ಬೆಂಗಳೂರು, (ಜುಲೈ 01): ಜ್ಯೂಸ್ ಕುಡಿದುಕೊಂಡು ವಾಪಸ್ ಬರುತ್ತಿದ್ದ ಯುವತಿಯ ಎದೆ ಮುಟ್ಟಿ ವಿಕೃತಿ ಮರೆದಿರುವ ಘಟನೆ ಬೆಂಗಳೂರಿನ ಪೀಣ್ಯಾದ HMTಲೇಔಟ್ನಲ್ಲಿ ನಡೆದಿದೆ. 8ನೇ ಮೈಲಿಯ ಪ್ರತಿಷ್ಟಿತ ಕಾಲೇಜಿನಲ್ಲಿ ಬಿಬಿಎ ವಿದ್ಯಾರ್ಥಿಯಾಗಿರುವ ಯುವತಿ, ಪೀಣ್ಯಾದ HMTಲೇಔಟ್ ನಲ್ಲಿ ರಾತ್ರಿ 9:45ರ ಸುಮಾರಿಗೆ ಜ್ಯೂಸ್ ಕುಡಿದು ವಾಪಸ್ ಪಿಜಿಗೆ ತೆರಳುವಾಗ ದುರುಳನೋರ್ವ ಆಕೆಯ ಎದೆ ಭಾಗಕ್ಕೆ ಮುಟ್ಟಿದ್ದಾನೆ. ಬಳಿಕ ಯುವತಿ ಕಿರುಚಾಡಿದ್ದರಿಂದ ಕಾಮುಕ ಬೈಕ್ನಲ್ಲಿ ಎಸ್ಕೇಪ್ ಆಗಿದ್ದಾನೆ. ಇನ್ನು ಯುವತಿಯ ಎದೆಯನ್ನು ಟಚ್ ಮಾಡಿ ವಿಕೃತಿ ಮೆರೆದು ಪರಾರಿಯಾಗಿರುವ ದೃಶ್ಯ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದ್ದು, ಈ ಬಗ್ಗೆ ಯುವತಿ ಪೊಲೀಸರಿಗೆ ದೂರು ನೀಡಿದ್ದಾರೆ.
ಯುವತಿ ದೂರಿನ ಮೇರೆಗೆ ಇದೀಗ ಪರಾರಿಯಾಗಿರುವ ಆರೋಪಿ ವಿರುದ್ಧ IPC 354(a),354 ಅಡಿಯಲ್ಲಿ ಪೀಣ್ಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.
ಇನ್ನು ಜನವರಿಯಲ್ಲಿ ಇದೇ ರೀತಿಯ ಪ್ರಕರಣ ಬೆಂಗಳೂರಿನಲ್ಲಿ ನಡೆದಿತ್ತು. ಬೆಂಗಳೂರಿನ ವಿಜಯನಗರದ ಕೃಷ್ಣ ಸಾಗರ್ ಹೋಟೆಲ್ ಬಳಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದರು. ಯುವತಿಯೊಬ್ಬಳು ತನ್ನ ಸ್ನೇಹಿತೆಯೊಂದಿಗೆ ತಿಂಡಿ ಪಾಸರ್ಲ್ ಪಡೆಯಲು ನಿಂತಿದ್ದಾಗ ವೇಳೆ ಅಲ್ಲಿಗೆ ಬಂದಿದ್ದ ಮೂವರು ಪುಂಡರು, ಕೀಟಲೆ ಮಾಡುತ್ತ ಯುವತಿಯನ್ನು ಹಿಂದಿನಿಂದ ಟಚ್ ಮಾಡಿದ್ದರು.
ಫೋನ್‌ನಲ್ಲಿ ಮಾತಾಡುತ್ತಿದ್ದ ಯುವತಿಗೆ ಹಿಂದಿನಿಂದ ಬಂದ ಕಾಮುಕ ಬೇಕು ಬೇಕಂತಲೇ ಟಚ್ ಮಾಡಿದ್ದ. ಯುವಕನಿಂದ ಸ್ಪರ್ಶಿಸುತ್ತಿದ್ದಂತೆ ಯುವತಿ ಬೆಚ್ಚಿದ್ದಾಳೆ, ನಂತರ ಪ್ರಶ್ನಿಸಲು ಮುಂದಾಗಿದ್ದಾಳೆ. ತಮ್ಮದೇನು ತಪ್ಪೇ ಇಲ್ಲ ಎಂಬಂತೆ ಪುಂಡರು ವಾದ ಮಾಡಿ ಅಲ್ಲಿಂದ ಕಾಲ್ಕಿತ್ತಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:41 pm, Mon, 1 July 24