Sign In

By signing in or creating an account, you agree with Associated Broadcasting Company's Terms & Conditions and Privacy Policy.

DK Shivakumar DA Case; ಮರ್ಯಾದೆಗೆಟ್ಟವರಿಗೆ, ದುರಹಂಕಾರಿಗಳಿಗೆ ನ್ಯಾಯಾಲಯಗಳ ಬಗ್ಗೆ ಗೌರವ ಇರಲ್ಲ: ಹೆಚ್ ಡಿ ಕುಮಾರಸ್ವಾಮಿ

DK Shivakumar DA Case; ಮರ್ಯಾದೆಗೆಟ್ಟವರಿಗೆ, ದುರಹಂಕಾರಿಗಳಿಗೆ ನ್ಯಾಯಾಲಯಗಳ ಬಗ್ಗೆ ಗೌರವ ಇರಲ್ಲ: ಹೆಚ್ ಡಿ ಕುಮಾರಸ್ವಾಮಿ

ಅರುಣ್​ ಕುಮಾರ್​ ಬೆಳ್ಳಿ
|

Updated on:Nov 24, 2023 | 1:46 PM

ಬೆಳಗಾವಿ ವಿಧಾನಸಭಾ ಆಧಿವೇಶನಕ್ಕೆ ಕೇವಲ ಒಂದು ವಾರ ಬಾಕಿಯಿರುವಾಗ ಕಾಂಗ್ರೆಸ್ ಸರ್ಕಾರ ಡಿಕೆ ಶಿವಕುಮಾರ್ ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸಿಬಿಐ ತನಿಖೆಯನ್ನು ಹಿಂಪಡೆದಿದ್ದು ನಿಸ್ಸಂದೇಹವಾಗಿ ವಿರೋದ ಪಕ್ಷಗಳ ಕೈಗೆ ಒಂದು ಅಸ್ತ್ರ ನೀಡಿದಂತಾಗಿದೆ. ಬಿಜೆಪಿ ಮತ್ತು ಜೆಡಿಎಸ್ ನಾಯಕರು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಹಲವಾರು ಅಂಶಗಳನ್ನು ಪಟ್ಟಿ ಮಾಡಿಟ್ಟುಕೊಂಡಿದ್ದಾರೆ, ಆ ಪಟ್ಟಿಗೆ ಸರ್ಕಾರದ ಈ ನಿರ್ಧಾರ ಪ್ರಬಲ ಅಂಶವಾಗಿ ಸೇರ್ಪಡೆಯಾಗಲಿದೆ.

ಬೆಂಗಳೂರು: ವಿರೋಧ ಪಕ್ಷಗಳ ನಾಯಕರು ಡಿಕೆ ಶಿವಕುಮಾರ್ (DK Shivakumar) ಅಕ್ರಮ ಆಸ್ತಿ ಗಳಿಕೆ ಪ್ರಕರಣಲ್ಲಿ ಸಿಬಿಐ ತನಿಖೆಯನ್ನು ಸಿದ್ದರಾಮಯ್ಯ ಸರ್ಕಾರ (Siddaramaiah government) ಹಿಂಪಡೆದಿರುವುದನ್ನು ತೀವ್ರವಾಗಿ ಟೀಕಿಸುತ್ತಿವೆ. ನಗರದಲ್ಲಿಂದು ಅವರಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಪ್ರಕರಣ ನ್ಯಾಯಾಲಯಲ್ಲಿರುವುದರಿಂದ ಮಾತಾಡುವುದು ಉಚಿತವಲ್ಲ ಎಂದು ಹೇಳಿದರು. ಅಲ್ಲಾ ಸರ್, ಸರ್ಕಾರದ ನಿರ್ಧಾರದ ಬಗ್ಗೆ ಹೇಳಿ, ಇಂಥ ನಿರ್ಧಾರವನ್ನು ತೆಗೆದುಕೊಳ್ಳಬಹುದಾ? ಅಂತ ಕೇಳಿದರೆ, ಈ ಸರ್ಕಾರ ಇರೋದೇ ದರೋಡೆಕೋರರು ಮತ್ತು ಲೂಟಿಕೋರರನ್ನು ರಕ್ಷಣೆ ಮಾಡೋದಿಕ್ಕೆ ಎಂದು ಪೇಪರ್ ಗಳಿಗೆ ಸಹಿ ಹಾಕುತ್ತಾ ಕುಮಾರಸ್ವಾಮಿ ಹೇಳಿದರು. ಪ್ರಕರಣ ನ್ಯಾಯಾಲಯದಲ್ಲಿರುವಾಗ ಸರ್ಕಾರ ತನಿಖೆ ಆದೇಶ ಹಿಂಪಡೆವುದು ಸಾಧ್ಯವೇ ಅಂತ ಕೇಳಿದರೆ ಮರ್ಯಾದೆ ಇಲ್ಲದವರಿಗೆ ಮತ್ತು ದುರಹಂಕಾರಿಗಳಿಗೆ ನ್ಯಾಯಾಲಯಗಳ ಬಗ್ಗೆ ಗೌರವ ಹೇಗೆ ಇರಲು ಸಾಧ್ಯ ಅಂತ ಹೇಳಿದ ಕುಮಾರಸ್ವಾಮಿ, ಇದರ ಬಗ್ಗೆ ಮತ್ತೊಮ್ಮೆ ವಿವರವಾಗಿ ಮಾತಾಡುತ್ತೇನೆ ಅಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Nov 24, 2023 12:25 PM