ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಹನಿಟ್ರ್ಯಾಪ್​​ ಕೇಸ್​​: ನಿರ್ಬಂಧಕಾಜ್ಞೆ ಕೋರಿ ಹೈಕೋರ್ಟ್​​ಗೆ ರಿಟ್ ಅರ್ಜಿ ಸಲ್ಲಿಸಿದ JDS ಮಾಜಿ ಶಾಸಕ

ರಾಜ್ಯದಲ್ಲಿ ಮತ್ತೊಂದು ಹನಿಟ್ರ್ಯಾಪ್ ಪ್ರಕರಣ ಮುನ್ನೆಲೆಗೆ ಬಂದಿದ್ದು, ಮಹಿಳೆಯನ್ನು ಬಿಟ್ಟು ಖಾಸಗಿ ಕ್ಷಣಗಳ ರೆಕಾರ್ಡ್ ಮಾಡಿ ಈಗ ಪ್ರಸಾರ ಮಾಡುವುದಾಗಿ ಬೆದರಿಕೆ ಆರೋಪ ಸಂಬಂಧ ಮಾಗಡಿ ಕ್ಷೇತ್ರದ ಜೆಡಿಎಸ್ ಮಾಜಿ ಶಾಸಕ ಎ. ಮಂಜುನಾಥ್ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಮಂಜುನಾಥ್​​ ಅವರು ಹಾಲಿ ಜೆಡಿಎಸ್​​ನ ರಾಜ್ಯ ಕೋರ್​​ ಕಮಿಟಿ ಸದಸ್ಯರೂ ಹೌದು.

ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಹನಿಟ್ರ್ಯಾಪ್​​ ಕೇಸ್​​: ನಿರ್ಬಂಧಕಾಜ್ಞೆ ಕೋರಿ ಹೈಕೋರ್ಟ್​​ಗೆ ರಿಟ್ ಅರ್ಜಿ ಸಲ್ಲಿಸಿದ JDS ಮಾಜಿ ಶಾಸಕ
ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಹನಿಟ್ರ್ಯಾಪ್​​ ಕೇಸ್
Image Credit source: PTI
Edited By:

Updated on: Oct 28, 2026 | 6:27 PM

ಬೆಂಗಳೂರು, ಅಕ್ಟೋಬರ್​​ 28: ಮಾಜಿ ಸಿಎಂ ಸಿದ್ದರಾಮಯ್ಯ ಬಗ್ಗೆ ಸ್ಟಿಂಗ್​​ ಆಪರೇಷನ್​​ ವಿಚಾರವಾಗಿ ರಾಜ್ಯ ರಾಜಕೀಯದಲ್ಲಿ ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತಿವೆ. ಆಡಳಿತ ವಿಪಕ್ಷಗಳ ನಡುವೆ ವಾಕ್ಸಮರವೇ ಆರಂಭವಾಗಿದೆ. ಅದರಲ್ಲೂ ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್​​ ಖರ್ಗೆ ಮತ್ತು ಕೇಂದ್ರ ಸಚಿವ ಹೆಚ್​​.ಡಿ. ಕುಮಾರಸ್ವಾಮಿ ನಡುವೆ ಮಾತಿನ ಕಾಳಗವೇ ಆಗ್ತಿದೆ. ಈ ಹೊತ್ತಲ್ಲಿ ಮತ್ತೊಂದು ಹನಿಟ್ರ್ಯಾಪ್​​ ಕೇಸ್​​ ಮುನ್ನೆಲೆಗೆ ಬಂದಿದ್ದು, ಖಾಸಗಿ ಚಾನಲ್ ವಿರುದ್ಧ ನಿರ್ಬಂಧಕಾಜ್ಞೆ ಕೋರಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಕೆಯಾಗಿದೆ.

ಹೈಕೋರ್ಟ್​​ ಮೊರೆ ಹೋಗಿರುವ ಎ.ಮಂಜುನಾಥ್

JDS Ex-MLA A Manjunath Fears Honey Trap; Moves Karnataka High Court

ಹೌದು, ಮಹಿಳೆಯನ್ನು ಬಿಟ್ಟು ಖಾಸಗಿ ಕ್ಷಣಗಳ ರೆಕಾರ್ಡ್ ಮಾಡಿ ಈಗ ಪ್ರಸಾರ ಮಾಡುವುದಾಗಿ ಬೆದರಿಕೆ ಆರೋಪ ಸಂಬಂಧ ಮಾಗಡಿ ಕ್ಷೇತ್ರದ ಜೆಡಿಎಸ್​ನ ಮಾಜಿ ಶಾಸಕ ಎ.ಮಂಜುನಾಥ್ ಹೈಕೋರ್ಟ್​ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. 2018ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಜಯಗಳಿಸಿ, 2023ರವರೆಗೆ ಇವರು ಮಾಗಡಿ ಕ್ಷೇತ್ರದ ಶಾಸಕರಾಗಿದ್ದರು. ಮಂಜುನಾಥ್​​ ಅವರು ಹಾಲಿ ಜೆಡಿಎಸ್​​ನ ರಾಜ್ಯ ಕೋರ್​​ ಕಮಿಟಿ ಸದಸ್ಯರೂ ಹೌದು.

ಇದನ್ನೂ ಓದಿ: ‘ಮಿಸ್ಟರ್ ಪ್ರಿಯಾಂಕ್​… ಎಲ್ಲೂ ಹೋಗಲ್ಲ, ಬಂದು ನಿಮ್ಮ ಆಟ ಬಯಲು ಮಾಡ್ತೀನಿ: ಮತ್ತೆ ಸಿಡಿದ ಕುಮಾರಸ್ವಾಮಿ

ಹೈಕೋರ್ಟ್​​ಗೆ ಸಲ್ಲಿಸಿದ ಅರ್ಜಿಯಲ್ಲಿ ಏನಿದೆ?

ರಹಸ್ಯವಾಗಿ ಚಿತ್ರೀಕರಿಸಿದ ‘ಸ್ಟಿಂಗ್ ವಿಡಿಯೋ’ ಇರುವುದಾಗಿ ವಾಹಿನಿಯ ಕಾರ್ಯಕ್ರಮದಲ್ಲಿಯೇ ಹೇಳಲಾಗಿದೆ. ವಿಜಯದಶಮಿ ಮುಗಿದ ಬಳಿಕ ಆ ವಿಡಿಯೋವನ್ನು ತೋರಿಸುವುದಾಗಿಯೂ ತಿಳಿಸಿದ್ದಾರೆ. ಆ ವಿಡಿಯೋ ಅಸ್ತಿತ್ವದಲ್ಲಿದ್ದರೆ, ಅದು 2023ರ ಮಾರ್ಚ್‌ನಲ್ಲಿ ನಡೆದ ಘಟನೆಯಾಗಿದೆ. ಒಂದು ನೆಪವೊಡ್ಡಿ ಕರೆಸಿಕೊಂಡು, ಅರಿವಿಗೆ ಬಾರದಂತೆ ರಹಸ್ಯವಾಗಿ ವಿಡಿಯೋ ಚಿತ್ರೀಕರಣ ಮಾಡಲಾಗಿದೆ. ಆದರೆ ಅರ್ಜಿದಾರರು ಆ ವಿಡಿಯೋವನ್ನು ಎಂದಿಗೂ ನೋಡಿಲ್ಲ ಎಂದು ಹೈಕೋರ್ಟ್​​ಗೆ ಸಲ್ಲಿಸಲಾದ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

 

Published On - 5:37 pm, Wed, 28 October 26

ರಮೇಶ್​ ಎಮ್​.

ರಮೇಶ್​ ಎಂ ವಿಶೇಷ ವರದಿಗಾರರಾಗಿದ್ದಾರೆ, ಮೂಲತಃ ಕಾನೂನು ಪದವೀಧರನಾಗಿದ್ದು ಕಳೆದ 18 ವರ್ಷಗಳಿಂದ ಟಿವಿ9 ಸುದ್ದಿ ವಾಹಿನಿಯಲ್ಲಿ ಕಾನೂನು ಸಂಬಂಧಿತ ವರದಿ ನೀಡುತ್ತಿದ್ದಾರೆ. ಹೈಕೋರ್ಟ್, ಸುಪ್ರೀಂ ಕೋರ್ಟ್ ಹಾಗೂ ವಿಚಾರಣಾ ನ್ಯಾಯಾಲಯಗಳ ಪ್ರಮುಖ ಪ್ರಕರಣಗಳ ವರದಿಗಾರಿಕೆ ಮಾಡುತ್ತಿದ್ದು, ಬೆಂಗಳೂರಿನ ನಿವಾಸಿಯಾಗಿದ್ದಾರೆ.

Read More
Loading...
Unable to load recommendations.
Follow Us