ಬೆಂಗಳೂರಿನಲ್ಲಿ ಲಾಂಗ್ ಹಿಡಿದು ಉದ್ಯಮಿ ಮೇಲೆ ಹಲ್ಲೆ ಯತ್ನ;ಪ್ರಕರಣ ದಾಖಲಿಸಲು ವಿಳಂಬ, ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ದಾಖಲಾಯ್ತು ಕೇಸ್

ಲಾಂಗ್​ ಏಟಿನಿಂದ ತಲೆಗೆ ಗಂಭೀರ ಗಾಯವಾಗಿದ್ದರೂ, ಪೊಲೀಸರು ಕೇಸ್ ದಾಖಲಿಸಿರಲಿಲ್ಲ. ಈ ಉದ್ಯಮಿ ಮಾರ್ಗೊಂಡನಹಳ್ಳಿ ಬಳಿ ಜಮೀನು ಖರೀದಿಸಿದ್ದ. ಇದೇ ವಿಚಾರಕ್ಕೆ ಸ್ಥಳೀಯರಿಂದ ಉದ್ಯಮಿ ಮೇಲೆ ಪದೇಪದೆ ಹಲ್ಲೆಗೆ ಯತ್ನವಾಗುತ್ತಿತ್ತು. ಬಳಿಕ ಖರೀದಿಸಿದ ಜಮೀನಿನ ಕಾವಲಿಗೆ ಸೆಕ್ಯೂರಿಟಿ ನೇಮಿಸಿದ್ರು ಕೂಡ ಬೆದರಿಕೆ ಕೇಳಿಬಂದಿದ್ದು, ಸೆಕ್ಯೂರಿಟಿ ವಾಸವಾಗಿದ್ದ ಕಂಟೇನರ್​ಗೂ ಬೆಂಕಿಯಿಟ್ಟು ಅಟ್ಟಹಾಸ ಮೆರೆದಿದ್ದರು.

ಬೆಂಗಳೂರಿನಲ್ಲಿ ಲಾಂಗ್ ಹಿಡಿದು ಉದ್ಯಮಿ ಮೇಲೆ ಹಲ್ಲೆ ಯತ್ನ;ಪ್ರಕರಣ ದಾಖಲಿಸಲು ವಿಳಂಬ, ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ದಾಖಲಾಯ್ತು ಕೇಸ್
ಬೆಂಗಳೂರಿನಲ್ಲಿ ಉದ್ಯಮಿ ಮೇಲೆ ಹಲ್ಲೆ
Edited By: ಕಿರಣ್ ಹನುಮಂತ್​ ಮಾದಾರ್

Updated on: Oct 29, 2023 | 6:45 PM

ಬೆಂಗಳೂರು, ಅ.29: ಮಚ್ಚಿನಿಂದ ಉದ್ಯಮಿ ಮೇಲೆ ಹಲ್ಲೆಗೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಭೀರ ಗಾಯವಾದರೂ ಐಪಿಸಿ ಸೆಕ್ಷನ್ 307ರ ಅಡಿ ಆವಲಹಳ್ಳಿ ಪೊಲೀಸರು(Avalahalli Police Station) ಕೇಸ್ ದಾಖಲಿಸಿಲ್ಲ. ಈ ಹಿನ್ನಲೆ ರಿಯಲ್ ಎಸ್ಟೇಟ್‌ ದಂಧೆಕೋರರ ಜೊತೆ ಪೊಲೀಸರು ಶಾಮೀಲು ಆಗಿರುವ ಆರೋಪ ಕೇಳಿಬಂದಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಹಿರಿಯ ಅಧಿಕಾರಿಗಳು ಸೂಚನೆ  ನೀಡಿದ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಚ್ಚಿನೇಟಿನಿಂದ ತಲೆಗೆ ಗಂಭೀರ ಗಾಯವಾಗಿದ್ರೂ ಕೇಸ್ ದಾಖಲಿಸಿರಲಿಲ್ಲ

ಹೌದು, ಲಾಂಗ್​ ಏಟಿನಿಂದ ತಲೆಗೆ ಗಂಭೀರ ಗಾಯವಾಗಿದ್ದರೂ, ಪೊಲೀಸರು ಕೇಸ್ ದಾಖಲಿಸಿರಲಿಲ್ಲ. ಈ ಉದ್ಯಮಿ ಮಾರ್ಗೊಂಡನಹಳ್ಳಿ ಬಳಿ ಜಮೀನು ಖರೀದಿಸಿದ್ದ. ಇದೇ ವಿಚಾರಕ್ಕೆ ಸ್ಥಳೀಯರಿಂದ ಉದ್ಯಮಿ ಮೇಲೆ ಪದೇಪದೆ ಹಲ್ಲೆಗೆ ಯತ್ನವಾಗುತ್ತಿತ್ತು. ಬಳಿಕ ಖರೀದಿಸಿದ ಜಮೀನಿನ ಕಾವಲಿಗೆ ಸೆಕ್ಯೂರಿಟಿ ನೇಮಿಸಿದ್ರು ಕೂಡ ಬೆದರಿಕೆ ಕೇಳಿಬಂದಿದ್ದು, ಸೆಕ್ಯೂರಿಟಿ ವಾಸವಾಗಿದ್ದ ಕಂಟೇನರ್​ಗೂ ಬೆಂಕಿಯಿಟ್ಟು ಅಟ್ಟಹಾಸ ಮೆರೆದಿದ್ದರು. ಬಳಿಕ ಜಮೀನಿನಲ್ಲಿ ಕೆಲಸ ಮಾಡಿಸಲು ಹೋದ ಉದ್ಯಮಿ ಮೇಲೆ ಹಲ್ಲೆ ಮಾಡಿದ್ದರು. ಸ್ಥಳೀಯ ವ್ಯಕ್ತಿ ಲಾಂಗ್ ಹಿಡಿದುಕೊಂಡು ಬರುತ್ತಿರುವ ದೃಶ್ಯ ಟಿವಿ9ಗೆ ಲಭ್ಯವಾಗಿದೆ.

ಇದನ್ನೂ ಓದಿ:ನೆಲಮಂಗಲ: ಕಾರಿನ ಗ್ಲಾಸ್ ಒಡೆದು ವಿಜ್ಞಾನಿ ಮೇಲೆ ಹಲ್ಲೆಗೆ ಯತ್ನಿಸಿದ್ದ ಮೂವರು ದರೋಡೆಕೋರರು ಅರೆಸ್ಟ್, ಇಬ್ಬರು ಪರಾರಿ

ವೇಸ್ಟೆಜ್​​​​ ಸುಡಲು ಹಚ್ಚಿದ ಬೆಂಕಿಗೆ ಗ್ಯಾರೇಜ್​​​​ನಲ್ಲಿದ್ದ ಲಾರಿ ಬೆಂಕಿಗಾಹುತಿ

ವಿಜಯಪುರ: ವೇಸ್ಟೆಜ್​ ​​ಸುಡಲು ಹಚ್ಚಿದ ಬೆಂಕಿಯಿಂದ ಗ್ಯಾರೇಜ್​​​​ನಲ್ಲಿದ್ದ ಲಾರಿ ಬೆಂಕಿಗಾಹುತಿಯಾದ ಘಟನೆ ನಗರದ ಶಿಕಾರಖಾನೆ ಬಳಿಯ ಗ್ಯಾರೇಜ್​​ನಲ್ಲಿ ತಡರಾತ್ರಿ ನಡೆದಿದೆ. ನೂರ್ ಅಹ್ಮದ್ ಎಂಬುವರಿಗೆ ಸೇರಿದ ಲಾರಿ ಇದಾಗಿದ್ದು, ಬೆಂಕಿಯ ಕೆನ್ನಾಲಿಗೆಗೆ ಗ್ಯಾರೇಜ್​ನಲ್ಲಿದ್ದ ಲಾರಿ ಸೇರಿ ಇತರೇ ವಸ್ತುಗಳು ಸುಟ್ಟು ಭಸ್ಮವಾಗಿದೆ. ಬೆಂಕಿ ನಂದಿಸಲು ಅಗ್ನಿಶಾಮಕದಳ ಸಿಬ್ಬಂದಿ ಹರಸಾಹಸ ಪಟ್ಟಿದ್ದು, ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:40 pm, Sun, 29 October 23

ಜಗದೀಶ ಬಿ.

ಜಗದೀಶ್​ ಬಸವರಾಜು ಟಿವಿ9 ಕನ್ನಡದ ಜಿಲ್ಲಾ ವರದಿಗಾರರಾಗಿದ್ದಾರೆ. ಪ್ರಸ್ತುತ ಅವರು ತುಮಕುರು ಜಿಲ್ಲಾ ಸುದ್ದಿಗಳ ವರದಿ ಮಾಡುತ್ತಿದ್ದಾರೆ. ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ. ಪತ್ರಿಕೋದ್ಯಮ ಓದಿದ್ದು, ವೃತ್ತಿ ಬದುಕು ಆರಂಭಿಸಿದ್ದು ಕೂಡಾ ಬೆಂಗಳೂರಿನಲ್ಲಿ. ಟಿವಿ9ನಲ್ಲಿ ಎಂಟು ವರ್ಷ ಸಹಿತ ಹತ್ತು ವರ್ಷದ ಕ್ರೈಂ ವರದಿಗಾರಿಕೆಯ ಅನುಭವದ ಜೊತೆ ಸದ್ಯ ೨೦೨೫ರಿಂದ ತುಮಕೂರು ಜಿಲ್ಲಾವರದಿಗಾರನಾಗಿ ಮಾದ್ಯಮದ ವೃತ್ತಿ ಬದುಕು ಮುಂದುವರೆದಿದೆ.

Read More
Loading...
Unable to load recommendations.
Follow Us