ಬೆಂಗಳೂರು: ಬೆಂಗಳೂರಿನ ಆಟೋರಿಕ್ಷಾ (Auto Rikshaw) ಚಾಲಕರೊಬ್ಬರು ಎರಡು ವಿಭಿನ್ನ ಅಗ್ರಿಗೇಟರ್ ಆ್ಯಪ್ಗಳಲ್ಲಿ ಏಕಕಾಲದಲ್ಲಿ ಬಾಡಿಗೆಯ ಬೇಡಿಕೆಯನ್ನು ಸ್ವೀಕರಿಸಿರುವ ಬಗ್ಗೆ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟರ್ನಲ್ಲಿ (Twitter) ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದು, ಸ್ವಾರಸ್ಯಕರ ಚರ್ಚೆಗೆ ನಾಂದಿಹಾಡಿದೆ. Harsh.fig ಎಂಬ ಟ್ವಿಟರ್ ಹ್ಯಾಂಡಲ್ನಿಂದ ಸಂದೇಶ ಪೋಸ್ಟ್ ಮಾಡಲಾಗಿದ್ದು, ‘ಪೀಕ್ ಬೆಂಗಳೂರಿನ ಕ್ಷಣ’ ಎಂದು ಅವರು ಉಲ್ಲೇಖಿಸಿದ್ದಾರೆ.
2 ವಿಭಿನ್ನ ಸ್ಥಳಗಳು, 2 ವಿಭಿನ್ನ ಅಪ್ಲಿಕೇಶನ್‌ಗಳು, 2 ವಿಭಿನ್ನ ಫೋನ್‌ಗಳು, ಒಂದೇ ಆಟೋ ಒಬ್ಬನೇ ಚಾಲಕ @peakbengaluru? ಎಂದು ಬಳಕೆದಾರರು ಪೋಸ್ಟ್ ಮಾಡಿದ್ದಾರೆ.
2 different locations
2 different apps
2 different phonesSame auto
Same driver @peakbengaluru much? pic.twitter.com/JhhoBg7c2J— harsh.fig ? ? (@design_melon_) August 6, 2023
ದಶರತ್ ಎಂಬ ಒಬ್ಬನೇ ಚಾಲಕನ ಹೆಸರು ತೋರಿಸುವ ಎರಡು ವಿಭಿನ್ನ ಆ್ಯಪ್ಗಳ ಸ್ಕ್ರೀನ್‌ಶಾಟ್ ಅನ್ನು ಸಹ ಅವರು ಹಂಚಿಕೊಂಡಿದ್ದಾರೆ.
‘ದಶರತ್ ನೀಡ್ ಎ ರೈಸ್’ ಎಂದು ಮತ್ತೊಂದು ಪೋಸ್ಟ್ನಲ್ಲಿ ಅವರು ಉಲ್ಲೇಖಿಸಿದ್ದಾರೆ.
Harsh.fig ಟ್ವೀಟ್ಗೆ ಪ್ರತಿಕ್ರಿಯಿಸಿದ ಮಾಳವಿಕಾ ಸಿಂಗ್ ಎಂಬವರು, ಇದು ಬಹಳ ಆಸಕ್ತಿದಾಯಕವಾಗಿದೆ. ಸಮಯದ ಸವಾಲನ್ನೂ ಮೀರಿರುವುದು ಇದು ಎಂದು ಉಲ್ಲೇಖಿಸಿದ್ದಾರೆ.
ಸಾರ್ವಜನಿಕ ಸಾರಿಗೆಯಲ್ಲಿನ ಸಮಸ್ಯೆಗಳಿಗೆ ಹೆಸರುವಾಸಿಯಾದ ಬೆಂಗಳೂರಿನಲ್ಲಿ ಆಟೋರಿಕ್ಷಾ ಚಾಲಕನು ಎರಡು ವಿಭಿನ್ನ ಪ್ಲಾಟ್‌ಫಾರ್ಮ್‌ಗಳಲ್ಲಿ ಏಕಕಾಲಕ್ಕೆ ರೈಡ್ ಮನವಿ ಸ್ವೀಕರಿಸಿರುವುದು ನೆಟ್ಟಿಗರ ಕುತೂಹಲ ಕೆರಳಿಸಿದೆ.
ಇದನ್ನೂ ಓದಿ: ಬೆಂಗಳೂರು: ಪತಿಯ ಬಣ್ಣ ಕಪ್ಪೆಂದು ಅವಹೇಳನ ಮಾಡಿದ ಪತ್ನಿಗೆ ವಿಚ್ಛೇದನ ದಯಪಾಲಿಸಿದ ಹೈಕೋರ್ಟ್!
ಸದಾ ಸಂಚಾರ ದಟ್ಟಣೆಯಿಂದ ಕೂಡಿರುವ ಬೆಂಗಳೂರಿನಲ್ಲಿ ಹಲವಾರು ಆ್ಯಪ್ ಆಧಾರಿತ ಆಟೋ, ಟ್ಯಾಕ್ಸಿಗಳು ಕಾರ್ಯನಿರ್ವಹಿಸುತ್ತಿವೆ. ಕೆಲವೊಂದು ಆಟೋ ಚಾಲಕರು ಒಂದಕ್ಕಿಂತ ಹೆಚ್ಚಿನ ಆ್ಯಪ್ಗಳ ಮೂಲಕ ಸೇವೆ ಒದಗಿಸುತ್ತಾರೆ. ಇದೀಗ ಒಬ್ಬರೇ ಚಾಲಕ ಎರಡು ವಿಭಿನ್ನ ಆ್ಯಪ್ಗಳ ಮೂಲಕ ಏಕಕಾಲದಲ್ಲಿ ರೈಡ್ಗೆ ಮನವಿ ಸ್ವೀಕರಿಸಿದ ಅಪರೂಪದ ವಿದ್ಯಮಾನ ಸಾಮಾಜಿಕ ಜಾಲತಾಣಗಳಲ್ಲಿ ಸ್ವಾರಸ್ಯಕರ ಚರ್ಚೆಗೆ ಕಾರಣವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ