ಸಂವೈಧಾನಿಕ ಸಂಸ್ಥೆಗಳಿಂದ ನ್ಯಾಯಯುತ ಪರಿಹಾರ ಸಿಗುವ ನಿರೀಕ್ಷೆ ನಶಿಸಿದೆ: ಹೆಚ್ ಡಿ ಕುಮಾರಸ್ವಾಮಿ
ಡಿಕೆ ಶಿವಕುಮಾರ್ ಮತ್ತು ಹೆಚ್ ಡಿ ಕುಮಾರಸ್ವಾಮಿ ಕೇವಲ ಮಾಧ್ಯಮಗಳ ಮುಂದೆ ಪರಸ್ಪರ ದೋಷಾರೋಪಣೆ ಮಾಡುತ್ತಾರೆ. ಹಾಗಾಗಿ ಇವರನ್ನು ಒಂದೇ ವೇದಿಕೆ ಮೇಲೆ ಕೂರಿಸಿ ಮಾತಾಡಿಸುವ ಅವಶ್ಯಕತೆಯಿದೆ ಅಂತ ಕನ್ನಡಿಗರು ಭಾವಿಸುತ್ತಾರೆ. ಅಂದಹಾಗೆ, ಬೆಳಗಾವಿ ವಿಧಾನ ಸಭಾ ಅಧವೇಶನ ಡಿಸೆಂಬರ್ 4ರಿಂದ ಆರಂಬವಾಗಲಿದೆ. ಅಲ್ಲಿ ಇವರು ಪರಸ್ಪರ ಎದುರಾಗೋದು ನಿಶ್ಚಿತ.
ರಾಮನಗರ: ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ತಮ್ಮ ಮಾತಿನ ಜಗಳ ಮುಂದುವರಿಸಿದ್ದಾರೆ. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳು, ಕುಮಾರಸ್ವಾಮಿಯವರು ಮಾಡಿದ ಆರೋಪಗಳು ಸಾಬೀತಾದರೆ, ರಾಜಕೀಯ ಸನ್ಯಾಸ ತೆಗೆದುಕೊಳ್ಳುತ್ತೇನೆ ಅಂತ ಶಿವಕುಮಾರ್ ಹೇಳಿದ್ದನ್ನು ಮಾಜಿ ಸಿಎಂಗೆ ಹೇಳಿದಾಗ, ಅವರ ವಿರುದ್ಧ ಆರೋಪ ಮಾಡಲು ಈಗ ಏನೂ ಉಳಿದಿಲ್ಲ, ಎಲ್ಲವನ್ನೂ ಲೂಟಿ ಮಾಡಿಯಾಗಿದೆ ಅಂತ ಹೇಳಿದರು. ಮುಂದುವರಿದು ಮಾತಾಡಿದ ಅವರು, ಕಳ್ಳರು ಸುಳ್ಳರು ತಮ್ಮಲ್ಲಿರುವ ಹಣದ ದರ್ಪದಿಂದ ಮೆರೆಯುತ್ತಾರೆ, ಯಾರನ್ನು ಬೇಕಾದರೂ ಖರೀದಿಸುವ ದಾರ್ಷ್ಟ್ಯತೆ ಮೆರೆಯುತ್ತಾರೆ. ನಮ್ಮ ದೇಶದಲ್ಲಿ ಸಂವೈಧಾನಿಕ ಸಂಸ್ಥೆಗಳಿಂದ ನ್ಯಾಯ ಸಿಕ್ಕೀತು ಎಂಬ ನಿರೀಕ್ಷೆ ಉಳಿದಿಲ್ಲ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos