ತಾಂಡದಲ್ಲಿ ದೀಪಾವಳಿ ಸಂಭ್ರಮ;ಬೆಟ್ಟಹತ್ತಿ ಹೂ ತಂದು ದೇವಸ್ಥಾನದ ಎದುರು ನೃತ್ಯ
ಗಜೇಂದ್ರಗಡ(Gajendragad) ತಾಂಡಾದಲ್ಲಿನ ದೀಪಾವಳಿ ಸಂಭ್ರಮ ಮನೆ ಮಾಡಿದ್ದು, ಇಲ್ಲಿ ಹಲವು ವರ್ಷದಿಂದ ವಿಶಿಷ್ಠವಾಗಿ ದೀಪಾವಳಿ ಆಚರಿಸುವ ಮೂಲಕ ತಮ್ಮ ಗತಕಾಲದ ಸಂಪ್ರದಾಯವನ್ನು ಸಾಂಪ್ರದಾಯಿಕ ಉಡುಗೆತೊಟ್ಟು ಸಂಭ್ರಮದಿಂದ ಮೆಲಕು ಹಾಕುತ್ತಾರೆ. ಎಲ್ಲ ಯುವತಿಯರು ಸೇರಿ ಸಮೀಪದ ಬೆಟ್ಟಕ್ಕೆ ಹೋಗಿ ಲಂಬಾಣಿ ಸಾಹಿತ್ಯದ ಹಾಡಿನೊಂದಿಗೆ ಹೂ ಹರಿದುಕೊಂಡು ಬರುತ್ತಾರೆ.
ಗದಗ, ನ.14: ಜಿಲ್ಲೆಯ ಗಜೇಂದ್ರಗಡ(Gajendragad) ತಾಂಡಾದಲ್ಲಿನ ದೀಪಾವಳಿ ಸಂಭ್ರಮ ಮನೆ ಮಾಡಿದ್ದು, ಇಲ್ಲಿ ಹಲವು ವರ್ಷದಿಂದ ವಿಶಿಷ್ಠವಾಗಿ ದೀಪಾವಳಿ ಆಚರಿಸುವ ಮೂಲಕ ತಮ್ಮ ಗತಕಾಲದ ಸಂಪ್ರದಾಯವನ್ನು ಸಾಂಪ್ರದಾಯಿಕ ಉಡುಗೆತೊಟ್ಟು ಸಂಭ್ರಮದಿಂದ ಮೆಲಕು ಹಾಕುತ್ತಾರೆ. ಎಲ್ಲ ಯುವತಿಯರು ಸೇರಿ ಸಮೀಪದ ಬೆಟ್ಟಕ್ಕೆ ಹೋಗಿ ಲಂಬಾಣಿ ಸಾಹಿತ್ಯದ ಹಾಡಿನೊಂದಿಗೆ ಹೂ ಹರಿದುಕೊಂಡು ಬರುತ್ತಾರೆ. ನಂತರ ಸಗಣಿಯಿಂದ ಹಟ್ಟೆವ್ವನನ್ನು(ಸಗಣಿಯಿಂದ) ತಯಾರಿಸಿ ಮನೆ ಬಾಗಿಲಿಗೆ ಇಟ್ಟು ಪೂಜಿಸುತ್ತಾರೆ. ನಂತರ ತಾಂಡಾದ ಸೇವಾಲಾಲ್ ದೇವಸ್ಥಾನದ ಎದುರು ಎಲ್ಲರೂ ಸೇರಿ ನೃತ್ಯಮಾಡಿ ಸಂಭ್ರಮಿಸುತ್ತಾರೆ. ನೃತ್ಯದ ನಂತರ ಒಬ್ಬರನ್ನೊಬ್ರು ತಬ್ಬಿಕೊಂಡು ಕಣ್ಣೀರಿಡುತ್ತಾರೆ. ಬರುವ ವರ್ಷದ ದೀಪಾವಳಿಯೊಳಗೆ ಮದುವೆಯಾಗುವ ಯುವತಿಯರು, ಗೆಳತಿಯರ ನೆನೆದು ಅಳುತ್ತಾರೆ. ಇನ್ನು ಈ ಕುರಿತು ಯುವತಿ ಸರಸ್ವತಿ ಎಂಬುವವರು ‘ಇಡೀ ತಾಂಡಾದ ಮನೆ, ಮನದಲ್ಲಿ ದೀಪಾವಳಿ ಹಬ್ಬದ ಸಂಭ್ರಮದಿಂದ ಮಾಡುತ್ತೇವೆ ಎಂದು ದೀಪಾವಳಿ ಸಡಗರದ ಬಗ್ಗೆ ಹೇಳಿದರು. ದೀಪದ ಹಬ್ಬ ದೀಪಾವಳಿ ಗಜೇಂದ್ರಗಡ ತಾಂಡಾ ಜನರ ಪಾಲಿಗೆ ಮಾತ್ರ ವಿಶಿಷ್ಠವಾಗಿದೆ. ಒಟ್ಟಿನಲ್ಲಿ ಈ ಬುಡಕಟ್ಟು ಜನಾಂಗದ ವಿಶಿಷ್ಠ ಆಚರಣೆ ಮಾತ್ರ ನಾಡಿನಲ್ಲಿನ ವಿವಿಧತೆಯಲ್ಲಿನ ಏಕತೆ ಸಾರುವಂತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ