭಿಸಿದ್ದಾರೆ.

ಮಾನ್ವಿತಾ ಹೊಸ ಸಿನಿಮಾ ಪೋಸ್ಟರ್ ಬಿಡುಗಡೆ: ಹೆಸರೇನು?
TV9 Web
| Updated By: ಮಂಜುನಾಥ ಸಿ.|

Updated on:Nov 23, 2023 | 11:24 PM

Share

ಕೆಲ ದಿನಗಳ ಹಿಂದಷ್ಟೆ ತಾಯಿಯನ್ನು ಕಳೆದುಕೊಂಡು ದುಖಃದಲ್ಲಿದ್ದ ನಟಿ ಮಾನ್ವಿತಾ (Manvitha Kamath) ಮತ್ತೆ ಸಾರ್ವಜನಿಕ ವೇದಿಕೆಗಳಲ್ಲಿ ಕಾಣಿಸಿಸಲು ಪ್ರಾರಂಭಿಸಿದ್ದಾರೆ. ತಾಯಿಯ ಅಗಲಿಕೆಯ ನೋವನ್ನು ಮೀರಿ, ತಾವು ನಟಿಸಿರುವ ಸಿನಿಮಾಗಳ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಆ ಮೂಲಕ ತಮ್ಮ ಜವಾಬ್ದಾರಿಯನ್ನು ಪೂರೈಸುತ್ತಿದ್ದಾರೆ. ಇದೀಗ, ಮಾನ್ವಿತಾ ನಟನೆಯ ಹೊಸ ಸಿನಿಮಾ ಒಂದರ ಪೋಸ್ಟರ್ ಬಿಡುಗಡೆ ಆಗಿದ್ದು, ಕಾರ್ಯಕ್ರಮದಲ್ಲಿ ಖುದ್ದಾಗಿ ಭಾಗಿಯಾಗಿದ್ದ ಮಾನ್ವಿತಾ ಹಲವು ವಿಷಯಗಳನ್ನು ಮಾತನಾಡಿದ್ದಾರೆ.

ಕನ್ನಡ ಸಿನಿಮಾ ಇಂಡಸ್ಟ್ರೀಯಲ್ಲಿ ಸಾಲು ಸಾಲು ಹೊಸ ನಟರ, ತಂತ್ರಜ್ಞರ ಆಗಮನವಾಗುತ್ತಿದೆ. ಯುವ ಸಿನಿಮೋತ್ಸಾಹಿಗಳು ಹೊಸ ರೀತಿಯ ಕತೆಗಳನ್ನು ಹೊತ್ತುಕೊಂಡು ಚಿತ್ರರಂಗಕ್ಕೆ ಬರುತ್ತಿದ್ದಾರೆ. ಅಂಥಹುದೇ ಒಂದು ಹೊಸ ಪ್ರತಿಭಾನ್ವಿತರ ತಂಡವೊಂದರ ಜೊತೆಗೆ ಕೈಜೋಡಿಸಿದ್ದಾರೆ ಮಾನ್ವಿತಾ. ಹೊಸಬರ ತಂಡ ನಿರ್ಮಿಸುತ್ತಿರುವ ‘ಒನ್ ಅಂಡ್ ಆಫ್’ ಹೆಸರಿನ ಸಿನಿಮಾದಲ್ಲಿ ಮಾನ್ವಿತಾ ನಟಿಸುತ್ತಿದ್ದಾರೆ.

ರಂಗ್ಬಿರಂಗಿ, ಡೆವಿಡ್, ದಿ ವೆಕೆಂಟ್ ಹೌಸ್ ಸಿನಿಮಾಗಳ ಮೂಲಕ ಭರವಸೆ ಮೂಡಿಸಿರುವ ಯುವ ಪ್ರತಿಭೆ ಶ್ರೇಯಸ್ ಚಿಂಗಾ ಒನ್ ಅಂಡ್ ಆಫ್ ಸಿನಿಮಾ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಜೊತೆಗೆ ಈ ಸಿನಿಮಾದಲ್ಲಿ ನಾಯಕನಾಗಿಯೂ ಶ್ರೇಯಸ್ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಬೆಂಗಳೂರಿನ ರೇಣುಕಾಂಬ ಸ್ಟುಡಿಯೋಸ್ ನಲ್ಲಿ ಈ ಸಿನಿಮಾದ ಪೋಸ್ಟರ್ ಜೊತೆಗೆ ಸಿನಿಮಾ ನಿರ್ಮಾಣ ಮಾಡುತ್ತಿರುವ ಸುಲಕ್ಷ್ಮೀ ಫಿಲಂಸ್ ನಿರ್ಮಾಣ ಸಂಸ್ಥೆಯ ಲೋಗೋ ಹಾಗೂ ಸಿನಿಮಾದ ಪೋಸ್ಟರ್ ಅನ್ನು ಒಂದೇ ವೇದಿಕೆ ಮೇಲೆ ಬಿಡುಗಡೆ ಮಾಡಲಾಯ್ತು.

ಇದನ್ನೂ ಓದಿ:ತಾಯಿ-ಮಗಳ ಪಾತ್ರದಲ್ಲಿ ಪ್ರಿಯಾಂಕಾ ಉಪೇಂದ್ರ-ಮಾನ್ವಿತಾ ಕಾಮತ್​; ಇದು ‘ಕ್ಯಾಪ್ಚರ್​’ ಸಿನಿಮಾ ಸ್ಪೆಷಲ್​

ನಟ ಕಂ ನಿರ್ದೇಶಕ ಶ್ರೇಯಸ್ ಚಿಂಗಾ ಮಾತನಾಡಿ, ಕಂಪ್ಲೀಟ್ ಕಾಮಿಡಿ ಸಿನಿಮಾ. ಇವತ್ತಿನಿಂದ ಶೂಟಿಂಗ್ ಆರಂಭವಾಗಿದೆ. ಐಟಿ ಕಂಪನಿ ಅಂದ್ಮೇಲೆ ಸಾಕಷ್ಟು ಜನ ಹುಡುಗಿಯರು ಇರುತ್ತಾರೆ. ಮಾನ್ವಿತಾ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಬೆಂಗಳೂರು, ಗೋವಾ ಭಾಗದಲ್ಲಿ ಶೂಟಿಂಗ್ ನಡೆಸಲು ಯೋಜನೆ ಹಾಕಿಕೊಂಡಿದ್ದೇವೆ. ಮಣಿಕಾಂತ್ ಕದ್ರಿ ಸರ್ ಸಂಗೀತ ಸಿನಿಮಾಕ್ಕಿದೆ ಎಂದರು.

ನಟಿ ಮಾನ್ವಿತಾ ಹರೀಶ್ ಮಾತನಾಡಿ, ತಮ್ಮ ತಾಯಿಯ ಅಗಲಿಕೆಯ ಬಗ್ಗೆ ಬೇಸರದಿಂದಲೇ ಮಾತನಾಡಿದರು. ಬಳಿಕ ಸಿನಿಮಾದ ಕತೆ ಮಾತು ಹೊರಳಿಸಿ ಶ್ರೇಯಸ್ ಹೇಳಿದ ಕಥೆ ಇಷ್ಟವಾಯ್ತು ಹಾಗಾಗಿ ನಟಿಸಲು ಒಪ್ಪಿಕೊಂಡೆ. ಶ್ರೇಯಸ್ ಒಳ್ಳೆ ನಟ ಆಗಿರುವ ಜೊತೆಗೆ ಒಳ್ಳೆ ಬರಹಗಾರ ಸಹ. ಒಂದೊಳ್ಳೆ ತಂಡದ ಜೊತೆ ಕೆಲಸ ಮಾಡುತ್ತಿರುವ ಅನುಭವ. ನನ್ನ ಪಾತ್ರದ ಹೆಸರು ನಿಧಿ. ನಿಧಿ ಟ್ರಬಲ್ ಮೇಕರ್. ಒಂದೊಳ್ಳೆ ಪಾತ್ರ ಎಂದು ತಿಳಿಸಿದರು.

ಶ್ರೇಯಸ್ ಚಿಂಗಾ ನಾಯಕನಾಗಿ ನಟಿಸ್ತಿದ್ದು, ಮಾನ್ವಿತಾ ಹರೀಶ್ ಕಾಮತ್ ಮುಖ್ಯಭೂಮಿಕೆಯಲ್ಲಿ, ಸಾಧು ಕೋಕಿಲಾ, ಅನಿನಾಶ್ ಯೆಳಂದೂರ್, ಸುಚೇಂದ್ರ ಪ್ರಸಾದ್, ಸ್ಪರ್ಶ ರೇಖಾ, ಅನಂತು, ಸುಂದರಶ್ರೀ, ಕಾಮಿಡಿ ಕಿಲಾಡಿ ಖ್ಯಾತಿಯ ಹಿತೇಶ್ ಕುಮಾರ್, ಮಹಾಂತೇಶ್ ಹಿರೇಮಠ್, ನಿಕಿತಾ ದೋರ್ತೊಡಿ, ಲಲಿತಾ ನಾಯಕ್, ರೋಹಿತ್ ಅರುಣ್, ಅಮಾನ್, ರಾಖಿ ಭೂತಪ್ಪ ತಾರಾಬಳಗದಲ್ಲಿದ್ದಾರೆ. ವಿಶೇಷ ಅಂದರೆ ಸಿನಿಮಾದಲ್ಲಿ ಹೀರೋಗೆ ಕನ್ನಡ ಎಂಬ ಹೆಸರಿಡಲಾಗಿದೆ. ದೇವೇಂದ್ರ ಛಾಯಾಗ್ರಹಣ, ಮಣಿಕಾಂತ್ ಕದ್ರಿ ಸಂಗೀತ ಒನ್ ಅಂಡ್ ಆಫ್ ಸಿನಿಮಾಕ್ಕಿದೆ. ರೋಮ್ಯಾಂಟಿಕ್ ಕಾಮಿಡಿ ಕಥಾಹಂದರದ ಹೊಂದಿರುವ ಒನ್ ಅಂಡ್ ಆಫ್ ಸಿನಿಮಾವನ್ನು ಸುಲಕ್ಷ್ಮೀ ಫಿಲಂಸ್ ನಡಿ ಚರಣ್ ಸುಬ್ಬಯ್ಯ ನಿರ್ಮಾಣ ಮಾಡುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:20 pm, Thu, 23 November 23