KCC Trophy: ಡಿಸೆಂಬರ್ನಲ್ಲಿ ‘ಕನ್ನಡ ಚಲನಚಿತ್ರ ಕಪ್’; ಮಾಹಿತಿ ನೀಡಿದ ಕಿಚ್ಚ ಸುದೀಪ್
ಕ್ರಿಕೆಟ್ ಬಗ್ಗೆ ಆಸಕ್ತಿ ಹೊಂದಿರುವ ಅನೇಕ ಸೆಲೆಬ್ರಿಟಿಗಳು ಇದ್ದಾರೆ. ಈ ಕಾರಣಕ್ಕೆ ಕೆಸಿಸಿ ಆರಂಭಿಸಲಾಗಿದೆ. ‘ಕನ್ನಡ ಚಲನಚಿತ್ರ ಕಪ್’ ಆರಂಭ ಆಗುವಾಗ ಸೆಲೆಬ್ರಿಟಿಗಳು ಸಿನಿಮಾ ಕೆಲಸಗಳಿಗೆ ಬ್ರೇಕ್ ಕೊಟ್ಟು ಒಂದಷ್ಟು ದಿನ ಕ್ರಿಕೆಟ್ನಲ್ಲಿ ಕಳೆಯಲಿದ್ದಾರೆ.
ಕಿಚ್ಚ ಸುದೀಪ್ (Kichcha Sudeep) ಅವರಿಗೆ ಕ್ರಿಕೆಟ್ ಬಗ್ಗೆ ಸಾಕಷ್ಟು ಪ್ರೀತಿ ಇದೆ. ಈ ಕಾರಣಕ್ಕೆ ಸಿನಿಮಾ ಕೆಲಸಗಳ ಜೊತೆ ಅವರು ಕ್ರಿಕೆಟ್ ಕೂಡ ಆಡುತ್ತಾರೆ. ಈಗ ‘ಕನ್ನಡ ಚಲನಚಿತ್ರ ಕಪ್’ (KCC) ಬಗ್ಗೆ ಅವರು ಮಾಹಿತಿ ನೀಡಿದ್ದಾರೆ. ಡಿಸೆಂಬರ್ನಲ್ಲಿ ಕೆಸಿಸಿಯ ನಾಲ್ಕನೇ ಆವೃತ್ತಿ ಆರಂಭ ಆಗಲಿದೆ. ಈ ಬಗ್ಗೆ ಸುದೀಪ್ ಅವರು ಮಾಹಿತಿ ನೀಡಿದ್ದಾರೆ. ಈ ವಿಚಾರ ಕೇಳಿ ಫ್ಯಾನ್ಸ್ ಸಖತ್ ಖುಷಿಪಟ್ಟಿದ್ದಾರೆ.
ಕ್ರಿಕೆಟ್ ಬಗ್ಗೆ ಆಸಕ್ತಿ ಹೊಂದಿರುವ ಅನೇಕ ಸೆಲೆಬ್ರಿಟಿಗಳು ಇದ್ದಾರೆ. ಈ ಕಾರಣಕ್ಕೆ ಕೆಸಿಸಿ ಆರಂಭಿಸಲಾಗಿದೆ. ‘ಕನ್ನಡ ಚಲನಚಿತ್ರ ಕಪ್’ ಆರಂಭ ಆಗುವಾಗ ಸೆಲೆಬ್ರಿಟಿಗಳು ಸಿನಿಮಾ ಕೆಲಸಗಳಿಗೆ ಬ್ರೇಕ್ ಕೊಟ್ಟು ಒಂದಷ್ಟು ದಿನ ಕ್ರಿಕೆಟ್ನಲ್ಲಿ ಕಳೆಯಲಿದ್ದಾರೆ. ಈಗಾಗಲೇ ಯಶಸ್ವಿಯಾಗಿ ಕೆಸಿಸಿಯ ಮೂರು ಸೀಸನ್ ಪೂರ್ಣಗೊಂಡಿದೆ. ಈಗ ನಾಲ್ಕನೇ ಸೀಸನ್ ಆರಂಭ ಆಗಲಿದೆ. ನವೆಂಬರ್ 26ರಂದು ಹರಾಜು ಪ್ರಕ್ರಿಯೆ ನಡೆಯಲಿದೆ.
‘ಡಿಸೆಂಬರ್ 23ರಿಂದ ಡಿಸೆಂಬರ್ 25ರವರೆಗೆ ‘ಕೆಸಿಸಿ’ ನಾಲ್ಕನೇ ಸೀಸನ್ ನಡೆಯಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮ್ಯಾಚ್ಗಳು ನಡೆಯಲಿವೆ. ಕಳೆದ ಸೀಸನ್ಗಳಲ್ಲಿ ವಿದೇಶದ ಆಟಗಾರರು ಭಾಗಿ ಆಗಿದ್ದರು. ಈ ಬಾರಿಯೂ ವಿದೇಶಿ ಆಟಗಾರರು ಪಾಲ್ಗೊಳ್ಳುವ ಸಾಧ್ಯತೆ ಇದೆ. ಶಿವಣ್ಣ, ಉಪೇಂದ್ರ, ಧನಂಜಯ್, ಗಣೇಶ್, ದುನಿಯಾ ವಿಜಯ್, ಕೆಪಿ ಶ್ರೀಕಾಂತ್ ಸೇರಿ ಅನೇಕ ಸೆಲೆಬ್ರಿಟಿಗಳು ಈ ಮ್ಯಾಚ್ನಲ್ಲಿ ಭಾಗಿ ಆಗಲಿದ್ದಾರೆ.
The all new season#KCCpartIV Dec 23rd to 25th. At #ChinnaswamyStadium.@NimmaShivanna @nimmaupendra @Dhananjayaka @Official_Ganesh @OfficialViji @kp_sreekanth @Karthik1423 pic.twitter.com/eUY18tjn0S
— Kichcha Sudeepa (@KicchaSudeep) November 22, 2023
ಇದನ್ನೂ ಓದಿ: ‘ಕಬ್ಜ’ ಚಿತ್ರದಲ್ಲಿ ಗ್ಯಾಂಗ್ಸ್ಟರ್ ಪಾತ್ರ ಮಾಡಿದ್ದ ಈ ಕಲಾವಿದ ‘ಮ್ಯಾಕ್ಸ್’ ಚಿತ್ರಕ್ಕೆ ವಿಲನ್?
ಹಲವು ತಂಡಗಳು ಕೆಸಿಸಿಯಲ್ಲಿ ಭಾಗಿ ಆಗಲಿವೆ. ಎಷ್ಟು ಓವರ್ಗಳ ಮ್ಯಾಚ್, ಯಾವ ಯಾವ ತಂಡ ಇರಲಿದೆ, ಯಾವ ತಂಡಕ್ಕೆ ಯಾರು ಕ್ಯಾಪ್ಟನ್ ಎಂಬಿತ್ಯಾದಿ ವಿಚಾರಗಳ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ಸಿಗುವ ಸಾಧ್ಯತೆ ಇದೆ. ಈ ವರ್ಷದ ಆರಂಭದಲ್ಲಿ ಮೂರನೇ ಸೀಸನ್ ನಡೆದಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:11 pm, Wed, 22 November 23