ದಲಿತರ ಭೂಮಿ ಲೂಟಿ ಮಾಡಿದವರಿಂದ ನಾನೇನೂ ಕಲಿಯಬೇಕಿಲ್ಲ: ಹೆಚ್ ಡಿ ಕುಮಾರಸ್ವಾಮಿ
ತಾನ್ಯಾವತ್ತೂ ಅಧಿಕಾರಕ್ಕಾಗಿ ಆಸೆ ಪಟ್ಟಿದಿಲ್ಲ, ಅಧಿಕಾರ ಅನ್ನೋದು ತನ್ನ ಮನೆ ಆಸ್ತಿ ಅಲ್ಲ, ಅದನ್ನು ಜನ ನೀಡುತ್ತಾರೆ, ಇನ್ನೂ 20 ವರ್ಷ ಅವರೇ ಗೂಟ ಹೊಡೆದುಕೊಂಡು ಆಧಿಕಾರ ನಡೆಸಲಿ, ಆದರೆ ಲೂಟಿ ಮಾಡೋದನ್ನು ನಿಲ್ಲಿಸಲಿ, ಜನರಿಗೆ ಮಕ್ಮಲ್ ಟೋಪಿ ಹಾಕೋದು ಬಿಡಲಿ ಎಂದು ಕುಮಾರಸ್ವಾಮಿ ಹೇಳಿದರು.
ಬೆಂಗಳೂರು: ಕಾಂಗ್ರೆಸ್ ನಾಯಕರು ಮಾಡುತ್ತಿರುವ ವಿದ್ಯುತ್ ಕಳ್ಳತನದ ಅರೋಪಗಳಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ವಿಜಯಪುರದ ಸಹಕಾರ ಸಂಘವೊಂದಕ್ಕೆ (Cooperative society) ಸಂಬಂಧಿಸಿದ ಪ್ರಕರಣದಲ್ಲಿ ಜಯನಗರದ ಸುಳ್ಳು ಅಡ್ರೆಸ್ ನೀಡಿ ದಲಿತರ ಭೂಮಿಯನ್ನು ಕಬಳಿಸಿದ ಜನರಿಂದ ತಾನು ಬದುಕುವ ರೀತಿ ಕಲಿಯಬೇಕೆ? ಎಂದು ಕುಮಾರಸ್ವಾಮಿ ಹೇಳಿದರು. ತಮ್ಮನ್ನು ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡಲಾಗುತ್ತಿದೆಯೇ ಎಂದು ಕೇಳಿದ ಪ್ರಶ್ನೆಗೆ ಅವರು, ಕಾಂಗ್ರೆಸ್ (Congress) ಏನೇ ಪ್ರಯತ್ನ ಮಾಡಿದರೂ ತನ್ನ ಬಾಯಿ ಮುಚ್ಚಿಸುವುದು ಸಾಧ್ಯವಿಲ್ಲ, ತಾನ್ಯಾವತ್ತೂ ಅಧಿಕಾರಕ್ಕಾಗಿ ಆಸೆ ಪಟ್ಟಿದಿಲ್ಲ, ಅಧಿಕಾರ ಅನ್ನೋದು ತನ್ನ ಮನೆ ಆಸ್ತಿ ಅಲ್ಲ, ಅದನ್ನು ಜನ ನೀಡುತ್ತಾರೆ, ಇನ್ನೂ 20 ವರ್ಷ ಅವರೇ ಗೂಟ ಹೊಡೆದುಕೊಂಡು ಆಧಿಕಾರ ನಡೆಸಲಿ, ಆದರೆ ಲೂಟಿ ಮಾಡೋದನ್ನು ನಿಲ್ಲಿಸಲಿ, ಜನರಿಗೆ ಮಕ್ಮಲ್ ಟೋಪಿ ಹಾಕೋದು ಬಿಡಲಿ ಎಂದು ಕುಮಾರಸ್ವಾಮಿ ಹೇಳಿದರು. ತನ್ನ ಹೇಳಿಕೆಗಳಿಂದ ಸರ್ಕಾರಕ್ಕೆ ಹಲವಾರು ಬಾರಿ ಮುಜುಗುರ ಉಂಟಾಗುವ ಸ್ಥಿತಿ ಎದುರಾಗಿದೆ, ಹಾಗಾಗೇ ಬಾಯಿ ಮುಚ್ಚಿಸುವ ಪ್ರಯತ್ನ ಎಂದು ಕುಮಾರಸ್ವಾಮಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ