ಬೆಂಗಳೂರು ಕಂಬಳ ಕೆರೆಗೆ ಅಶ್ವಿನಿ ಪುನಿತ್​ ರಾಜಕುಮಾರ್​​ರಿಂದ ಚಾಲನೆ: ಅಶೋಕ್ ರೈ

ಇತಿಹಾಸದಲ್ಲೇ ಮೊದಲ ಬಾರಿಗೆ ರಾಜಧಾನಿ ಬೆಂಗಳೂರಿನಲ್ಲಿ ಕಂಬಳ ಪಂದ್ಯ ನಡೆಸಲಾಗುತ್ತಿದೆ. ದಿನಾಂಕ 25 ಮತ್ತು 26 ರಂದು ಎರಡು ದಿನ ಅರಮನೆ ಮೈದಾನದಲ್ಲಿ ಕಂಬಳ ಪಂದ್ಯ ನಡೆಯಲಿದೆ. ಕಂಬಳ ವೀಕ್ಷಣೆಗೆ ಲಕ್ಷಾಂತರ ಜನರು ಸೇರಲಿದ್ದಾರೆ. ಈಗಾಗಲೆ ತಯಾರಿ ಪೂರ್ಣಗೊಂಡಿದೆ. ಕಂಬಳ ಕುರಿತಾಗಿ ಬೆಂಗಳೂರು ಕಂಬಳ ಸಮಿತಿಯ ಅಧ್ಯಕ್ಷ ಅಶೋಕ್ ರೈ ಸುದ್ದಿಗೋಷ್ಠಿ ನಡೆಸಿ ಹಲವು ವಿಚಾರ ತಿಳಿಸಿದರು.

ಬೆಂಗಳೂರು ಕಂಬಳ ಕೆರೆಗೆ ಅಶ್ವಿನಿ ಪುನಿತ್​ ರಾಜಕುಮಾರ್​​ರಿಂದ ಚಾಲನೆ: ಅಶೋಕ್ ರೈ
ಅಶ್ವಿನಿ ಪುನಿತ್​​ ರಾಜಕುಮಾರ್​, ಕಂಬಳ
Follow us
Poornima Agali Nagaraj
| Updated By: ವಿವೇಕ ಬಿರಾದಾರ

Updated on:Nov 25, 2023 | 6:52 AM

ಬೆಂಗಳೂರು ನ.24: ಕರಾವಳಿ ಭಾಗದ ಎಲ್ಲಾ ಸಂಘ-ಸಂಸ್ಥೆ, ಜಾತಿಯವರ ಜೊತೆ ಸಮಾಲೋಚನೆ ನಡೆಸಿ ಒಗ್ಗಟ್ಟಿನಿಂದ ಬೆಂಗಳೂರಿನಲ್ಲಿ (Bengaluru) ಕಂಬಳ (Kambal) ನಡೆಸಬೇಕು ಎಂಬ ತೀರ್ಮಾನ ಮಾಡಿದ್ದೇವೆ. ಇದು ನಮ್ಮ ಸಂಕಲ್ಪವೂ ಆಗಿದೆ. ಶನಿವಾರ (ನ.25)ರ ಬೆಳಿಗ್ಗೆ 10.30 ಕ್ಕೆ ಕಾರ್ಯಕ್ರಮ ಆರಂಭವಾಗುತ್ತದೆ. ಪವರ್​ ಸ್ಟಾರ್​ ಪುನೀತ್ ರಾಜಕುಮಾರ್ (Puneeth Rajkumar) ಅವರ ಪತ್ನಿ ಅಶ್ವಿನಿ ಪುನಿತ್​ ರಾಜಕುಮಾರ್ (Ashwini Puneeth Rajkumar) ಅವರು ಕಂಬಳ ಕೆರೆಗೆ​ ಚಾಲನೆ ನೀಡಲಿದ್ದಾರೆ. ಸಂಜೆ 5.30 ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಂಪುಟ ಸಚಿವರು ಬರುತ್ತಾರೆ ಎಂದು ಬೆಂಗಳೂರು ಕಂಬಳ ಸಮಿತಿಯ ಅಧ್ಯಕ್ಷ ಹಾಗೂ ​ಶಾಸಕ ಅಶೋಕ್ ರೈ ಹೇಳಿದರು.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಸಾಯಂಕಾಲ ಸಭಾ ಕಾರ್ಯಕ್ರಮ ನಡೆಯುತ್ತೆ. ಶನಿವಾರ ಬೆಳಿಗ್ಗೆ 11 ಗಂಟೆ ಬಳಿಕ ನಟ ನಟಿಯರು ಭಾಗಿಯಾಗುತ್ತಾರೆ. ರವಿವಾರ (ನ.26) ರಂದು ಸಂಜೆ 5.30ಕ್ಕೆ ಕಂಬಳ ಕಾರ್ಯಕ್ರಮ ಮುಗಿಯುತ್ತೆ ಎಂದು ತಿಳಿಸಿದರು.

ಇದನ್ನೂ ಓದಿ: ಅಪ್ಪು ಸ್ಮರಣೆಯಲ್ಲಿ ನಡೆಯಲಿರುವ ‘ರಾಜ್ ಕಪ್’ಗೆ ಚಾಲನೆ ನೀಡಿದ ಅಶ್ವಿನಿ

ಕಂಬಳ 6 ಸೆಗ್ಮೆಂಟ್​ನಲ್ಲಿ ನಡೆಯುತ್ತೆ. ಕಂಬಳ ಇತಿಹಾಸದಲ್ಲಿ ತೃತೀಯ ಬಹುಮಾನ ಇರಲಿಲ್ಲ. ಈ ಸಲ ಮೂರನೇ ಸ್ಥಾನಕ್ಕೂ ಕೂಡ 4 ಗ್ರಾಂ ಚಿನ್ನ 25 ಸಾವಿರ ಬಹುಮಾನ ನೀಡಲು ನಿರ್ಧರಿಸಿದ್ದೇವೆ. ಮೊದಲನೇ ಬಹುಮಾನ 16 ಗ್ರಾಂ ಚಿನ್ನ 1 ಲಕ್ಷ ನಗದು ನೀಡಲಾಗುತ್ತೆ. ಎರಡನೇ ಬಹುಮಾನ 8 ಗ್ರಾಂ ಚಿನ್ನ 50 ಸಾವಿರ ನಗದನ್ನ ನೀಡಲಾಗುತ್ತೆ. ಕೋಣ ಓಡಿಸಿ ವಿಜಯಶಾಲಿ ಆದವರಿಗೆ ಕೂಡ ಬಹುಮಾನ ಇದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕಂಬಳ ಸಮಿತಿಯ ಗೌರವಾಧ್ಯಕ್ಷ ಪ್ರಕಾಶ್ ಶೆಟ್ಟಿ, ಅಧ್ಯಕ್ಷ, ಶಾಸಕ ಅಶೋಕ್ ಕುಮಾರ್ ರೈ, ಕಂಬಳ ಇತಿಹಾಸ ತಜ್ಞ ಗುಣುಪಾಲ, ಕಡಂಬ ಭಾಗಿಯಾಗಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:23 pm, Fri, 24 November 23