ರೋಜ್‌ಗಾರ್ ಯೋಜನೆಯಡಿ ಈವರೆಗೆ ಒಟ್ಟು 3.6 ಲಕ್ಷ ಜನರಿಗೆ ಉದ್ಯೋಗ : ಕೇಂದ್ರ ಸಚಿವ ಪ್ರಲ್ಹಾದ ಜೋಶಿ

|

Updated on: May 16, 2023 | 2:47 PM

ಸರಕಾರಿ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಿ, ಇಲಾಖೆಗಳು ಉತ್ತಮವಾಗಿ ಕಾರ್ಯ ನಿರ್ವಹಿಸುವಂತೆ ಮಾಡಲು ಈ ಯೋಜನೆ ಸಹಕಾರಿಯಾಗಿದೆ -ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ರೋಜ್‌ಗಾರ್ ಯೋಜನೆಯಡಿ ಈವರೆಗೆ ಒಟ್ಟು 3.6 ಲಕ್ಷ ಜನರಿಗೆ ಉದ್ಯೋಗ : ಕೇಂದ್ರ ಸಚಿವ ಪ್ರಲ್ಹಾದ ಜೋಶಿ
ರೋಜ್‌ಗಾರ್ ಯೋಜನೆಯಡಿ ಈವರೆಗೆ ಒಟ್ಟು 3.6 ಲಕ್ಷ ಜನರಿಗೆ ಉದ್ಯೋಗ
Follow us on

ಬೆಂಗಳೂರು, ಮೇ 16 : ದೇಶದಲ್ಲಿ ಏಕಕಾಲಕ್ಕೆ 71,000 ಯುವಕ/ಯುವತಿಯರಿಗೆ ಉದ್ಯೋಗ ಕಲ್ಪಿಸುವ ಬೃಹತ್ ಯೋಜನೆ ರೋಜ್‌ಗಾರ್ ಮೇಳದ ಐದನೇ ಆವೃತ್ತಿಯನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಇಂದು ಉದ್ಘಾಟಿಸಿದರು. ಬೆಂಗಳೂರಿನಲ್ಲಿಂದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ರೋಜ್ ಗಾರ್ ಮೇಳದ (PM Rozgar Yojana) ಐದನೇ ಆವೃತ್ತಿ ಉದ್ಘಾಟಿಸಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು (Pralhad Joshi), “ಈವರೆಗೆ ಒಟ್ಟು 3.6 ಲಕ್ಷ ಜನರಿಗೆ ಉದ್ಯೋಗ (Employment) ನೇಮಕಾತಿ ಮಾಡುವ ಮೂಲಕ, ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ (Narendra Modi) ಅವರ ಮಾರ್ಗದರ್ಶನದಲ್ಲಿ ನಮ್ಮ ಕೇಂದ್ರ ಸರಕಾರ ಮಹತ್ತರವಾದ ಹೆಜ್ಜೆ ಇಟ್ಟಿದೆ.

ಸರಕಾರಿ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಿ, ಇಲಾಖೆಗಳು ಉತ್ತಮವಾಗಿ ಕಾರ್ಯ ನಿರ್ವಹಿಸುವಂತೆ ಮಾಡಲು ಈ ಯೋಜನೆ ಸಹಕಾರಿಯಾಗಿದೆ ಮತ್ತು ಯುವಪೀಳಿಗೆಗೆ ಉದ್ಯೋಗ ಅವಕಾಶ ಕೂಡ ನೀಡಿದಂತಾಗಿದೆ. ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ನಮ್ಮ ಕೇಂದ್ರ ಸರಕಾರ ಸದಾ ಬದ್ಧವಾಗಿದ್ದು, ಯುವಜನತೆಯ ಕೌಶಲ್ಯ ಅಭಿವೃದ್ಧಿಗಾಗಿ ಹತ್ತಾರು ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಾಗಿದೆ. ರಾಜ್ಯದ ಜನರ ಬೇಡಿಕೆಗೆ ಅನುಗುಣವಾಗಿ ನಮ್ಮ ಕೇಂದ್ರ ಸರಕಾರ ಮುಂದೆಯೂ ಕಾರ್ಯ ನಿರ್ವಹಿಸಲಿದೆ” ಎಂದರು‌. ಕಾರ್ಯಕ್ರಮದಲ್ಲಿ ಸಂಸದ ಪಿಸಿ ಮೋಹನ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆ, ವಿರೋಧ ಪಕ್ಷದ ನಾಯಕನ ಆಯ್ಕೆ ಬಗ್ಗೆ ಪ್ರಲ್ಹಾದ್​ ಜೋಶಿ ಹೇಳಿದ್ದಿಷ್ಟು

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ  ಬಿಜೆಪಿ (BJP) ಸೋತಿದೆ. ಕೇವಲ 66 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಈ ಸೋಲಿನ ನಂತರ ನಿರೀಕ್ಷಿಸಿದಂತೆ ಪರಭಾವದ ಹೊಣೆಯನ್ನು ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್​ ಅವರು ಹೊತ್ತುಕೊಂಡಿದ್ದಾರೆ. ಇನ್ನು ರಾಜ್ಯದಲ್ಲಿ ಪಕ್ಷ ಸೋಲುತ್ತಿದ್ದಂತೆ ರಾಜ್ಯಾಧ್ಯಕ್ಷರ ಬದಲಾವಣೆಯ ಮಾತುಗಳು ಬಿಜೆಪಿ ಪಾಳಯದಲ್ಲಿ ಕೇಳಿಬರುತ್ತಿವೆ. ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರವಾಗಿ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಮಾತನಾಡಿ ನಳೀನ್​ ಕುಮಾರ್​ ಕಟೀಲ್​ ಅವರ ಅವಧಿ ಈಗಾಗಲೇ ಮುಗಿದು ಹೋಗಿದೆ ಎಂದು ಹೇಳಿದ್ದಾರೆ.

ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಚುನಾವಣಾ ದೃಷ್ಟಿಯಿಂದ ಅವರಿಗೆ ರಾಷ್ಟ್ರೀಯ ನಾಯಕರು ಜವಾಬ್ದಾರಿ ಕೊಟ್ಟಿದ್ದರು. ಮುಂದಿನ ತೀರ್ಮಾನವನ್ನು ರಾಷ್ಟ್ರೀಯ ನಾಯಕರೇ ಮಾಡುತ್ತಾರೆ ಎಂದರು.

ವಿಪಕ್ಷ ನಾಯಕ ಯಾರು ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು ವಿಪಕ್ಷ ನಾಯಕ ಯಾರು ಅಂತ ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನವಾಗುತ್ತದೆ. ಅದಕ್ಕಿಂತ ಮೊದಲು ನಮ್ಮ ರಾಷ್ಟ್ರೀಯ ನಾಯಕರಲ್ಲೊಬ್ಬರು ರಾಜ್ಯಕ್ಕೆ ಬರುತ್ತಾರೆ ಎಂದು ತಿಳಿಸಿದರು.

ಇನ್ನು ಪಕ್ಷದ ಸೋಲಿನ ಕುರಿತು ಮಾತನಾಡಿದ ಅವರು ಈ ಚುನಾವಣೆ ಬಿಜೆಪಿ ಪಾಲಿಗೆ ನಿರಾಶದಾಯಕ ಫಲಿತಾಂಶ. ಪಕ್ಷದ ಸೋಲನ್ನು ನಾನು ಸವಾಲಾಗಿ ಸ್ವೀಕರಿಸುತ್ತೇನೆ. ಚುನಾವಣಾ ಸೋಲು ಬಿಜೆಪಿಗೆ ಅತ್ಯಂತ ನಿರಾಶಾದಾಯಕ ರಿಸಲ್ಟ್. ನಾನು ಮತ್ತು ಪಕ್ಷ ಸೋಲನ್ನು ಸಹಜವಾಗಿ ಸ್ವೀಕರಿಸಿಲ್ಲ, ಸವಾಲಾಗಿ ಸ್ವೀಕರಿಸಿದ್ದೇವೆ. ಸೋಲಿಗೆ ಕಾರಣ ಏನು ಅಂತ ತಿಳಿದುಕೊಳ್ಳಬೇಕು ಎಂದು ಹೇಳಿದರು.

ಹೊಸ ಸರ್ಕಾರ ಬೇಗ ಅಸ್ತಿತ್ವಕ್ಕೆ ಬಂದು ಜನರ ಆಶೋತ್ತರ ಈಡೇರಿಕೆಗೆ ಕೆಲಸ ಶುರು ಮಾಡಲಿ. ಕಾಂಗ್ರೆಸ್ ಕೊಟ್ಟಿರುವ ಭರವಸೆಯನ್ನು ನ್ಯಾಯೋಚಿತವಾಗಿ ಈಡೇರಿಸಬೇಕು. ಬಿಜೆಪಿ ಸೋಲಿಗೆ ಬಿ.ಎಲ್. ಸಂತೋಷ್ ಕಾರಣ ಎಂಬ ಆರೋಪ ವಿಚಾರವಾಗಿ ಮಾತನಾಡಿ ಸೋಲಿನ ಹೊಣೆ ಇಡೀ ರಾಜ್ಯ ಬಿಜೆಪಿ ಘಟಕದ್ದು. ಎಲ್ಲಿ ಏನು ತಪ್ಪಾಗಿದೆ ಅಂತ ನಾವು ವಿಮರ್ಶೆ ಮಾಡುತ್ತೇವೆ ಎಂದು ತಿಳಿಸಿದರು.

ಲೋಕಸಭಾ ಚುನಾವಣೆಗೆ ಸನ್ನದ್ದತೆಯನ್ನು ಶುರು ಮಾಡುತ್ತಿದ್ದೇವೆ, ಗೆಲ್ಲುತ್ತೇವೆ. ಲೋಕಸಭಾ ಚುನಾವಣೆ ಬೇರೆ ವಿಷಯದ ಮೇಲೆ ನಡೆಯುತ್ತದೆ, ರಾಜ್ಯದ ಚುನಾವಣೆಗಳು ಬೇರೆ ವಿಷಯದ ಮೇಲೆ ನಡೆಯುತ್ತವೆ. ಇಂದು ಚುನಾವಣೆ ಆದರೆ ಬಿಜೆಪಿಗೆ 330 ಕ್ಕೂ ಹೆಚ್ಚು ಸೀಟು ಬರುತ್ತದೆ ಎಂಬ ಸಮೀಕ್ಷೆ ಇದೆ. ಅದಕ್ಕೂ ರಾಜ್ಯದ ಚುನಾವಣೆಗೂ ಸಂಬಂಧ ಇಲ್ಲ. ಜನ ಜಾಣರು, ಯಾವಾಗ ಯಾರಿಗೆ ವೋಟ್​​ ಕೊಡಬೇಕು ಅಂತಾ ಗೊತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Published On - 2:39 pm, Tue, 16 May 23