Tagaru Palya: ಅ.27ಕ್ಕೆ ‘ಟಗರು ಪಲ್ಯ’ ರಿಲೀಸ್​; ಡಾಲಿ ನಿರ್ಮಾಣದ ಚಿತ್ರಕ್ಕೆ 175 ಚಿತ್ರಮಂದಿರ ಮೀಸಲು

‘ಟಗರು ಪಲ್ಯ’ ಸಿನಿಮಾದ ಮೂಲಕ ‘ನೆನಪಿರಲಿ’ ಪ್ರೇಮ್‌ ಪುತ್ರಿ ಅಮೃತಾ ಅವರು ಬಣ್ಣದ ಲೋಕಕ್ಕೆ ಎಂಟ್ರಿ ನೀಡುತ್ತಿದ್ದಾರೆ. 175 ಚಿತ್ರಮಂದಿರದಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿದೆ. ಸಿನಿಮಾ ನೋಡಲು ಸಿಎಂ ಸಿದ್ದರಾಮಯ್ಯ ಅವರಿಗೂ ಅಹ್ವಾನ ನೀಡಲಾಗಿದೆ. ಈ ಸಿನಿಮಾಗೆ ನಾಗಭೂಷಣ್​ ಹೀರೋ.

Tagaru Palya: ಅ.27ಕ್ಕೆ ‘ಟಗರು ಪಲ್ಯ’ ರಿಲೀಸ್​; ಡಾಲಿ ನಿರ್ಮಾಣದ ಚಿತ್ರಕ್ಕೆ 175 ಚಿತ್ರಮಂದಿರ ಮೀಸಲು
ಟಗರು ಪಲ್ಯ ಚಿತ್ರತಂಡ
Follow us
ಮದನ್​ ಕುಮಾರ್​
|

Updated on: Oct 26, 2023 | 1:17 PM

ಕನ್ನಡದ ಖ್ಯಾತ ನಟ ಡಾಲಿ ಧನಂಜಯ್ ಅವರು ‘ಟಗರು ಪಲ್ಯ’ ಸಿನಿಮಾ (Tagaru Palya Movie) ನಿರ್ಮಾಣ ಮಾಡಿದ್ದಾರೆ. ಇದೇ ವಾರ (ಅಕ್ಟೋಬರ್​ 27) ಈ ಚಿತ್ರ ಬಿಡುಗಡೆ ಆಗುತ್ತಿದೆ. ಅದರ ಸಲುವಾಗಿ ನಿರ್ಮಾಪಕ ಧನಂಜಯ್ (Daali Dhananjay) ಮತ್ತು ಚಿತ್ರತಂಡದವರು ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿ ಒಂದಷ್ಟು ವಿಷಯ ಹಂಚಿಕೊಂಡರು. ಈ ಸಿನಮಾದಲ್ಲಿ ನಾಗಭೂಷಣ್​, ಅಮೃತಾ ಪ್ರೇಮ್​, ತಾರಾ ಅನುರಾಧ, ರಂಗಾಯಣ ರಘು, ವಾಸುಕಿ ವೈಭವ್​, ಪೂರ್ಣಚಂದ್ರ ಮೈಸೂರು, ವೈಜನಾಥ್‌ ಬಿರಾದಾರ್‌, ಚಿತ್ರಾ ಶೆಣೈ, ಶ್ರೀನಾಥ್‌ ವಸಿಷ್ಠ ಮುಂತಾದವರು ನಟಿಸಿದ್ದಾರೆ. ಉಮೇಶ್‌ ಕೃಪ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ‘ಟಗರು ಪಲ್ಯ’ ಸಿನಿಮಾದ ಮೂಲಕ ‘ನೆನಪಿರಲಿ’ ಪ್ರೇಮ್‌ ಪುತ್ರಿ ಅಮೃತಾ (Amrutha Prem) ಅವರು ಬಣ್ಣದ ಲೋಕಕ್ಕೆ ಎಂಟ್ರಿ ನೀಡುತ್ತಿದ್ದಾರೆ. 175 ಚಿತ್ರಮಂದಿರದಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿದೆ. ಸಿನಿಮಾ ನೋಡಲು ಸಿಎಂ ಸಿದ್ದರಾಮಯ್ಯ ಅವರಿಗೂ ಅಹ್ವಾನ ನೀಡಲಾಗಿದೆ.

‘ಕೆಲವೊಂದು ಸಂಗತಿಗಳು ಯಾಕೆ ಮತ್ತು ಹೇಗೆ ಘಟಿಸುತ್ತವೆ ಅಂತ ಗೊತ್ತಿಲ್ಲ. ನಾವು ‘ಬಡವ ರಾಸ್ಕಲ್’ ಮತ್ತು ‘ಹೆಡ್ ಬುಷ್’ ಸಿನಿಮಾವನ್ನು ನಿರ್ಮಾಣ ಮಾಡಿದ್ದೆವು. ಕಳೆದ ವರ್ಷ ನನ್ನ ಹುಟ್ಟುಹಬ್ಬದ ದಿನ ಕಾರ್ತಿಕ್ ಜೊತೆ ಮಾತಾಡುವಾಗ ಪ್ರೊಡಕ್ಷನ್ ಮುಂದುವರಿಸಬೇಕು ಎನಿಸಿತು. ಒಂದು ಒಳ್ಳೆಯ ಕಥೆಗೆ ಏನೇನು ಬೇಕೋ ಅದೆಲ್ಲವನ್ನೂ ‘ಟಗರು ಪಲ್ಯ’ ಚಿತ್ರಕ್ಕೆ ಒದಗಿಸಿದ್ದೇವೆ. ಈ ಸಿನಿಮಾ ನಮಗೆ ಹೆಚ್ಚು ಕನೆಕ್ಟ್ ಆಗುವ ಪ್ರಾಜೆಕ್ಟ್​. ಪರಭಾಷೆಯ ಸಿನಿಮಾಗಳನ್ನು ನೋಡಿದಾಗ ನಮ್ಮಲ್ಲೂ ಅಂಥ ಸಿನಿಮಾ ಬರಬೇಕು ಎನ್ನುತ್ತೇವಲ್ಲ‌. ಆ ರೀತಿಯ ಕಥೆ ಸಿನಿಮಾದಲ್ಲಿದೆ. ಯಾವುದೇ ಸಿನಿಮಾ ಕುಟುಂಬದ ಹಿನ್ನೆಲೆ ಇಲ್ಲದೇ ಬಂದವರು ನಾವು. ನಮ್ಮ ನಿರ್ಮಾಣ ಸಂಸ್ಥೆಯಿಂದ ಮೂವರು ನಿರ್ದೇಶಕರು ಬಂದಿದ್ದಾರೆ ಎಂಬುದು ನಮಗೆ ಹೆಮ್ಮೆ ತಂದಿದೆ’ ಎಂದು ಧನಂಜಯ್​ ಹೇಳಿದ್ದಾರೆ.

ಇದನ್ನೂ ಓದಿ: ನಾಗಭೂಷಣ್, ಅಮೃತಾ​ ನಟನೆಯ ‘ಟಗರು ಪಲ್ಯ’ ಚಿತ್ರದ ಟ್ರೇಲರ್​ ಬಿಡುಗಡೆ ಮಾಡಿದ ದರ್ಶನ್​

ಹೀರೋಯಿನ್​ ತಂದೆ ಪಾತ್ರದಲ್ಲಿ ರಂಗಾಯಣ ರಘು ಮತ್ತು ತಾಯಿಯ ಪಾತ್ರದಲ್ಲಿ ತಾರಾ ಅನುರಾಧಾ ಅಭಿನಯಿಸಿದ್ದಾರೆ. ತಂಡದ ಬಗ್ಗೆ ತಾರಾ ಅವರು ಮೆಚ್ಚುಗೆ ಸೂಚಿಸಿದ್ದಾರೆ. ‘ನಿರ್ಮಾಪಕನಿಗೆ ವಯಸ್ಸು ಮುಖ್ಯವಲ್ಲ, ಕೆಲಸವೇ ಮುಖ್ಯ. ಡಾಲಿಗೆ ಇಡೀ ಚಿತ್ರತಂಡದ ಪರವಾಗಿ ಧನ್ಯವಾದ ಅರ್ಪಿಸುತ್ತೇನೆ. ಉಮೇಶ್ ಓರ್ವ ಹೊಸ ನಿರ್ದೇಶಕ ಅಂತ ಅನಿಸುವುದಿಲ್ಲ. ಅಷ್ಟರಮಟ್ಟಿಗೆ ಅವರು ಕೆಲಸ ಮಾಡಿದ್ದಾರೆ’ ಎಂದಿದ್ದಾರೆ ತಾರಾ. ಪ್ರಚಾರ ಕಾರ್ಯದಲ್ಲಿ ಡಾಲಿ ಸಾಕಷ್ಟು ಬ್ಯುಸಿ ಆಗಿದ್ದಾರೆ. ಪ್ರಮೋಷನ್ ಸಲುವಾಗಿ ಅವರು ಟ್ರಕ್ ಹತ್ತಿ ಊರೂರು ಸುತ್ತಿದ್ದಾರೆ. ಆ ವಿಡಿಯೋ ಕೂಡ ವೈರಲ್ ಆಗಿದೆ.

ಇದನ್ನೂ ಓದಿ: ಡಾಲಿ ಧನಂಜಯ್ ಬಳಿ ಕೈಮುಗಿದು ಅವಕಾಶ ಕೇಳಿದ ನಟ ದರ್ಶನ್

ವಾಸುಕಿ ವೈಭವ್​ ಅವರು ‘ಟಗರು ಪಲ್ಯ’ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ವಿತರಕ ಕಾರ್ತಿಕ್ ಗೌಡ ಅವರು ಸಿನಿಮಾ ಬಗ್ಗೆ ಭರವಸೆ ವ್ಯಕ್ತಪಡಿಸಿದ್ದಾರೆ. ‘ಇದು ಎಲ್ಲರ ಪ್ರಶಂಸೆಗೆ ಪಾತ್ರವಾಗುವ ಚಿತ್ರ. ಕನ್ನಡ ಭಾಷೆ, ಸಂಪ್ರದಾಯ ಮುಂತಾದ ಅಂಶಗಳು ಈ ಚಿತ್ರದಲ್ಲಿ ಚೆನ್ನಾಗಿ ಮೂಡಿಬಂದಿದೆ. ಎಲ್ಲ ಕಲಾವಿದರು ಉತ್ತಮವಾಗಿ ಅಭಿನಯಿಸಿದ್ದಾರೆ. ಮನರಂಜನೆಯ ಅಂಶಗಳ ಜೊತೆ ಒಂದು ಊರಿನ ಸಂಪ್ರದಾಯವನ್ನು ಚೆನ್ನಾಗಿ ತೋರಿಸಲಾಗಿದೆ. ಈ ವರ್ಷ ನಾವು ವಿತರಣೆ ಮಾಡುತ್ತಿರುವ ಉತ್ತಮ ಸಿನಿಮಾ ಇದು’ ಎಂದು ಅವರು ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ