ಬೆಂಗಳೂರಿನಲ್ಲಿ ವಾಯು ಮಾಲಿನ್ಯ (Air Pollution) ಒಂದು ವರ್ಷದ ಅವಧಿಯಲ್ಲಿ 40 ಪ್ರತಿಶತದಷ್ಟು ಅಧಿಕವಾಗಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಗಾಳಿಯ ಗುಣಮಟ್ಟ ಶೇ 66 ಇದ್ದಿದ್ದು ಈ ನವೆಂಬರ್‌ನಲ್ಲಿ 93 ಕ್ಕೆ ಏರಿದೆ ಎಂದು ವರದಿಯೊಂದು ತಿಳಿಸಿದೆ. ಚಳಿಗಾಲದ ನೈಸರ್ಗಿಕ ಪರಿಸ್ಥಿತಿಗಳು ಮತ್ತು ಟ್ರಾಫಿಕ್ ಹೊರಸೂಸುವಿಕೆಗಳು AQI ಮಟ್ಟಗಳ ಏರಿಕೆಗೆ ಕಾರಣವಾಗಬಹುದು ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಯ ಅಧಿಕಾರಿಯೊಬ್ಬರು ಹೇಳಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಸೋಮವಾರ ಬೆಳಿಗ್ಗೆ ನಗರದಲ್ಲಿ AQI 185 ರಷ್ಟಿತ್ತು, ಇದು ಕಳಪೆ ಆಗಿದೆ. ಕೃಷ್ಣರಾಜಪುರ ಮಾತ್ರ “ಮಧ್ಯಮ” ವಿಭಾಗದಲ್ಲಿದೆ. ವಾಯು ಮಾಲಿನ್ಯಕಾರಕಗಳನ್ನು ಸೂಚಿಸುವ Particle pollution ಅಥವಾ ಪಿಎಂ ವಿಶ್ವ ಆರೋಗ್ಯ ಸಂಸ್ಥೆಯ (WHO) 24-ಗಂಟೆಗಳ ಗಾಳಿಯ ಗುಣಮಟ್ಟದ ಮಾರ್ಗಸೂಚಿಗಳ ಮೌಲ್ಯವು ನೀಡಿದ ಶಿಫಾರಸು ಮಿತಿಗಿಂತ 5.7 ಪಟ್ಟು ಹೆಚ್ಚಾಗಿದೆ ಎಂದು AQI.in ವೆಬ್‌ಸೈಟ್ ಹೇಳಿದೆ. ಪ್ರಸ್ತುತ ಬೆಂಗಳೂರು PM2.5 ಹೊಂದಿದೆ. ಸೋಮವಾರ ಬೆಳಿಗ್ಗೆ ನಗರದಲ್ಲಿ ಪ್ರಮುಖ ಮಾಲಿನ್ಯಕಾರಕಗಳೆಂದರೆ ಪಿಎಂ 2.5, ಪಿಎಂ 10 ಮತ್ತು ಕಾರ್ಬನ್ ಮಾನಾಕ್ಸೈಡ್.
AQI ವೆಬ್‌ಸೈಟ್ ಮುಂದಿನ ವಾರದ ಮುನ್ಸೂಚನೆಯನ್ನು ಹಂಚಿಕೊಂಡಿದ್ದು, ಬುಧವಾರ ಮಟ್ಟಗಳು 150 ಅನ್ನು ಮೀರಬಹುದು ಎಂದು ಊಹಿಸಲಾಗಿದೆ. ಬೆಂಗಳೂರಿಗರು ಮನೆಯೊಳಗೆ ಇರುವಂತೆ, ಕಿಟಕಿಗಳನ್ನು ಮುಚ್ಚುವಂತೆ, ಮುಚ್ಚಿದ ಜಾಗಗಳಲ್ಲಿ ಏರ್ ಪ್ಯೂರಿಫೈಯರ್‌ಗಳನ್ನು ಬಳಸಿ. ಹೊರಗೆ ಹೋಗುವಾಗ ಫೇಸ್ ಮಾಸ್ಕ್ ಧರಿಸುವಂತೆ ಸಲಹೆ ನೀಡಿದೆ. ಗಾರ್ಡನ್ ಸಿಟಿ ಬೆಂಗಳೂರಿನಲ್ಲಿ ಅಕ್ಟೋಬರ್‌ನಿಂದ ಗಾಳಿಯ ಗುಣಮಟ್ಟ ಕಳಪೆಯೇ ಇದೆ.ವಿಶೇಷವಾಗಿ ಚಳಿಗಾಲದ ಪ್ರಾರಂಭದ ನಂತರ ದೀಪಾವಳಿ ಆಚರಣೆಗಳು ಶುರುವಾದಾಗ ಗಾಳಿಯ ಗುಣಮಟ್ಟ ಹದಗೆಟ್ಟಿದೆ. ಬೆಂಗಳೂರು ಕಳೆದ ವಾರವೂ ಕಳಪೆ AQI ಮಟ್ಟವನ್ನು ಕಂಡಿದ್ದು ಬುಧವಾರ ಬೆಳಿಗ್ಗೆ 210 ಕ್ಕೆ ಏರಿತು. ಅಂದಹಾಗೆ ಗಯಾ, ಭಾಗಲ್ಪುರ್ ಮತ್ತು ಪಾಟ್ನಾ ಸೋಮವಾರ ದೇಶದ ಅತ್ಯಂತ ಕಲುಷಿತ ನಗರಗಳಲ್ಲಿ ಒಂದಾಗಿದೆ. ಆದರೆ ತಮಿಳುನಾಡಿನ ಕೊಯಮತ್ತೂರು, ಈರೋಡ್ ಮತ್ತು ಕೊಡೈಕೆನಾಲ್ ಕಡಿಮೆ ಮಾಲಿನ್ಯದ ನಗರಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. KSPCB ಶುಕ್ರವಾರ ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನವನ್ನು ಆಚರಿಸಿದ್ದು ಕಾಲೇಜು ಆವರಣದಲ್ಲಿ KSPCB ಪ್ರದರ್ಶನವನ್ನು ಉದ್ಘಾಟಿಸಿದೆ.
ಮತ್ತಷ್ಟು ಬೆಂಗಳೂರು ನಗರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:54 pm, Mon, 5 December 22