ನಾಗಭೂಷಣ್, ಅಮೃತಾ​ ನಟನೆಯ ‘ಟಗರು ಪಲ್ಯ’ ಚಿತ್ರದ ಟ್ರೇಲರ್​ ಬಿಡುಗಡೆ ಮಾಡಿದ ದರ್ಶನ್​

ಅಕ್ಟೋಬರ್ 27ರಂದು ‘ಟಗರು ಪಲ್ಯ’ ಸಿನಿಮಾ ರಿಲೀಸ್​ ಆಗಲಿದೆ. ಈಗ ಟ್ರೇಲರ್​ ಬಿಡುಗಡೆ ಮಾಡುವ ಮೂಲಕ ಕೌತುಕ ಹೆಚ್ಚಿಸಲಾಗಿದೆ. ನಟ ದರ್ಶನ್​ ಅವರು ಟ್ರೇಲರ್​ ರಿಲೀಸ್​ ಮಾಡಿ ಶುಭ ಕೋರಿದ್ದಾರೆ. ಅಕ್ಟೋಬರ್ 27ರಂದು ‘ಟಗರು ಪಲ್ಯ’ ಸಿನಿಮಾ ರಿಲೀಸ್​ ಆಗಲಿದೆ. ಉಮೇಶ್ ಕೆ. ಕೃಪ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.

ನಾಗಭೂಷಣ್, ಅಮೃತಾ​ ನಟನೆಯ ‘ಟಗರು ಪಲ್ಯ’ ಚಿತ್ರದ ಟ್ರೇಲರ್​ ಬಿಡುಗಡೆ ಮಾಡಿದ ದರ್ಶನ್​
‘ಟಗರು ಪಲ್ಯ’ ಸಿನಿಮಾ ತಂಡ
Follow us
ಮದನ್​ ಕುಮಾರ್​
|

Updated on: Oct 19, 2023 | 6:08 PM

ನಟಿ ಅಮೃತಾ ಪ್ರೇಮ್​ (Amrutha Prem) ಹಾಗೂ ನಟ ನಾಗಭೂಷಣ್ ಮುಖ್ಯಭೂಮಿಕೆ ನಿಭಾಯಿಸಿರುವ ‘ಟಗರು ಪಲ್ಯ’ ಸಿನಿಮಾ ಹಲವು ಕಾರಣಗಳಿಂದ ಸದ್ದು ಮಾಡುತ್ತಿದೆ. ಡಾಲಿ ಧನಂಜಯ್ ಅವರು ನಿರ್ಮಾಣ ಮಾಡಿರುವ 3ನೇ ಸಿನಿಮಾ ಇದು. ಈ ಸಿನಿಮಾದ ಟ್ರೇಲರ್ ರಿಲೀಸ್​ ಆಗಿದೆ. ಟ್ರೇಲರ್​ ಬಿಡುಗಡೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದು ನಟ ದರ್ಶನ್​. ‘ಟಗರು ಪಲ್ಯ’ ಟ್ರೇಲರ್ ನೋಡಿ ಖುಷಿಪಟ್ಟ ದರ್ಶನ್​ (Darshan) ಅವರು ಚಿತ್ರತಂಡಕ್ಕೆ ಶುಭ ಕೋರಿದರು. ಈ ಚಿತ್ರದಲ್ಲಿ ಅಮೃತಾ ಪ್ರೇಮ್​, ನಾಗಭೂಷಣ್ ಜೊತೆ ತಾರಾ ಅನುರಾಧಾ, ರಂಗಾಯಣ ರಘು, ವಾಸುಕಿ ವೈಭವ್​, ಶರತ್ ಲೋಹಿತಾಶ್ವ, ವೈಜನಾಥ್ ಬಿರಾದಾರ್ ಮುಂತಾದವರು ನಟಿಸಿದ್ದಾರೆ. ಅಕ್ಟೋಬರ್ 27ರಂದು ‘ಟಗರು ಪಲ್ಯ’ ಸಿನಿಮಾ (Tagaru Palya Movie) ರಿಲೀಸ್​ ಆಗಲಿದೆ. ಉಮೇಶ್ ಕೆ. ಕೃಪ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.

ಸತೀಶ್ ನೀನಾಸಂ, ‘ನೆನಪಿರಲಿ’ ಪ್ರೇಮ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ‘ಟಗರು ಪಲ್ಯ’ ಚಿತ್ರದ ಟ್ರೇಲರ್​ ರಿಲೀಸ್​ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ದರ್ಶನ್ ಅವರು ಟ್ರೇಲರ್​ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ. ‘ಟ್ರೇಲರ್ ನೋಡಿದಾಗ ಖುಷಿಯಾಯಿತು. ಸೆವೆನ್​ ಸ್ಟಾರ್ ಸುಲ್ತಾನ್ ಟಗರು ಚೆನ್ನಾಗಿ ಆ್ಯಕ್ಟ್ ಮಾಡಿದೆ. ಅಮೃತಾ ಪ್ರೇಮ್​​ ಅವರಿಗೆ ಚಿತ್ರರಂಗಕ್ಕೆ ವೆಲ್​ಕಮ್​. ನಮ್ಮದು ಸಣ್ಣ ಫಿಲ್ಮ್​ ಇಂಡಸ್ಟ್ರಿ. ನೀಟ್ ಆಗಿರುವ ಇಂಡಸ್ಟ್ರಿ. ನಮ್ಮ‌ಮಣ್ಣಿನ ಸೊಗಡು ಇರುವ ಸಿನಿಮಾ ಇದು. ಸಿನಿಮಾಗೆ ಒಳ್ಳೆಯದಾಗಲಿ. ಧನಂಜಯ್ ಅವರು ಕಷ್ಟಪಟ್ಟು ಮೇಲೆ ಬಂದವರು. ಬಡವರ ಮಕ್ಕಳು ದೊಡ್ಡವರು ಆಗಬೇಕು. ನಾಗಭೂಷಣ್ ಅಭಿಮಾನಿ ನಾನು’ ಎಂದರು ದರ್ಶನ್​.

ಟಗರು ಪಲ್ಯ ಸಿನಿಮಾದ ಟ್ರೇಲರ್​ ಬಿಡುಗಡೆ ಕಾರ್ಯಕ್ರಮ

‘ಇದು ಸಂಬಂಧಗಳನ್ನು ನೆನಪಿಸುವ ಸಿನಿಮಾ’ ಎಂದು ಡಾಲಿ ಧನಂಜಯ್ ಹೇಳಿದ್ದಾರೆ. ‘ಉಮೇಶ್ ಅವರು ಕಥೆ ಹೇಳಿದಾಗ ನನಗೆ ಬಹಳ ಇಷ್ವವಾಯ್ತು. ಒಳ್ಳೆಯ ಪ್ರತಿಭೆಗಳಿಗೆ ಬಂಡವಾಳ ಹೂಡುವುದರಲ್ಲಿ ನನಗೆ ಖುಷಿಯಿದೆ. ಈ ತಂಡ ನನಗೆ ಚೆನ್ನಾಗಿ ಸಹಕಾರ ನೀಡಿದೆ. ನಾಗಭೂಷಣ್ ಯಾವುದೇ ಪಾತ್ರ ಸಿಕ್ಕರೂ ತೂಗಿಸಿಕೊಂಡು ಹೋಗುತ್ತಾರೆ. ಈ ಸಿನಿಮಾದಲ್ಲಿ ಪ್ರೇಕ್ಷಕರು ಬೇರೆಯದೇ ನಾಗಭೂಷಣ್​ನ​ ನೋಡಬಹುದು. ಅಮೃತಾ ಪ್ರೇಮ್​ ಅವರು ಕನ್ನಡ ಚಿತ್ರರಂಗದ ಮಹಾಲಕ್ಷ್ಮೀ ರೀತಿ ಕಾಣುತ್ತಾರೆ’ ಎಂದು ಡಾಲಿ ಹೇಳಿದ್ದಾರೆ.

ಇದನ್ನೂ ಓದಿ: ಮಕ್ಕಳು ಜನಿಸಿದಾಗ ಜೇಬಿನಲ್ಲಿ ಎಷ್ಟು ಹಣವಿತ್ತು: ನಡೆದು ಬಂದ ಹಾದಿ ನೆನೆದ ನಟ ಪ್ರೇಮ್

‘ನನಗೆ ಈ ಸಿನಿಮಾದ ಪಾತ್ರ ತೃಪ್ತಿ ಕೊಟ್ಟಿದೆ. ನಾನು ಹಳ್ಳಿಯ ಹುಡುಗ. ಹಾಗಾಗಿ ಈ ಸಿನಿಮಾದ ಕಥೆ ನನಗೆ ಮತ್ತಷ್ಟು ಕನೆಕ್ಟ್ ಆಗಿದೆ’ ಎಂದು ನಾಗಭೂಷಣ್ ಹೇಳಿದ್ದಾರೆ. ದರ್ಶನ್ ಅವರಿಂದ ಟ್ರೇಲರ್ ರಿಲೀಸ್​ ಆಗಿದ್ದಕ್ಕೆ ನಟಿ ಅಮೃತಾ ಪ್ರೇಮ್​ ಸಖತ್​ ಹ್ಯಾಪಿ ಆಗಿದ್ದಾರೆ. ‘ಜೀವನ ಪೂರ್ತಿ ನನ್ನ ಪಾಲಿಗೆ ಈ ಕ್ಷಣ ನೆನಪಿನಲ್ಲಿ ಇರುತ್ತೆ. ಡಾಲಿ ಪಿಕ್ಚರ್ಸ್ ಬ್ಯಾನರ್​ ಮೂಲಕ ನನಗೆ ಚಾನ್ಸ್​ ಸಿಕ್ಕಿದ್ದಕ್ಕೆ ಎಷ್ಟು ಸಂತೋಷ ಇದೆಯೋ ದರ್ಶನ್ ಅವರಿಂದ ಟ್ರೇಲರ್ ಲಾಂಚ್ ಆಗಿದ್ದಕ್ಕೂ ಅಷ್ಟೇ ಖುಷಿ ಇದೆ. ನಮ್ಮ ಕುಟುಂಬಕ್ಕೆ ಅವರು ಹತ್ತಿರದವರು’ ಎಂದಿದ್ದಾರೆ ಅಮೃತಾ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು