ಬೆಂಗಳೂರು: ಏರೋ ಇಂಡಿಯಾದ (Aero India 2023) 14 ನೇ ಆವೃತ್ತಿಯ ಇಂಡಿಯಾ ಪೆವಿಲಿಯನ್ ಏರ್ ಶೋ (Air Show At Yelahanka) ಯಲಹಂಕ ವಲಯ ವ್ಯಾಪ್ತಿಯ ವಾಯುಸೇನಾ ನೆಲೆಯಲ್ಲಿ ಫೆ. 13 ರಿಂದ 17ರ ವರೆಗೆ ನಡೆಯಲಿದೆ. ಈ ನಿಟ್ಟಿನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ವಿಮಾನ ಕಾರ್ಯಾಚರಣೆಗಳನ್ನು ಮಧ್ಯಂತರವಾಗಿ ಸ್ಥಗಿತಗೊಳಿಸಲಾಗುವುದು ಎಂದು ವಿಮಾನ ನಿಲ್ದಾಣ ನಿರ್ವಾಹಕರು ತಿಳಿಸಿದ್ದಾರೆ. ಫೆಬ್ರವರಿ 8 ರಿಂದ ಏರ್ ಶೋ ಪ್ರಾರಂಭವಾಗುವ ಮೂರು ಗಂಟೆಗಳ ಅವಧಿಯವರೆಗೆ ವಿಮಾನ ಹಾರಾಟಗಳನ್ನು ಸ್ಥಗಿತಗೊಳಿಸಲಾಗುವುದು. ಬದಲಾದ ಮತ್ತು ಪರಿಷ್ಕೃತ ಹಾರಾಟದ ವೇಳಾಪಟ್ಟಿಯ ಬಗ್ಗೆ ಮಾಹಿತಿ ಪಡೆಯಲು ತಮ್ಮ ವಿಮಾನಯಾನ ಸಂಸ್ಥೆಗಳೊಂದಿಗೆ ಸಂಪರ್ಕಿಸಲು ವಿಮಾನ ನಿಲ್ದಾಣದ ಅಧಿಕಾರಿಗಳು ಪ್ರಯಾಣಿಕರಿಗೆ ಸಲಹೆ ನೀಡಿದ್ದಾರೆ.
ಫೆಬ್ರವರಿ 8ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಮತ್ತು ಮಧ್ಯಾಹ್ನ 2 ರಿಂದ 5 ರವರೆಗೆ, ಫೆಬ್ರವರಿ 9 ಮತ್ತು 10: ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಮತ್ತು ಮಧ್ಯಾಹ್ನ 2 ರಿಂದ 5 ರವರೆಗೆ, ಫೆಬ್ರವರಿ 11: ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ಮತ್ತು ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ, ಫೆಬ್ರವರಿ 12: ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ, ಫೆಬ್ರವರಿ 13: ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ, ಫೆಬ್ರವರಿ 14 ಮತ್ತು 15: ಮಧ್ಯಾಹ್ನ 12 ರಿಂದ 2.30, ಫೆಬ್ರವರಿ 14 ಮತ್ತು 15: ಮಧ್ಯಾಹ್ನ 12 ರಿಂದ 2.30, ಫೆಬ್ರವರಿ 16 ಮತ್ತು 17: 9.30 ರಿಂದ 12 ರವರೆಗೆ ಮತ್ತು ಮಧ್ಯಾಹ್ನ 2 ರಿಂದ 5ಗಂಟೆಯ ವರೆಗೆ ಏರ್ ಶೋ ನಡೆಯಲಿದೆ.
ಇದನ್ನೂ ಓದಿ: Fixed wing Aircraft Tejas: ಏರ್ ಶೋನ ಇಂಡಿಯಾ ಪೆವಿಲಿಯನ್‌ನಲ್ಲಿ ಸ್ಥಿರ-ವಿಂಗ್ ವಿಮಾನಗಳ ಆರ್ಭಟ!
ಯಲಹಂಕ ವಲಯ ವ್ಯಾಪ್ತಿಯ ವಾಯುಸೇನಾ ನೆಲೆಯಲ್ಲಿ ಏರೋ ಶೋ ಹಿನೆಲೆಯಲ್ಲಿ ವಾಯುಸೇನಾ ನೆಲೆಯಿಂದ 5 ಕಿ.ಮೀ ಅಂತರದಲ್ಲಿ ನಿರ್ಮಾಣ ಹಂತದ ಬೃಹತ್ ಕಟ್ಟಡಗಳಲ್ಲಿ ಉಪಯೋಗಿಸುವ ಕ್ರೇನ್‌ಗಳ ಎತ್ತರವನ್ನು ತಗ್ಗಿಸಲು ಹಾಗೂ ಕ್ರೇನ್ ಚಟುವಟಿಕೆಯನ್ನು ಸ್ಥಗಿತಗೊಳಿಸಲು ಆದೇಶ ಪ್ರತಿಯಲ್ಲಿ ಸೂಚಿಸಲಾಗಿದೆ. ಒಂದು ವೇಳೆ ಆದೇಶ ಉಲ್ಲಂಘಿಸಿದಲ್ಲಿ ಬಿಬಿಎಂಪಿ ಕಾಯ್ದೆ 2020 ಮತ್ತು ಭಾರತೀಯ ಎರ್‌ಕ್ರಾಫ್ಟ್ ರೂಲ್ಸ್ 1937ರ ರೂಲ್ 91 ಕಾನೂನು ಅನ್ವಯ ಕ್ರಮಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಯೋಜನೆಯ ಜಂಟಿ ನಿರ್ದೇಶಕರು(ಉತ್ತರ) ಆದೇಶದಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕರಿಗೂ ಏರ್ ಶೋ ಕಣ್ತುಂಬಿಕೊಳ್ಳಲು ಅವಕಾಶವಿದೆ. ಅಧಿಕೃತ ವೆಬ್ಸೈಟ್ ಮೂಲಕ ಟಿಕೆಟ್ಗಳನ್ನು ಖರೀದಿಸಬಹುದಾಗಿದೆ. ಬ್ಯುಸಿನೆಸ್ ಟಿಕೆಟ್ಗೆ ₹ 5,000 ಶುಲ್ಕ ನಿಗದಿಪಡಿಸಲಾಗಿದೆ. ವಿದೇಶೀಯರಿಗೆ 150 ಡಾಲರ್ ಶುಲ್ಕವಿದೆ. ವಿಮಾನಗಳು ಹಾಗೂ ಎಕ್ಸಿಬಿಷನ್ ನೋಡಲು ಅವಕಾಶ ಕಲ್ಪಿಸುವ ಟಿಕೆಟ್ಗೆ ₹ 2,500 ಶುಲ್ಕವಿದೆ. ಕೇವಲ ವಿಮಾನಗಳನ್ನು ನೋಡುವ ಸ್ಥಳದ ಪ್ರವೇಶಕ್ಕೆ ₹ 1,000 ಶುಲ್ಕ ನಿಗದಿಪಡಿಸಲಾಗಿದೆ. ಮೊದಲು ಎರಡು ದಿನ ಉದ್ಯಮಕ್ಕೆ ಸಂಬಂಧಿಸಿದವರಿಗೆ (ಬ್ಯುಸಿನೆಸ್) ಮಾತ್ರವೇ ಪ್ರವೇಶ ಇರುತ್ತದೆ. ಕೊನೆಯ ಎರಡು ದಿನ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಟಿಕೆಟ್ ಬುಕ್ ಮಾಡಲು http://aeroindia.gov.in/ ವೆಬ್ಸೈಟ್ಗೆ ಭೇಟಿ ನೀಡಿ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:13 am, Tue, 7 February 23