SSE Side B: ‘ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಬಿ’ ತಂಡಕ್ಕೆ ‘ಕತ್ತೆ’ ಎಂದು ಹೊಗಳಿದ ಕಿಚ್ಚ ಸುದೀಪ್​

Kichcha Sudeep: ‘ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಬಿ’ ಸಿನಿಮಾವನ್ನು ಸುದೀಪ್​ ಅವರು ಮಾಸ್ಟರ್​ ಪೀಸ್​ ಎಂದು ಕರೆದಿದ್ದಾರೆ. ಆ ಮೂಲಕ ಅವರು ಇಡೀ ತಂಡವನ್ನು ಹುರಿದುಂಬಿಸಿದ್ದಾರೆ. ರಕ್ಷಿತ್​ ಶೆಟ್ಟಿ, ಹೇಮಂತ್​ ಎಂ. ರಾವ್​, ರುಕ್ಮಿಣಿ ವಸಂತ್​, ಚೈತ್ರಾ ಜೆ. ಆಚಾರ್​, ಅದ್ವೈತ್​ ಗುರುಮೂರ್ತಿ ಮುಂತಾದವರ ಕೆಲಸವನ್ನು ಸುದೀಪ್​ ಮನಸಾರೆ ಹೊಗಳಿದ್ದಾರೆ.

SSE Side B: ‘ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಬಿ’ ತಂಡಕ್ಕೆ ‘ಕತ್ತೆ’ ಎಂದು ಹೊಗಳಿದ ಕಿಚ್ಚ ಸುದೀಪ್​
ರಕ್ಷಿತ್​ ಶೆಟ್ಟಿ, ಕಿಚ್ಚ ಸುದೀಪ್​
Follow us
ಮದನ್​ ಕುಮಾರ್​
|

Updated on: Nov 22, 2023 | 12:58 PM

ಹೇಮಂತ್​ ಎಂ. ರಾವ್​ ನಿರ್ದೇಶನದ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಜನಮನ ಗೆದ್ದಿದೆ. ಅಲ್ಲದೇ ಕಿಚ್ಚ ಸುದೀಪ್​ (Kichcha Sudeep) ಕೂಡ ಈ ಸಿನಿಮಾ ನೋಡಿ ಖುಷಿಪಟ್ಟಿದ್ದಾರೆ. ಚಿತ್ರ ನೋಡಿದ ಬಳಿಕ ಅವರು ಸೋಶಿಯಲ್​ ಮೀಡಿಯಾದಲ್ಲಿ ತಮ್ಮ ವಿಮರ್ಶೆ ಹಂಚಿಕೊಂಡಿದ್ದಾರೆ. ಇಡೀ ತಂಡಕ್ಕೆ ಅವರು ಹೊಗಳಿಕೆಯ ಮಳೆ ಸುರಿಸಿದ್ದಾರೆ. ವಿಶೇಷವಾಗಿ ನಟ, ನಿರ್ಮಾಪಕನಾಗಿ ರಕ್ಷಿತ್​ ಶೆಟ್ಟಿ (Rakshit Shetty) ಅವರ ಪ್ರಯತ್ನವನ್ನು ಸುದೀಪ್​ ಕೊಂಡಾಡಿದ್ದಾರೆ. ನಟಿಯರಾದ ಚೈತ್ರಾ ಜೆ. ಆಚಾರ್​ ಮತ್ತು ರುಕ್ಮಿಣಿ ಅವರಿಗೂ ಸುದೀಪ್​ ಕಡೆಯಿಂದ ಶ್ಲಾಘನೆ ಸಿಕ್ಕಿದೆ. ಇದರಿಂದ ‘ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಬಿ’ (SSE Side B) ಸಿನಿಮಾ ತಂಡದ ಬಲ ಹೆಚ್ಚಾಗಿದೆ.

‘ಅತ್ಯುತ್ತಮ ನಟನೆ, ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ಛಾಯಾಗ್ರಹಣ. ಇಂಥ ಸಿನಿಮಾ ಮಾಡಲು ಧೈರ್ಯ ತೋರಿಸಿದ ನಿಮ್ಮನ್ನು ನಾನು ಬಹಳ ಗೌರವಿಸುತ್ತೇನೆ. ಹೇಮಂತ್​ ರಾವ್​ ಅವರು ಅದ್ಭುತ ವಿಷನ್​ ಇರುವಂತಹ ನಿರ್ದೇಶಕ. ಕ್ಯಾಪ್ಟನ್​ ಸ್ಥಾನದಲ್ಲಿ ಅವರ ಕೆಲಸ ಪರ್ಫೆಕ್ಟ್​ ಆಗಿದೆ. ನಿಮ್ಮ ಮತ್ತು ನಿಮ್ಮ ತಂಡದ ಬಗ್ಗೆ ಹೆಮ್ಮೆ ಮೂಡಿದೆ. ಕತ್ತೆ’ ಎಂದು ಸುದೀಪ್​ ಅವರು ಪೋಸ್ಟ್​ ಮಾಡಿದ್ದಾರೆ. ಸಿನಿಮಾ ತೋರಿಸಿದ ರಕ್ಷಿತ್​ ಶೆಟ್ಟಿಗೆ ಸುದೀಪ್​ ಅವರು ಧನ್ಯವಾದ ತಿಳಿಸಿದ್ದಾರೆ.

‘ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಬಿ’ ಸಿನಿಮಾವನ್ನು ಸುದೀಪ್​ ಅವರು ಮಾಸ್ಟರ್​ ಪೀಸ್​ ಎಂದು ಕರೆದಿದ್ದಾರೆ. ಆ ಮೂಲಕ ಅವರು ಇಡೀ ತಂಡವನ್ನು ಹುರಿದುಂಬಿಸಿದ್ದಾರೆ. ತುಂಬ ಗಟ್ಟಿಯಾದ ನಾಯಕಿ ಪಾತ್ರವನ್ನು ಬಹಳ ಸೂಕ್ಷ್ಮವಾಗಿ ನಿಭಾಯಿಸಿದ ರುಕ್ಮಿಣಿ ವಸಂತ್​ ಅವರಿಗೆ ಸುದೀಪ್​ ಕಡೆಯಿಂದ ಮೆಚ್ಚುಗೆ ಸಿಕ್ಕಿದೆ. ಹಾಗೆಯೇ, ಚೈತ್ರಾ ಆಚಾರ್​ ಅವರು ತುಂಬ ಸಂಕೀರ್ಣವಾದ ಸುರಭಿ ಎಂಬ ಪಾತ್ರವನ್ನು ಬಹಳ ಸುಲಭವಾಗಿ ನಿಭಾಯಿಸಿದ್ದಾರೆ ಎಂದು ಸುದೀಪ್​ ಹೊಗಳಿದ್ದಾರೆ. ಅವರಿಗೆ ಈ ಸಿನಿಮಾ ತುಂಬ ಇಷ್ಟ ಆಗಿದೆ.

SSE Side B Review: ‘ಸೈಡ್​ ಎ’ ಬಳಿಕ ಮನು, ಪ್ರಿಯಾ ಬದುಕು ಬದಲಾದರೂ ‘ಸೈಡ್​ ಬಿ’ ಲಯ ಬದಲಾಗಿಲ್ಲ

ಗಾಢವಾದ ಪ್ರೇಮಕಥೆ ಇರುವ ‘ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಎ’ ಸಿನಿಮಾ ಸೆಪ್ಟೆಂಬರ್ 1ರಂದು ಬಿಡುಗಡೆ ಆಗಿತ್ತು. ಮೊದಲು ಕನ್ನಡದಲ್ಲಿ ರಿಲೀಸ್​ ಆದ ಈ ಚಿತ್ರಕ್ಕೆ ಪರಭಾಷೆಯ ಮಂದಿ ಕೂಡ ಫಿದಾ ಆದರು. ಬಳಿಕ ಬೇರೆ ಭಾಷೆಗೆ ಡಬ್​ ಮಾಡಿ ತೆರೆ ಕಾಣಿಸಲಾಯಿತು. ಒಟಿಟಿಗೆ ಕಾಲಿಟ್ಟಾಗಲೂ ‘ಸೈಡ್​ ಎ’ ಸಿನಿಮಾ ಮೆಚ್ಚುಗೆ ಗಳಿಸಿತು. ಈಗ ‘ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಬಿ’ ಸಿನಿಮಾ ಏಕಕಾಲಕ್ಕೆ ಕನ್ನಡದ ಜೊತೆ ಬೇರೆ ಭಾಷೆಗಳಲ್ಲೂ ರಿಲೀಸ್​ ಆಗಿ ಉತ್ತಮ ವಿಮರ್ಶೆ ಪಡೆದಿದೆ. ನಟಿ ಸಮಂತಾ ರುತ್​ ಪ್ರಭು ಕೂಡ ಈ ತಂಡಕ್ಕೆ ಭೇಷ್ ಎಂದಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.