ಮನೆಯಲ್ಲಿ ದರ್ಶನ್ ಅನ್ನು ಪ್ರೀತಿಯಿಂದ ಏನೆಂದು ಕರೆಯುತ್ತಾರೆ ಗೊತ್ತೆ?

Darshan: ನಟ ದರ್ಶನ್ ಅವರನ್ನು ಅಭಿಮಾನಿಗಳು ಪ್ರೀತಿಯಿಂದ 'ಡಿ ಬಾಸ್' ಎನ್ನುತ್ತಾರೆ. ಗೆಳೆಯರು ದಚ್ಚು ಎನ್ನುತ್ತಾರೆ. ಕೆಲವರು ಲಂಬು ಎಂದೂ ಕರೆಯುತ್ತಾರೆ. ಆದರೆ ಮನೆಯಲ್ಲಿ ದರ್ಶನ್​ರ ತಾಯಿ, ಸಹೋದರಿ ಅವರನ್ನು ಪ್ರೀತಿಯಿಂದ ಏನೆಂದು ಕರೆಯುತ್ತಾರೆ ಗೊತ್ತೆ?

ಮನೆಯಲ್ಲಿ ದರ್ಶನ್ ಅನ್ನು ಪ್ರೀತಿಯಿಂದ ಏನೆಂದು ಕರೆಯುತ್ತಾರೆ ಗೊತ್ತೆ?
Follow us
ಮಂಜುನಾಥ ಸಿ.
|

Updated on: Oct 18, 2023 | 10:05 PM

ದರ್ಶನ್​ ತೂಗುದೀಪ (Darshan) ಅವರನ್ನು ಅಭಿಮಾನಿಗಳು ಪ್ರೀತಿಯಿಂದ ‘ಡಿ-ಬಾಸ್’ ಎನ್ನುತ್ತಾರೆ. ಆತ್ಮೀಯ ಗೆಳೆಯರು ದಚ್ಚು ಎನ್ನುತ್ತಾರೆ. ಲಂಬು ಎಂದು ಕರೆಯುವ ಕೆಲವು ಗೆಳೆಯರೂ ದರ್ಶನ್ ಅವರಿಗಿದ್ದಾರೆ. ಆದರೆ ದರ್ಶನ್ ಅವರನ್ನು ಅವರ ತಾಯಿ ಮೀನಾ ಹಾಗೂ ಅವರ ಸಹೋದರಿ ಏನೆಂದು ಕರೆಯುತ್ತಾರೆ ಗೊತ್ತೆ? ಇಂದು ‘ಟಗರು ಪಲ್ಯ’ ಸಿನಿಮಾದ ಕಾರ್ಯಕ್ರಮಕ್ಕೆ ಆಗಮಿಸಿದ್ದ ನಟಿ ತಾರಾ ಈ ವಿಷಯ ಹಂಚಿಕೊಂಡಿದ್ದಾರೆ.

ವೇದಿಕೆ ಮೇಲೆ ‘ಟಗರು ಪಲ್ಯ’ ಸಿನಿಮಾದ ಬಗ್ಗೆ ಮಾತನಾಡುತ್ತಿದ್ದ ನಟಿ ತಾರಾ, ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದ ದರ್ಶನ್ ಅವರನ್ನು ‘ಅಪ್ಪು’ ಎಂದು ಸಂಭೋಧಿಸಿದರು. ಬಳಿಕ, ಕ್ಷಮಿಸಿ, ದರ್ಶನ್ ಅವರನ್ನು ಅವರ ಮನೆಯಲ್ಲಿ ಅವರ ತಾಯಿ, ಸಹೋದರಿ ಎಲ್ಲ ಅಪ್ಪು ಎಂದೇ ಕರೆಯುವುದು ಹಾಗಾಗಿ ನನಗೂ ದರ್ಶನ್ ಅನ್ನು ಅಪ್ಪು ಎಂದು ಕರೆದೇ ಅಭ್ಯಾಸ, ನಾನು ಅವರನ್ನು ಅಪ್ಪು ಎಂದೇ ಕರೆಯುವುದು ಎಂದರು.

ಇದನ್ನೂ ಓದಿ:‘ದರ್ಶನ್​ ಬಳಿ ಕೇಳೋಕೆ ನನ್ನಲ್ಲಿ ಕೆಲವು ಪ್ರಶ್ನೆಗಳಿವೆ’; ಗೊಂದಲದ ಬಗ್ಗೆ ಧ್ರುವ ಸರ್ಜಾ ಮಾತು 

ದರ್ಶನ್ ಬಂದಿದ್ದು ನನಗೆ ಬಹಳ ಖುಷಿಯಾಯಿತು. ಒಳ್ಳೆಯ ಮನಸ್ಸುಗಳು ಒಟ್ಟಿಗೆ ಸೇರಿದಾಗ ಗೆಲುವು ಶತಸಿದ್ಧ. ನೀನು ಇಂದು ಬಂದು ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಿರುವುದಕ್ಕೆ ವೈಯಕ್ತಿಕವಾಗಿ ಹಾಗೂ ಸಿನಿಮಾ ತಂಡದ ಭಾಗವಾಗಿ ನಾನು ಧನ್ಯವಾದ ತಿಳಿಸುತ್ತೀನಿ ಎಂದ ತಾರಾ ಚಿತ್ರತಂಡದ ಎಲ್ಲರಿಗೂ ಶುಭಾಶಯಗಳನ್ನು ತಿಳಿಸಿದರು.

ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಿದ ದರ್ಶನ್ ಚಿತ್ರತಂಡದ ಎಲ್ಲರಿಗೂ ಶುಭಾಶಯಗಳನ್ನು ತಿಳಿಸಿದರು. ಸಿನಿಮಾದ ನಾಯಕ ನಾಗಭೂಷಣ್, ನಿರ್ಮಾಪಕ ಡಾಲಿ ಧನಂಜಯ್, ನಾಯಕಿ ಪ್ರೇಮ್ ಪುತ್ರಿ ಅಮೃತಾ, ನಿರ್ದೇಶಕ ಉಮೇಶ್ ಇನ್ನೂ ಹಲವರಿಗೆ ವೈಯಕ್ತಿಕವಾಗಿ ವಿಷ್ ಮಾಡಿದ ನಟ ದರ್ಶನ್ ಈ ಸಿನಿಮಾ ದೊಡ್ಡ ಹಿಟ್ ಆಗಲೆಂದು ಶುಭ ಹಾರೈಸಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ