ನೆಲಮಂಗಲ: ಕಾರಿನ ಗ್ಲಾಸ್ ಒಡೆದು ವಿಜ್ಞಾನಿ ಮೇಲೆ ಹಲ್ಲೆಗೆ ಯತ್ನಿಸಿದ್ದ ಮೂವರು ದರೋಡೆಕೋರರು ಅರೆಸ್ಟ್, ಇಬ್ಬರು ಪರಾರಿ
ಬೆಂಗಳೂರು ಉತ್ತರ ತಾಲೂಕಿನ ರಾವುತನಹಳ್ಳಿಯಲ್ಲಿ ಆ.24ರಂದು ನ್ಯಾನೊ ಮತ್ತು ಸಾಫ್ಟ್ ಮ್ಯಾಟರ್ ಸೈನ್ಸಸ್ ಕೇಂದ್ರದ (ಸಿಇಎನ್‌ಎಸ್) 34 ವರ್ಷದ ವಿಜ್ಞಾನಿ ಅಶುತೋಷ್ ಕುಮಾರ್ ಸಿಂಗ್ ಅವರ ಕಾರಿಗೆ ದುಷ್ಕರ್ಮಿಗಳು ಕಲ್ಲೆಸೆದು ಹಲ್ಲೆಗೆ ಯತ್ನಿಸಿದ್ದರು. ಸದ್ಯ ಈಗ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ನೆಲಮಂಗಲ, ಸೆ.12: ಕಾರಿನ ಗ್ಲಾಸ್ ಒಡೆದು ವಿಜ್ಞಾನಿ ಮೇಲೆ ಹಲ್ಲೆಗೆ ಯತ್ನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಮಾದನಾಯಕನಹಳ್ಳಿ ಪೊಲೀಸರು(Madanayakanahalli Police Station) ಕುಖ್ಯಾತ ಮೂವರು ದರೋಡೆಕೋರರನ್ನು ಬಂಧಿಸಿದ್ದಾರೆ. ಮೈಲಾರಿ(22), ನವೀನ್(22) ಹಾಗೂ ಶಿವರಾಜ್(30) ಬಂಧಿತ ಆರೋಪಿಗಳು. ಸೋಮ ಅಲಿಯಾಸ್ ಸೋನು, ಕೀರ್ತಿ ಅಲಿಯಾಸ್ ಉಮೇಶ್ ಎಂಬ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.
ಬೆಂಗಳೂರು ಉತ್ತರ ತಾಲೂಕಿನ ರಾವುತನಹಳ್ಳಿಯಲ್ಲಿ ಆ.24ರಂದು ನ್ಯಾನೊ ಮತ್ತು ಸಾಫ್ಟ್ ಮ್ಯಾಟರ್ ಸೈನ್ಸಸ್ ಕೇಂದ್ರದ (ಸಿಇಎನ್‌ಎಸ್) 34 ವರ್ಷದ ವಿಜ್ಞಾನಿ ಅಶುತೋಷ್ ಕುಮಾರ್ ಸಿಂಗ್ ಅವರ ಕಾರಿಗೆ ದುಷ್ಕರ್ಮಿಗಳು ಕಲ್ಲೆಸೆದು ಹಲ್ಲೆಗೆ ಯತ್ನಿಸಿದ್ದರು. ಈ ಸಂಬಂಧ ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಎಸ್ಪಿ ಮಲ್ಲಿಕಾರ್ಜುನ ಬಾಲದಂಡೆ ಮಾರ್ಗದರ್ಶನದಲ್ಲಿ ತಂಡ ರಚನೆಯಾಗಿತ್ತು. ಸದ್ಯ ಈಗ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ರಾವುತನಹಳ್ಳಿ ಬಳಿ ಕಾರ್ಯಾಚರಣೆ ನಡೆಸಿ ಮಧ್ಯರಾತ್ರಿ ದರೋಡೆಗೆ ಹೊಂಚು ಹಾಕುತ್ತಿದ್ದಾಗ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ಬಳಿಯಿದ್ದ ಮಾರಕಾಸ್ತ್ರ, ಕೃತ್ಯಕ್ಕೆ ಬಳಸಿದ್ದ ಬೈಕ್ ಜಪ್ತಿ ಮಾಡಲಾಗಿದೆ.
ಇದನ್ನೂ ಓದಿ: ಬೆಂಗಳೂರು: ಮೈಕ್ರೋ ನ್ಯಾನೋ ಟೆಕ್ನಾಲಜಿ ಇನ್ಸ್ಟಿಟ್ಯೂಟ್ ವಿಜ್ಞಾನಿ ಕಾರಿನ ಮೇಲೆ ದುಷ್ಕರ್ಮಿಗಳಿಂದ ದಾಳಿ, ಹಲ್ಲೆಗೆ ಯತ್ನ
ಬೇಕರಿ ಮುಂದೆ ಡ್ರ್ಯಾಗರ್ ಹಿಡಿದು ವ್ಯಕ್ತಿ ಪುಂಡಾಟ
ಸಿಲಿಕಾನ್ ಸಿಟಿಯಲ್ಲಿ ಪುಂಡರ ಪುಂಡಾಟ ಮಿತಿ ಮೀರುತ್ತಿದೆ. ಮಾರಕಾಸ್ತ್ರ ಹಿಡಿದು ರಸ್ತೆಗಳಲ್ಲಿ ದರ್ಪ ಮೆರೆಯುತ್ತಿದ್ದಾರೆ. ಸೆಪ್ಟೆಂಬರ್ 10 ರಂದು ನಾಗರಬಾವಿಯಲ್ಲಿ ಪುಂಡನೊಬ್ಬ ಪುಂಡಾಟ ತೋರಿ ಆಸ್ಪತ್ರೆ ಸೇರಿದ ಘಟನೆ ನಡೆದಿದೆ. ನಾಗರಬಾವಿಯಲ್ಲಿ ನಂದಿನಿ ಬೂತ್ ಮಾಲೀಕ ಸ್ವಾಮಿ ಎಂಬಾತ ಡ್ರ್ಯಾಗರ್ ಹಿಡಿದು ಪುಂಡಾಟ ತೋರಿದ್ದಾನೆ. ತನ್ನ ಪಕ್ಕದ ಬೇಕರಿ ಮುಂದೆ ನಿಂತಿದ್ದ ಗ್ರಾಹಕರೊಂದಿಗೆ ಕಿರಿಕ್ ಮಾಡಿದ್ದಾನೆ. ಏಕಾಏಕಿ ಡ್ರ್ಯಾಗರ್ ತೆಗೆದು ಗ್ರಾಹಕರಿಗೆ ಇರಿಯಲು ಯತ್ನಿಸಿದ್ದಾನೆ. ಗಲಾಟೆಯಲ್ಲಿ ಸ್ವಾಮಿಗೆ ಡ್ರ್ಯಾಗರ್ ನಿಂದ ಹಲ್ಲೆಯಾಗಿದ್ದು ಸದ್ಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹಲ್ಲೆ ನಡೆಸೋ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:52 am, Tue, 12 September 23