ಬಾಲಯ್ಯ ಶೋನಲ್ಲಿ ರಶ್ಮಿಕಾ ಮಂದಣ್ಣ ಲವ್ ವಿಚಾರ ಲೀಕ್; ಇದೆಲ್ಲ ರಣಬೀರ್ ಕೆಲಸ

ಬಾಲಯ್ಯ ಅವರು ನಡೆಸಿಕೊಡುವ ‘ಅನ್​ಸ್ಟಾಪೆಬಲ್ ವಿತ್ ಎನ್​ಬಿಕೆ’ ಶೋಗೆ ಅನಿಮಲ್ ತಂಡ ಆಗಮಿಸಿದೆ. ರಶ್ಮಿಕಾ ಮಂದಣ್ಣ, ರಣಬೀರ್ ಕಪೂರ್ ಹಾಗೂ ಸಿನಿಮಾ ನಿರ್ದೇಶಕ ಸಂದೀಪ್ ರೆಡ್ಡಿ ವಂಗ ವೇದಿಕೆ ಮೇಲೆ ಇದ್ದರು. ಈ ವೇಳೆ ರಶ್ಮಿಕಾ ಪ್ರೀತಿ ವಿಚಾರ ಲೀಕ್ ಆಗಿದೆ.

ಬಾಲಯ್ಯ ಶೋನಲ್ಲಿ ರಶ್ಮಿಕಾ ಮಂದಣ್ಣ ಲವ್ ವಿಚಾರ ಲೀಕ್; ಇದೆಲ್ಲ ರಣಬೀರ್ ಕೆಲಸ
ರಶ್ಮಿಕಾ ಮಂದಣ್ಣ
Follow us
ರಾಜೇಶ್ ದುಗ್ಗುಮನೆ
|

Updated on:Nov 24, 2023 | 11:36 AM

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ (Rashmika Mandanna) ಪ್ರೀತಿಯಲ್ಲಿದ್ದಾರೆ ಎನ್ನುವ ವಿಚಾರ ಈ ಮೊದಲಿನಿಂದಲೂ ಹರಿದಾಡುತ್ತಲೇ ಇದೆ. ಆದರೆ, ಇದಕ್ಕೆ ಅವರ ಕಡೆಯಿಂದ ಉತ್ತರ ಸಿಕ್ಕಿಲ್ಲ. ಈಗ ಬಾಲಯ್ಯ ಅವರು ನಡೆಸಿಕೊಡುವ ‘ಅನ್​ಸ್ಟಾಪೆಬಲ್ ವಿತ್ ಎನ್​ಬಿಕೆ’ ಶೋಗೆ ಅನಿಮಲ್ ತಂಡ ಆಗಮಿಸಿದೆ. ರಶ್ಮಿಕಾ ಮಂದಣ್ಣ, ರಣಬೀರ್ ಕಪೂರ್ ಹಾಗೂ ಸಿನಿಮಾ ನಿರ್ದೇಶಕ ಸಂದೀಪ್ ರೆಡ್ಡಿ ವಂಗ ವೇದಿಕೆ ಮೇಲೆ ಇದ್ದರು. ಈ ವೇಳೆ ರಶ್ಮಿಕಾ ಪ್ರೀತಿ ವಿಚಾರ ಲೀಕ್ ಆಗಿದೆ.

ವಿಜಯ್​ಗೆ ಕರೆ ಮಾಡುವಂತೆ ರಶ್ಮಿಕಾಗೆ ಕೋರಲಾಗಿದೆ. ಕರೆ ಮಾಡಿ ಲೌಡ್ ಸ್ಪೀಕರ್ ಇಡಲಾಗಿದೆ. ರಶ್ಮಿಕಾ ಕರೆ ಮಾಡಿ ಹೆಲೋ ಎಂದಿದ್ದಾರೆ. ಆ ಕಡೆಯಿಂದ ವಿಜಯ್ ದೇವರಕೊಂಡ ‘ವಾಟ್ಸಪ್​ ರೇ’ ಎಂದು ಪ್ರೀತಿಯಿಂದ ಮಾತು ಆರಂಭಿಸಿದ್ದಾರೆ. ಫೋನ್ ಸ್ಪೀಕರ್​ನಲ್ಲಿ ಇಟ್ಟಿರುವುದಾಗಿ ರಶ್ಮಿಕಾ ಹೇಳಿದ್ದಾರೆ. ಇವರ ಮಧ್ಯೆ ಮಾತುಕತೆ ಮುಂದುವರಿದಿದೆ.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ ನಟಿಸುತ್ತಿರುವ ಹೊಸ ಹಿಂದಿ ಸಿನಿಮಾ ಯಾವುದು ಗೊತ್ತೆ?

‘ಐ ಲವ್ ಬಾಲ ಸರ್’ ಎಂದಿದ್ದಾರೆ ರಶ್ಮಿಕಾ ಮಂದಣ್ಣ. ‘ಹಾಗಾದರೆ ವಿಜಯ್ ಯಾರನ್ನು ಪ್ರೀತಿಸುತ್ತಿದ್ದಾರೆ’ ಎಂದು ಬಾಲಯ್ಯ ಕೇಳಿದರು. ಇದಕ್ಕೆ ‘ಐ ಲವ್ ಸಂದೀಪ್ ರೆಡ್ಡಿ ವಂಗ’ ಎಂದಿದ್ದಾರೆ ವಿಜಯ್. ಅವರ ಮಾತಲ್ಲಿ ಸಖತ್ ಫನ್ ಇತ್ತು.

ಇದನ್ನೂ ಓದಿ:ಪತಿ ರಣಬೀರ್ ಕಪೂರ್​ ಬಗ್ಗೆ ಟಾಕ್ಸಿಕ್​ ಎಂದವರಿಗೆ ತಿರುಗೇಟು ನೀಡಿದ ಆಲಿಯಾ ಭಟ್​

ರಣಬೀರ್ ಕಪೂರ್ ಅವರು ರಶ್ಮಿಕಾ ಮಂದಣ್ಣ ಹಾಗೂ ಸಂದೀಪ್ ರೆಡ್ಡಿ ವಂಗ ಭೇಟಿ ಬಗ್ಗೆ ಮಾತನಾಡಿದ್ದಾರೆ. ‘ಅರ್ಜುನ್ ರೆಡ್ಡಿ ಸಕ್ಸಸ್ ಪಾರ್ಟಿ ವಿಜಯ್ ದೇವರಕೊಂಡ ಮನೆಯಲ್ಲಿ ನಡೆಯಿತು. ವಿಜಯ್ ಮನೆಯ ಟೆರೇಸ್​ನಲ್ಲಿ ರಶ್ಮಿಕಾನ ಸಂದೀಪ್ ಮೊದಲ ಭಾರಿ ಭೇಟಿ ಮಾಡಿದ್ದರು’ ಎಂದು ಅಸಲಿ ವಿಚಾರ ಬಿಚ್ಚಿಟ್ಟಿದ್ದಾರೆ. ‘ಈ ರೀತಿಯ ಮಾಹಿತಿಯನ್ನು ಅವರು ಯಾಕೆ ಲೀಕ್ ಮಾಡುತ್ತಿದ್ದಾರೆ ಎಂಬುದು ನನಗೆ ಗೊತ್ತಿಲ್ಲ’ ಎಂದು ಹೇಳಿದ್ದಾರೆ ರಶ್ಮಿಕಾ. ಈ ವಿಡಿಯೋ ಸಖತ್ ಫನ್ನಿ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:41 am, Fri, 24 November 23