ಡಾಲಿ ಧನಂಜಯ್ ಬಳಿ ಕೈಮುಗಿದು ಅವಕಾಶ ಕೇಳಿದ ನಟ ದರ್ಶನ್

Darshan: ದರ್ಶನ್ ಕಾಲ್​ಶೀಟ್​ಗಾಗಿ ಕಾಯುತ್ತಿರುವ ಹಲವು ನಿರ್ಮಾಪಕರಿದ್ದಾರೆ. ಕೈಯಲ್ಲಿ ಸಾಲು-ಸಾಲು ಸಿನಿಮಾಗಳೂ ಇವೆ. ಹೀಗಿದ್ದರೂ ನಟ, ನಿರ್ಮಾಪಕ ಡಾಲಿ ಧನಂಜಯ್ ಬಳಿ ಅವಕಾಶ ಕೇಳಿದ್ದಾರೆ ನಟ ದರ್ಶನ್.

ಡಾಲಿ ಧನಂಜಯ್ ಬಳಿ ಕೈಮುಗಿದು ಅವಕಾಶ ಕೇಳಿದ ನಟ ದರ್ಶನ್
|

Updated on: Oct 18, 2023 | 10:29 PM

ನಟ ದರ್ಶನ್, (Darshan) ಈಗ ಸ್ಟಾರ್ ನಟ, ಅವರ ಕಾಲ್​ಶೀಟ್​ಗೆ ಹಲವು ನಿರ್ಮಾಪಕರು ಕಾಯುತ್ತಿದ್ದಾರೆ. ಆದರೆ ನಟ ದರ್ಶನ್, ತಮ್ಮ ಸಹ ನಟ, ನಿರ್ಮಾಪಕ ಡಾಲಿ ಧನಂಜಯ್ ಬಳಿ ಅವಕಾಶ ಕೇಳಿದ್ದಾರೆ. ಹೌದು, ಡಾಲಿ ಧನಂಜಯ್ ನಿರ್ಮಾಣ ಮಾಡಿರುವ ‘ಟಗರು ಪಲ್ಯ’ ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ನಟ ದರ್ಶನ್, ”ನಾನು ಸ್ಟ್ರಗಲ್ ಮಾಡಿ ಬಂದವನು, ಈಗಲೂ ಸ್ಟ್ರಗಲ್ ಮಾಡುತ್ತಿರುವೆ. ನಿರ್ಮಾಪಕರ ಬಳಿ ಅವಕಾಶ ಕೇಳಲು ಹಿಂದೇಟು ಹಾಕಬಾರದು. ದಯವಿಟ್ಟು ನಿಮ್ಮ ನಿರ್ಮಾಣ ಸಂಸ್ಥೆಯಲ್ಲಿ ಅವಕಾಶ ಇದ್ದರೆ ಕೊಡಿ, ಖಂಡಿತ ಬಂದು ಸಿನಿಮಾ ಮಾಡಿಕೊಡುತ್ತೇನೆ” ಎಂದರು ನಟ ದರ್ಶನ್. ಅದಕ್ಕೆ ನಗುತ್ತಲೇ ಒಪ್ಪಿಗೆಯನ್ನೂ ಸೂಚಿಸಿದಂತಿತ್ತು ಧನಂಜಯ್. ನಾಗಭೂಷಣ್ ಹಾಗೂ ಪ್ರೇಮ್ ಪುತ್ರಿ ಅಮೃತಾ ನಟಿಸಿರುವ ‘ಟಗರು ಪಲ್ಯ’ ಸಿನಿಮಾದ ಟ್ರೈಲರ್ ಅನ್ನು ದರ್ಶನ್ ಬಿಡುಗಡೆ ಮಾಡಿದರು. ಸಿನಿಮಾವನ್ನು ಡಾಲಿ ಪಿಕ್ಚರ್ಸ್ ವತಿಯಿಂದ ಧನಂಜಯ್ ನಿರ್ಮಾಣ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us