ತಾಯಿ-ಮಗಳ ಪಾತ್ರದಲ್ಲಿ ಪ್ರಿಯಾಂಕಾ ಉಪೇಂದ್ರ-ಮಾನ್ವಿತಾ ಕಾಮತ್​; ಇದು ‘ಕ್ಯಾಪ್ಚರ್​’ ಸಿನಿಮಾ ಸ್ಪೆಷಲ್​

‘ಕ್ಯಾಪ್ಚರ್’ ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಹಾಗೂ ಮಾನ್ವಿತಾ ಕಾಮತ್​ ಅವರು ತಾಯಿ-ಮಗಳ ಪಾತ್ರ ಮಾಡಿದ್ದಾರೆ. ಶೂಟಿಂಗ್​ ಅನುಭವದ ಬಗ್ಗೆ ಮಾನ್ವಿತಾ ಮಾತನಾಡಿದ್ದಾರೆ. ಇದೇ ಮೊದಲ ಬಾರಿಗೆ ಮಾನ್ವಿತಾ ಅವರು ಹಾರರ್​ ಕಥಾಹಂದರದ ಸಿನಿಮಾದಲ್ಲಿ ನಟಿಸಿದ್ದಾರೆ. ಸ್ನೇಹಾ ಎಂಬ ಪಾತ್ರಕ್ಕೆ ಅವರ ಬಣ್ಣ ಹಚ್ಚಿದ್ದಾರೆ.

ತಾಯಿ-ಮಗಳ ಪಾತ್ರದಲ್ಲಿ ಪ್ರಿಯಾಂಕಾ ಉಪೇಂದ್ರ-ಮಾನ್ವಿತಾ ಕಾಮತ್​; ಇದು ‘ಕ್ಯಾಪ್ಚರ್​’ ಸಿನಿಮಾ ಸ್ಪೆಷಲ್​
ಪ್ರಿಯಾಂಕಾ ಉಪೇಂದ್ರ, ಮಾನ್ವಿತಾ ಕಾಮತ್​
Follow us
ಮದನ್​ ಕುಮಾರ್​
|

Updated on: Oct 26, 2023 | 10:48 AM

ಕನ್ನಡ ಚಿತ್ರರಂಗದ ಫೇಮಸ್​ ನಟಿ ಮಾನ್ವಿತಾ ಕಾಮತ್ (Manvitha Kamath) ಅವರು ಒಂದು ಸಣ್ಣ ಗ್ಯಾಪ್​ನ ಬಳಿಕ ಮತ್ತೊಮ್ಮೆ ಪ್ರೇಕ್ಷಕರ ಎದುರು ಬರಲು ರೆಡಿ ಆಗಿದ್ದಾರೆ. ‘ಕೆಂಡಸಂಪಿಗೆ’, ‘ಟಗರು’ ಮುಂತಾದ ಸಿನಿಮಾಗಳ ಮೂಲಕ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಇಷ್ಟು ವರ್ಷಗಳ ವೃತ್ತಿಜೀವನದಲ್ಲಿ ಮಾನ್ವಿತಾ ಅವರು ಹಾರರ್​ ಸಿನಿಮಾದಲ್ಲಿ ನಟಿಸಿರಲಿಲ್ಲ. ಈಗ ಇದೇ ಮೊದಲ ಬಾರಿಗೆ ಅವರು ಹಾರರ್​ ಕಥಾಹಂದರದ ‘ಕ್ಯಾಪ್ಚರ್​’ (Capture Movie) ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಪ್ರಿಯಾಂಕಾ ಉಪೇಂದ್ರ (Priyanka Upendra) ನಾಯಕಿ. ಅವರ ಜೊತೆ ಮಾನ್ವಿತಾ ತೆರೆಹಂಚಿಕೊಂಡಿದ್ದು, ಇಬ್ಬರ ಕಾಂಬಿನೇಷನ್​ ಬಗ್ಗೆ ಕೌತುಕ ಮೂಡಿದೆ.

ಈ ಹಿಂದೆ ‘ಮಮ್ಮಿ’ ಸಿನಿಮಾ ಮೂಲಕ ಪ್ರೇಕ್ಷಕರನ್ನು ಬೆಚ್ಚಿ ಬೀಳಿಸಿದ್ದ ನಿರ್ದೇಶಕ ಲೋಹಿತ್​ ಅವರು ಈಗ ‘ಕ್ಯಾಪ್ಚರ್​’ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಈ ಸಿನಿಮಾದ ಪೋಸ್ಟರ್​ ಆಕರ್ಷಕವಾಗಿದೆ. ಕೆಲವೇ ದಿನಗಳ ಹಿಂದೆ ಪ್ರಿಯಾಂಕಾ ಉಪೇಂದ್ರ ಅವರ 60 ಎತ್ತರದ ಕಟೌಟ್​ ಅನಾವರಣ ಮಾಡುವ ಮೂಲಕ ಭರ್ಜರಿಯಾಗಿ ಟೈಟಲ್​ ರಿವೀಲ್​ ಮಾಡಲಾಗಿತ್ತು. ಈ ಚಿತ್ರತಂಡದಿಂದ ಒಂದೊಂದೇ ಹೊಸ ವಿಚಾರಗಳು ಹೊರಬರುತ್ತಿವೆ. ಪೂರ್ತಿ ಸಿನಿಮಾ ಸಿಸಿಟಿವಿ ಕಾನ್ಸೆಪ್ಟ್‌ನಲ್ಲಿ ಮೂಡಿಬಂದಿದೆ. ವಿಶ್ವದಲ್ಲಿಯೇ ಮೊದಲ ಬಾರಿಗೆ ಈ ರೀತಿಯ ಪ್ರಯತ್ನ ನಡೆದಿರುವುದು ಎಂದು ಚಿತ್ರತಂಡ ಹೇಳಿಕೊಂಡಿದೆ. ಮಾನ್ವಿತಾ ಅವರು ಈ ಚಿತ್ರದಲ್ಲಿ ಸ್ನೇಹಾ ಎಂಬ ಪಾತ್ರ ಮಾಡಿದ್ದಾರೆ.

ಇದನ್ನೂ ಓದಿ: ಬಾಲ್ಯದಲ್ಲಿದ್ದಾಗ ಮೈಸೂರು ದಸರಾ ಹೇಗಿತ್ತು ಎಂದು ನೆನಪಿಸಿಕೊಂಡ ನಟಿ ಮಾನ್ವಿತಾ ಕಾಮತ್

‘ಕ್ಯಾಪ್ಚರ್’ ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಹಾಗೂ ಮಾನ್ವಿತಾ ಕಾಮತ್​ ಅವರು ತಾಯಿ-ಮಗಳ ಪಾತ್ರ ಮಾಡಿದ್ದಾರೆ. ಶೂಟಿಂಗ್​ ಅನುಭವದ ಬಗ್ಗೆ ಮಾನ್ವಿತಾ ಮಾತನಾಡಿದ್ದಾರೆ. ‘ಇದೇ ಮೊದಲ ಬಾರಿ ನಾನು ಹಾರರ್ ಚಿತ್ರದಲ್ಲಿ ಅಭಿನಯಿಸಿದ್ದೇನೆ. ಆರಂಭದಲ್ಲಿ ಬಹಳ ಭಯ ಇತ್ತು. ಆದರೆ ಪಾತ್ರ ಚೆನ್ನಾಗಿದೆ ಎಂಬ ಕಾರಣದಿಂದ ಒಪ್ಪಿಕೊಂಡೆ. ಗೋವಾದಲ್ಲಿ 15 ದಿನ ಚಿತ್ರೀಕರಣ ಮಾಡಿದ್ದೇವೆ. ಪ್ರಿಯಾಂಕಾ ಅವರ ಜೊತೆ ಕೆಲಸ ಮಾಡಿದ್ದು ಸಖತ್​ ಇಷ್ಟವಾಯಿತು. ಚಿತ್ರೀಕರಣ ಮುಗಿಸಿ ಮನೆಗೆ ಬಂದಾಗ ತುಂಬ ದೃಷ್ಟಿ ಆಗಿತ್ತು ಎನಿಸುತ್ತದೆ. ಜ್ವರ ಕೂಡ ಬಂದಿತ್ತು. ಆದರೆ ದೃಷ್ಟಿ ತೆಗಿಸಿಕೊಂಡ ಮೇಲೆ ಸರಿ ಆಯಿತು’ ಎಂದು ಮಾನ್ವಿತಾ ಹೇಳಿದ್ದಾರೆ.

ಇದನ್ನೂ ಓದಿ: ‘ಟಗರು’ ಸುಂದರಿ ಮಾನ್ವಿತಾ ಫೋಟೋ ಕಂಡು ಮರುಳಾದ ಫ್ಯಾನ್ಸ್​

ಮಾನ್ವಿತಾ ಕಾಮತ್​ ನಟನೆಯ ‘ಶಿವ 143’ ಚಿತ್ರ ಬಿಡುಗಡೆಯಾಗಿ ವರ್ಷವೇ ಕಳೆದಿದೆ. ಆ ಚಿತ್ರದ ಬಳಿಕ ‘ಕ್ಯಾಪ್ಚರ್’ ಮೂಲಕ ಅವರು ಜನರನ್ನು ರಂಜಿಸಲು ಬರುತ್ತಿದ್ದಾರೆ. ಈ ಚಿತ್ರದಲ್ಲಿ ಅವರ ಲುಕ್ ಹೇಗಿದೆ ಎಂಬುದು ಶೀಘ್ರದಲ್ಲೇ ಬಹಿರಂಗ ಆಗಲಿದೆ. ರವಿರಾಜ್ ಅವರ ‘ಶ್ರೀದುರ್ಗಾ ಪರಮೇಶ್ವರಿ ಪ್ರೊಡಕ್ಷನ್ಸ್​’ ಬ್ಯಾನರ್​ ಮೂಲಕ ಈ ಚಿತ್ರ ನಿರ್ಮಾಣ ಆಗುತ್ತಿದೆ. ಬಹುತೇಕ ಚಿತ್ರೀಕರಣ ಮುಗಿದಿದೆ. ಆದಷ್ಟು ಬೇಗ ರಿಲೀಸ್​ ಮಾಡುವ ಗುರಿ ಇಟ್ಟುಕೊಂಡು ಚಿತ್ರತಂಡ ಕಾರ್ಯ ನಿರತವಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ