ಬೆಂಗಳೂರು, ಫೆ.09: ಕೋಟಿ ಕೋಟಿ ವೆಚ್ಚದ ಪ್ರಾಜೆಕ್ಟ್, ಹಲವು ವಿರೋಧದ ಮಧ್ಯೆಯೂ ಲಕ್ಷ ರೂಪಾಯಿ ಮೌಲ್ಯದ ಶೌಚಾಲಯ (Toilet) ನಿರ್ಮಾಣ ಮಾಡಲಾಗಿದೆ. ಆದರೆ ಈ ಶೌಚಾಲಯ ಕಟ್ಟಡ ಉದ್ಘಾಟನೆಯಾಗೋ ಮೊದಲೇ ಕುಡುಕರ, ಪುಂಡರ ಅಡ್ಡೆಯಾಗಿ ಬದಲಾಗಿದೆ. ಜನರಿಗೆ ಅನುಕೂಲ ಆಗಲಿ ಅಂತಾ ಮಾಡಿದ್ದ ಶೌಚಾಲಯದ ಕಟ್ಟಡ ಉದ್ಘಾಟನೆಗೂ ಮೊದಲೇ ಹಾಳಾಗಿದೆ.
ಬೆಂಗಳೂರಿನ ಶಿವಾನಂದ ಸರ್ಕಲ್ ಸ್ಟೀಲ್ ಬ್ರಿಡ್ಜ್ ಕೆಳಗೆ ನಿರ್ಮಿಸಿರೋ ಹೈಟೆಕ್ ಶೌಚಾಲಯದ ಪರಿಸ್ಥಿತಿ ಕೇಳ ತೀರದ್ದು ಎಲ್ಲೆಂದರಲ್ಲಿ ಬಿದ್ದಿರೋ ಮದ್ಯದ ಬಾಟಲಿಗಳು, ಅರ್ಧಕ್ಕೆ ನಿಂತ ಕಾಮಗಾರಿ, ಸುತ್ತಮುತ್ತಲಿನ ಜನ ಮೂಗು ಮುಚ್ಚಿಕೊಂಡು ಓಡಾಡುವಷ್ಟು ದುರ್ವಾಸನೆ ಇದೆ. ಫ್ಲೈ ಓವರ್ ಕೆಳಗೆ ಅನೈತಿಕ ಚಟುವಟಿಕೆ ನಡೆಯಬಾರದು ಅಂತಾ ಪ್ಲಾನ್ ಮಾಡಿ ಕಾಮಗಾರಿ ಶುರುಮಾಡಿದ್ದ ಈ ಸ್ಥಳ ಇದೀಗ ಪುಂಡರ ತಾಣವಾಗಿ ಬದಲಾಗಿ ಬಿಟ್ಟಿದೆ. ಸಾಯಂಕಾಲವಾದರೆ ಹೆಣ್ಣು ಮಕ್ಕಳು ಓಡಾಡಲು ಮುಜುಗರ ಪಡುವಂತಾಗುತ್ತದೆ. ಸಿಎಂ ಮನೆಯ ಪಕ್ಕದಲ್ಲೆ ಇಂತಹ ಅವ್ಯವಸ್ಥೆ ಇದೆ. ಹೀಗಾಗಿ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
ಶಿವಾನಂದ ಸರ್ಕಲ್ ಸ್ಟೀಲ್ ಬ್ರಿಡ್ಜ್ ಕೆಳಗೆ ನಿರ್ಮಿಸಿರೋ ಹೈಟೆಕ್ ಶೌಚಾಲಯಇದನ್ನೂ ಓದಿ: ಚಕ್ರವರ್ತಿ ಸೂಲಿಬೆಲೆ ಕಾರ್ಯಕ್ರಮಕ್ಕೆ ಕಪ್ಪು ಪಟ್ಟಿ ಪ್ರದರ್ಶನ: ಕೈ ಕಾರ್ಯಕರ್ತರಿದ್ದ ಕಟ್ಟಡದ ಮೇಲೆ ಕಲ್ಲು ತೂರಿದ ಬಿಜೆಪಿಗರು
ಇನ್ನು ಅಮೃತ ನಗರೋತ್ಥಾನ ಯೋಜನೆಯಡಿಯಲ್ಲಿ ಈ ಫ್ಲೈ ಓವರ್ ಕೆಳಗೆ ಪಬ್ಲಿಕ್ ಪ್ಲಾಜಾ, ಪಾರ್ಕ್ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಸುಮಾರು 10 ಕೋಟಿ ಅನುದಾನ ಬಿಡುಗಡೆಯಾಗಿತ್ತು. ಸದ್ಯ ಸ್ಥಳೀಯರ ವಿರೋಧ ಕೇಳಿ ಬಂದ ಬೆನ್ನಲ್ಲೆ ಕಾಮಗಾರಿಗೆ ಬ್ರೇಕ್ ಹಾಕಲಾಗಿದೆ. ಆದರೆ ಈಗಾಗಲೇ ನಿರ್ಮಾಣವಾಗಿರೋ ಹೈಟೆಕ್ ಶೌಚಾಲಯ, ಇದೀಗ ಕುಡುಕರ ತಾಣವಾಗಿದ್ದು, ಇದು ಮತ್ತಷ್ಟು ಅನೈತಿಕ ಚಟುಟಿಕೆಗೆ ತಾಣವಾಗುತ್ತದೆ. ಸರ್ಕಾರ ಶೌಚಾಲಯವನ್ನ ಜನರ ವಿರೋಧದ ಮಧ್ಯೆ ಮತ್ತೆ ಕಾಮಗಾರಿ ಆರಂಭಿಸಿದೆ. ಆದರೆ ಕಾಮಗಾರಿ ಕೂಡ ಕಳಪೆಮಟ್ಟದಲ್ಲಿ ನಡೆಯುತ್ತಿದೆ ಅಂತ ಸಾಮಾಜಿಕ ಕಾರ್ಯಕರ್ತರು ಆರೋಪಿಸುತ್ತಿದ್ದು, ಈ ಬಗ್ಗೆ ಪಾಲಿಕೆ ಆಯುಕ್ತರು ಪರಿಶೀಲನೆ ನಡೆಸುವಂತೆ ಆಗ್ರಹಿಸುತ್ತಿದ್ದಾರೆ.
ಒಟ್ಟಿನಲ್ಲಿ ಶಿವಾನಂದ ಸರ್ಕಲ್ ಸ್ಟಿಲ್ ಬ್ರಿಡ್ಜ್ ಕೆಳಗೆ ಅನೈತಿಕ ಚಟುವಟಿಕೆ ತಡೆಗಟ್ಟಲು ಸಾರ್ವಜನಿಕರಿಗೆ ಉಪಯೋಗ ಆಗಲಿ ಅಂತ ಶೌಚಾಲಯಗಳನ್ನ ಕಟ್ಟುತ್ತಿದೆಯಾದರೆ, ಅದೇ ಸ್ಥಳ ಜಾಗ ಈಗ ಪುಂಡ, ಪೋಕರಿಗಳು ಹಾಗೂ ಕುಡುಕರ ಅಡ್ಡೆಯಾಗಿರೋದು ನಿಜಕ್ಕೂ ವಿಪರ್ಯಾಸ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ