‘ಕೆರೆಬೇಟೆ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಡುತ್ತಿರುವ ಹೊಸ ನಟಿ ಬಿಂದು ಶಿವರಾಮ್​

ವಿಶೇಷ ಕಥಾಹಂದರ ಇರುವ ‘ಕೆರೆಬೇಟೆ’ ಸಿನಿಮಾದ ಬಿಡುಗಡೆಗೆ ಚಿತ್ರತಂಡ ತಯಾರಿ ಮಾಡಿಕೊಳ್ಳುತ್ತಿದೆ. ಈ ಚಿತ್ರದಿಂದ ಸ್ಯಾಂಡಲ್​ವುಡ್​ಗೆ ಎಂಟ್ರಿ ನೀಡುತ್ತಿರುವ ನಟಿ ಬಿಂದು ಶಿವರಾಮ್​ ಅವರು ಉತ್ತಮ ಕಲಾವಿದೆಯಾಗಿ ಮಿಂಚುವ ಕನಸು ಕಂಡಿದ್ದಾರೆ. ಸೂಕ್ತ ತರಬೇತಿ ಪಡೆದುಕೊಂಡು ಅವರು ಮೊದಲ ಸಿನಿಮಾದಲ್ಲಿ ನಟಿಸಿದ್ದಾರೆ.

‘ಕೆರೆಬೇಟೆ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಡುತ್ತಿರುವ ಹೊಸ ನಟಿ ಬಿಂದು ಶಿವರಾಮ್​
ಬಿಂದು ಶಿವರಾಮ್​, ಗೌರಿ ಶಂಕರ್​
Follow us
ಮದನ್​ ಕುಮಾರ್​
|

Updated on:Nov 22, 2023 | 2:24 PM

ಚಿತ್ರರಂಗಕ್ಕೆ ಹೊಸ ಕಲಾವಿದರ ಆಗಮನ ಆಗುತ್ತಲೇ ಇರುತ್ತದೆ. ಪ್ರತಿಭೆ ಮತ್ತು ಅದೃಷ್ಟ ಇದ್ದವರು ಗಟ್ಟಿಯಾಗಿ ಇಲ್ಲಿ ನೆಲೆ ಕಂಡುಕೊಳ್ಳುತ್ತಾರೆ. ಬಣ್ಣದ ಲೋಕದಲ್ಲಿನ ಏರಿಳಿತಗಳು ಏನೇ ಇದ್ದರೂ ಇದೊಂದು ಆಕರ್ಷಕ ಕ್ಷೇತ್ರ. ಹೊಸಬರ ಆಗಮನದಿಂದ ಕನ್ನಡ ಚಿತ್ರರಂಗಕ್ಕೆ (Sandalwood) ಹೊಸತನವೂ ಬರುತ್ತದೆ. ಹೊಸ ಭರವಸೆಗಳು ಹುಟ್ಟಿಕೊಳ್ಳುತ್ತವೆ. ನಟಿ ಬಿಂದು ಶಿವರಾಮ್​ (Bindu Shivaram) ಅವರು ಈಗ ಚಂದನವನಕ್ಕೆ ಕಾಲಿಡುತ್ತಿದ್ದಾರೆ. ಮಲೆನಾಡಿನ ಕಥಾಹಂದರ ಹೊಂದಿರುವ ಕೆರೆಬೇಟೆ’ (Kerebete) ಸಿನಿಮಾದಲ್ಲಿ ಅವರು ನಾಯಕಿ ಆಗಿದ್ದಾರೆ. ಇದು ಅವರ ಮೊದಲ ಸಿನಿಮಾ. ಅವರ ಬಗ್ಗೆ ಇಲ್ಲಿದೆ ಒಂದಷ್ಟು ಮಾಹಿತಿ..

ಬಿಂದು ಶಿವರಾಮ್​ ಅವರು ಅಪ್ಪಟ ಕನ್ನಡದ ಹುಡುಗಿ. ‘ಕೆರೆಬೇಟೆ’ ಸಿನಿಮಾದಲ್ಲಿ ಅವರಿಗೆ ಹಳ್ಳಿ ಹುಡುಗಿಯ ಪಾತ್ರ ನೀಡಲಾಗಿದೆ. ಇಂಥ ಪಾತ್ರದಲ್ಲಿ ಮಿಂಚಬೇಕು ಎಂಬುದು ಅನೇಕ ನಟಿಯರ ಆಸೆ. ಮೊದಲ ಚಿತ್ರದಲ್ಲಿ ಬಿಂದು ಅವರಿಗೆ ಅಂಥ ಚಾನ್ಸ್​ ಸಿಕ್ಕಿದೆ. ಡಿಫರೆಂಟ್​ ಆದಂತಹ ಕಥಾಹಂದರ ಹೊಂದಿರುವ ಸಿನಿಮಾದ ಮೂಲಕ ಜನರ ಎದುರು ಬರುತ್ತಿರುವುದಕ್ಕೆ ಬಿಂದು ಅವರು ಎಗ್ಸೈಟ್​ ಆಗಿದ್ದಾರೆ. ಫಸ್ಟ್​ ಲುಕ್​ ಪೋಸ್ಟರ್​ ಬಿಡುಗಡೆ ಮಾಡುವ ಮೂಲಕ ‘ಕರೆಬೇಟೆ’ ಚಿತ್ರತಂಡದವರು ಬಿಂದುಗೆ ಸ್ವಾಗತ ಕೋರಿದ್ದಾರೆ.

ಇದನ್ನೂ ಓದಿ: ಹೇಗಿರಲಿದೆ ಮಲೆನಾಡಿನ ‘ಕೆರೆಬೇಟೆ’? ಮೋಷನ್​ ಪೋಸ್ಟರ್​ ಮೂಲಕ ಸುಳಿವು ನೀಡಿದ ಚಿತ್ರತಂಡ

ಬೆಂಗಳೂರಿನವರಾದ ಬಿಂದು ಅವರು ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ. ಸಿನಿಮಾದಲ್ಲಿ ಅಭಿನಯ ಮಾಡಬೇಕು ಎಂಬುದು ಅವರ ಬಹುದಿನಗಳ ಕನಸು. ‘ಕೆರೆಬೇಟೆ’ ಸಿನಿಮಾದ ಮೂಲಕ ಅವರ ಕನಸು ನನಸಾಗುತ್ತಿದೆ. ಈ ಸಿನಿಮಾಗೆ ಗೌರಿ ಶಂಕರ್​ ಅವರು ನಿರ್ಮಾಣ ಮಾಡುವುದರ ಜೊತೆಗೆ ಹೀರೋ ಆಗಿಯೂ ನಟಿಸಿದ್ದಾರೆ. ಈಗಾಗಲೇ ಅನಾವರಣ ಆಗಿರುವ ಮೋಷನ್​ ಪೋಸ್ಟರ್​ ಗಮನ ಸೆಳೆದಿದೆ. ಬಿಂದು ಶಿವರಾಮ್​ ಅವರು ಫಸ್ಟ್​ ಲುಕ್​ ಪೋಸ್ಟರ್​ ಕೂಡ ಆಕರ್ಷಕವಾಗಿದೆ. ಈ ಚಿತ್ರಕ್ಕೆ ರಾಜ್​ ಗುರು ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ: ‘ಕೆರೆಬೇಟೆ’ ಚಿತ್ರದಲ್ಲಿ ಮಲೆನಾಡಿನ ವಿಶೇಷ ಆಚರಣೆಯ ಪರಿಚಯ ಮಾಡಿಕೊಡಲಿರುವ ಗೌರಿ ಶಂಕರ್

‘ಕೆರೆಬೇಟೆ’ ಸಿನಿಮಾದ ಬಿಡುಗಡೆಗೆ ಚಿತ್ರತಂಡ ತಯಾರಿ ಮಾಡಿಕೊಳ್ಳುತ್ತಿದೆ. ಈ ಚಿತ್ರದಿಂದ ಸ್ಯಾಂಡಲ್​ವುಡ್​ಗೆ ಎಂಟ್ರಿ ನೀಡುತ್ತಿರುವ ಬಿಂದು ಶಿವರಾಮ್​ ಅವರು ಉತ್ತಮ ಕಲಾವಿದೆಯಾಗಿ ಮಿಂಚುವ ಕನಸು ಕಂಡಿದ್ದಾರೆ. ಸೂಕ್ತ ತರಬೇತಿ ಪಡೆದುಕೊಂಡು ಅವರು ಮೊದಲ ಸಿನಿಮಾದಲ್ಲಿ ನಟಿಸಿದ್ದಾರೆ. ‘ಕಾಲೇಜು ದಿನಗಳಲ್ಲಿ ನಾನು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿ ಆಗುತ್ತಿದ್ದೆ. ನಾಟಕದಲ್ಲಿ ನನ್ನ ನಟನೆ ನೋಡಿ ಎಲ್ಲರೂ ಮೆಚ್ಚುಗೆ ಸೂಚಿಸುತ್ತಿದ್ದರು. ಆಗಲೇ ಸಿನಿಮಾದಲ್ಲಿ ನಟಿಸುವ ಆಸೆ ಮೂಡಿತ್ತು. ಕೆಲವು ಸಿನಿಮಾಗಳಿಗೆ ಆಡಿಷನ್​ ನೀಡಿದ್ದೆ. ಮೊದಲು ಅವಕಾಶ ಸಿಕ್ಕಿದ್ದು ಕೆರೆಬೇಟೆ ಸಿಮಾದಿಂದ. ಈ ಚಿತ್ರತಂಡದವರೇ ನೀನಾಸಂ ತರಬೇತುದಾರರಿಂದ ನನಗೆ ತರಬೇತಿ ಕೊಡಿಸಿದರು. ಅದಕ್ಕಾಗಿ ಧನ್ಯವಾಗಳು’ ಎಂದು ಅವರು ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 1:42 pm, Wed, 22 November 23