ಬೆಂಗಳೂರು: ಆರ್ಎಸ್ಎಸ್ (RSS) ಜಾತಿ, ಧರ್ಮ ಮೀರಿದ ಮಾತೃಹೃದಯಿ ಸಂಘಟನೆ ಅಂತ ಆರ್ಎಸ್ಎಸ್ ವಿರುದ್ಧ ಟೀಕೆಗೆ ನಟ ಜಗ್ಗೇಶ್ (Jaggesh) ಟ್ವೀಟ್ ಮೂಲಕ ಟಾಂಗ್ ಕೊಟ್ಟಿದ್ದಾರೆ. ಆರ್ಎಸ್ಎಸ್ ಬಗ್ಗೆ ಮಾತಾಡೋರು ಅದರ ನಿಸ್ವಾರ್ಥ ಗುಣ ಅರಿಯಿರಿ. ಆರ್ಎಸ್ಎಸ್ನವರಿಗೆ ದೇಶವೇ ಮನೆ, ದೇಶವಾಸಿಗಳೇ ಬಂಧುಗಳು. ಅವರ ನಿಸ್ವಾರ್ಥ ಸಮಾಜ ಸೇವೆಯೇ ದೇವರ ಪೂಜೆಯಾಗಿದೆ. ಆರ್ಎಸ್ಎಸ್ ಸಂಪರ್ಕ ದೊರೆತರೆ ಕರ್ಮಯೋಗಿ ಆಗುತ್ತಾನೆ. ಸ್ವಾರ್ಥ ಬಿಟ್ಟು ಸಮಾಜಕ್ಕೆ ಹೆಗಲು ಕೊಡುವ ಕರ್ಮಯೋಗಿ ಆಗುತ್ತಾನೆ ಅಂತ ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
ಆರ್ಎಸ್ಎಸ್ ಬಗ್ಗೆ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಗೋವಿಂದ ಕಾರಜೋಳ, ಆರ್ಎಸ್ಎಸ್ ಸಂಸ್ಕೃತಿ ಗೊತ್ತಿಲ್ಲದವರು ಏನೇನೋ ಹೇಳುತ್ತಿದ್ದಾರೆ. ಆಎರ್ಎಸ್ನವರು ದೇಶಭಕ್ತರೆಂದು ಮೊದಲು ಗೊತ್ತಿರಬೇಕು. ಅವರಿಗೆ ಕಳಂಕ ತರಲು ಪ್ರಯತ್ನಿಸಿದರೆ ಅದು ಆಗುವುದಿಲ್ಲ. ಆರ್ಎಸ್ಎಸ್ ದೇಶಪ್ರೇಮ ಹುಟ್ಟಿಸುವ ಕೆಲಸ ಮಾಡುತ್ತಿದೆ. ಯಾರನ್ನೋ ಖುಷಿ ಪಡಿಸಲು ಹೇಳಿಕೆ ಕೊಟ್ಟರೆ ಅರ್ಥವಿಲ್ಲ. ಪ್ರಚಾರಕ್ಕಾಗಿ ಕೀಳುಮಟ್ಟದ ಹೇಳಿಕೆಗಳನ್ನು ನೀಡಬಾರದು. ವೋಟ್ ಬ್ಯಾಂಕ್ಗಾಗಿ ಹೇಳಿಕೆ ನೀಡಿದರೆ ಗೌರವ ಇರಲ್ಲ. ಆರ್ಎಸ್ಎಸ್ನವರು ಐಎಎಸ್, ಐಪಿಎಸ್ ಆಗಿದ್ದಾರೆ ಎಂಬುದು ಸುಳ್ಳು ಅಂತ ಹೇಳಿದರು.
ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ
ಆರ್ಎಸ್ಎಸ್ ಸಂಘಟನೆಯಿಂದ ಉತ್ತರ ಪ್ರದೇಶದಲ್ಲಿ ಸರ್ಕಾರ ರಚನೆ ಆಗಿದೆ. ಉತ್ತರ ಪ್ರದೇಶದಲ್ಲಿರುವುದು ಆರ್ಎಸ್ಎಸ್ ಸರ್ಕಾರ. ಉತ್ತರ ಪ್ರದೇಶ ಸರ್ಕಾರ ಆರ್ಎಸ್ಎಸ್ ಹಿಡಿತದಲ್ಲಿದೆ. ಮನುಸ್ಮೃತಿ ಯುಗಕ್ಕೆ ಕರೆದೊಯ್ಯುವುದು ನಿಮ್ಮ ಅಜೆಂಡಾ. ನಾವೂ ಹಿಂದೂಗಳೇ, ಆದ್ರೆ ಹಿಂದುತ್ವ ನಮ್ಮ ಅಜೆಂಡಾವಲ್ಲ. ಮೊದಲು ದುಡಿಯುವ ಕೈಗಳಿಗೆ ದುಡಿಮೆ ಕೊಡಿ. ಸರ್ಕಾರಗಳು ಬಡವರ ಬಗ್ಗೆ ಗಮನ ಕೊಡಬೇಕು. ರೈತರ ಮೇಲೆ ಗೌರವ ಇದ್ದರೆ ತಪ್ಪಿತಸ್ಥರನ್ನು ಬಂಧಿಸಿ. ಕಾರು ಹತ್ತಿಸಿದವರನ್ನು ಮೊದಲು ಬಂಧಿಸಬೇಕಾಗಿತ್ತು. ಕಾರು ಹತ್ತಿಸಿದವರಿಗೆ ಏಕೆ ರಕ್ಷಣೆ ಕೊಟ್ಟಿದ್ದೀರಿ? ಎಂದು ಹೆಚ್.ಡಿ. ಕುಮಾರಸ್ವಾಮಿ ನಿನ್ನೆ ಪ್ರಶ್ನಿಸಿದ್ದರು.
ನಾಲ್ಕು ಸಾವಿರ ಸಿವಿಲ್ ಸರ್ವೆಂಟ್ಗಳು ಬಿಜೆಪಿಯ ಕಾರ್ಯಕರ್ತರು ಇದ್ದಾರೆ. ಬಿಜೆಪಿ ಕಾರ್ಯಕರ್ತರು ಅಂದರೆ ಆರ್ಎಸ್ಎಸ್ ಕಾರ್ಯಕರ್ತರು. ದೇಶದಲ್ಲಿ ಬಿಜೆಪಿಯ ಕಾರ್ಯಕರ್ತರು, 4 ಸಾವಿರ ಐಎಎಸ್, ಐಪಿಎಸ್ ಅಧಿಕಾರಿಗಳಾಗಿದ್ದಾರೆ. ಆರ್ಎಸ್ಎಸ್ ಅವರು ಕಾರ್ಯಕರ್ತರಿಗೆ ಟ್ರೈನಿಂಗ್ ಕೊಡ್ತಾರೆ. ಈ ಪರೀಕ್ಷೆ ಬರೆಯಲು ಟ್ರೈನಿಂಗ್ ಕೊಟ್ಟಿದ್ದಾರೆ. 2016ರ ಒಂದೇ ವರ್ಷದಲ್ಲಿ 676 ಜನ ಪಾಸ್ ಆಗಿದ್ದಾರೆ ಎಂದು ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ರಾಮನಗರದ ಬಿಡದಿ ಸಮೀಪ ತೋಟದಮನೆಯಲ್ಲಿ ನಡೆದ ಜೆಡಿಎಸ್ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದ್ದಾರೆ.
ಸಂಘವಿದು..
ಆ ಸಂಘದಲ್ಲಿ ಅದರ ಸಿದ್ಧಾಂತ ಅಪ್ಪಿ ಜೀವಿಸುವವರು ವಿಧ್ಯಾವಂತರು ರಾಷ್ಟ್ರಪ್ರೇಮಿಗಳು,ಆತ್ಮಸಾಕ್ಷಾತ್ಕಾರ ಆದ ಶ್ವೇತವರ್ಣ ಸನ್ಯಾಸಿಗಳು..ಅವರಿಗೆ ದೇಶವೆ ಮನೆ ದೇಶವಾಸಿಗಳೆ ಬಂಧುಗಳು
ಅವರ ನಿಸ್ವಾರ್ಥ ಸಮಾಜಸೇವೆಯೇ ದೇವರ ಪೂಜೆ..ಆ ಸಂಘದ ಬಗ್ಗೆ ಮಾತಾಡುವ ಮುನ್ನ ಅದರ ನಿಸ್ವಾರ್ಥಗುಣ ಅರಿಯಿರಿ?@RSSorg @friendsofrss— ನವರಸನಾಯಕ ಜಗ್ಗೇಶ್ (@Jaggesh2) October 6, 2021
ಇದನ್ನೂ ಓದಿ
ಆರ್ಎಸ್ಎಸ್ನ ನಾಲ್ಕು ಸಾವಿರ ಐಎಎಸ್, ಐಪಿಎಸ್ ಅಧಿಕಾರಿಗಳಿದ್ದಾರೆ; ಹೆಚ್ಡಿ ಕುಮಾರಸ್ವಾಮಿ