ಬೆಂಗಳೂರು ಗ್ರಾಮಾಂತರ, ಡಿ.31: ಹೊಸ ವರ್ಷ ಆಚರಣೆಗೆ ರಾಜ್ಯದ ಹಲವೆಡೆ ಭರ್ಜರಿ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಅದರಂತೆ ಬೆಂಗಳೂರಿನ ಹೊರವಲಯದ ನಂದಿಬೆಟ್ಟದ ತಪ್ಪಲಿನ ಹಲವು ರೆಸಾರ್ಟ್ ಹಾಗೂ ದೇವನಹಳ್ಳಿ ತಾಲೂಕಿನ ಕಾರಹಳ್ಳಿ ಬಳಿಯ ಹ್ಯಾಂಗ್ ಔಟ್ ರೆಸಾರ್ಟ್ನಲ್ಲಿ ನ್ಯೂ ಇಯರ್(New Year) ಫುಲ್ ಸೆಲೆಬ್ರೆಷನ್ಗೆ ರೆಡಿಯಾಗಿದೆ. ಈಗಾಗಲೇ 250 ಕ್ಕೂ ಹೆಚ್ಚು ಮಂದಿ ಬುಕ್ಕಿಂಗ್ ಆಗಿದ್ದು, ಇಲ್ಲಿ ಅನ್ ಲಿಮಿಟೆಟ್ ಪುಡ್ ಹಾಗೂ ಡ್ರಿಂಕ್ಸ್ ಜೊತೆಗೆ ಒಪನ್ ಏರಿಯಾದಲ್ಲಿ 50 ಕ್ಕೂ ವಿವಿಧ ಬಗೆಯ ಊಟದ ಮೆನುವನ್ನು ರೆಸಾರ್ಟ್ ಸಿಬ್ಬಂದಿ ರೆಡಿ ಮಾಡಿಕೊಂಡಿದ್ದಾರೆ.
ಇನ್ನು ಕುಡಿದು ಟೈಟ್ ಆದವರು ಮನೆಗೆ ತೆರಳಲು ಸಾಧ್ಯವಾಗದವರಿಗೆ 100 ಟೆಂಟ್ಗಳನ್ನು ನಿರ್ಮಿಸಲಾಗಿದೆ. ಒಂದು ಟೆಂಟ್ನಲ್ಲಿ ಇಬ್ಬರು ಮಲಗಬಹುದಾಗಿದೆ. ಡಿಜೆ ಪಾರ್ಟಿ ಒಂದು ಕಡೆ, ಮತ್ತೊಂದು ಕಡೆ ಪೈರ್ ಕ್ಯಾಂಪ್ ಕೂಡ ಆಯೋಜಿಸಲಾಗಿದೆ. ಹೊಸ ವರ್ಷದ ಹಿನ್ನಲೆ ಹ್ಯಾಂಗ್ ಔಟ್ ರೆಸಾರ್ಟ್ ಒಂದು ದಿನದ ಮಟ್ಟಿಗೆ ಬಾರ್ ಲೈಸನ್ಸ್ ಪಡೆದಿದೆ. ಯಾವುದೇ ಅಹಿತಕರ ಘಟನೆ ಆಗದಂತೆ ಅನುಮತಿ ಪಡೆದಿರುವ ರೆಸಾರ್ಟ್ಗಳಿಗೆ ಪೋಲೀಸರು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ:ಹೊಸ ವರ್ಷಾಚರಣೆ: ಮಧ್ಯರಾತ್ರಿ 2 ಗಂಟೆವರೆಗೂ ಓಡಲಿವೆ ಬಿಎಂಟಿಸಿ ಬಸ್ಗಳು
ಹೊಸವರ್ಷಾಚರಣೆ ಸಂಭ್ರಮಾಚರಣೆಗೆ ಸಿದ್ದತೆ ಕೋರಮಂಗಲ ಪಬ್ಗಳಲ್ಲಿ ಭರದ ಸಿದ್ದತೆ ಮಾಡಿಕೊಂಡಿದೆ. ಈ ಕುರಿತು ಮಾತನಾಡಿದ ಜಿಪ್ಸಿ ಟವರ್ ಪಬ್ ಮಾಲೀಕ್ ಪ್ರಕಾಶ್ ನಾಯಕ್‘ ಸೆಲೆಬ್ರೇಷನ್ ಗೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಪೋಲಿಸರು ಗೈಡ್ ಲೈನ್ಸ್ ಫಾಲೋ ಮಾಡ್ತಿದ್ದೇವೆ. ವ್ಯಾಲಿಡ್ ಐಡಿ ಕಾರ್ಡ್ ಗಳನ್ನು ಪರಿಶೀಲನೆ ಮಾಡಿ ಒಳಗೆ ಬಿಡಲಾಗುತ್ತೆ. ಹೊಸ ಪಬ್ ಇದಾಗಿದ್ದು, ಹಾಗಾಗಿ ನಮಗೆ ಇದು ನಮಗೆ ಮೊದಲ ನ್ಯೂ ಇಯರ್. ಸುಮಾರು 1 ಸಾವಿರ ಜನ ಬರುವ ನಿರೀಕ್ಷೆ ಇದೆ. ಯುವತಿಯರಿಗೆ, ಕಪಲ್ಸ್ ಗೆ ಬೇರೆ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ 21 ವರ್ಷ ಮೇಲ್ಪಟ್ಟವರಿಗೆ ಮಾತ್ರ ಪಬ್ ಒಳಗೆ ಪ್ರವೇಶ ಎಂದರು.
ಉತ್ತರ ಕನ್ನಡ: ಹೊಸ ವರ್ಷ ಎಂಜಾಯ್ ಮಾಡಲು ಬೆಂಗಳೂರು, ದಾವಣಗೆರೆ, ಮೈಸೂರು, ಮಹಾರಾಷ್ಟ್ರ ಭಾಗದಿಂದ ಜಿಲ್ಲೆಗೆ ಪ್ರವಾಸಿಗರು ಆಗಮಿಸಿದ್ದಾರೆ. ಕಾರವಾರದ ರವೀಂದ್ರನಾಥ್ ಠಾಗೋರ ಕಡಲ ತೀರದಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಮಹಿಳೆಯರು ಹಾಗೂ ಚಿಕ್ಕ ಮಕ್ಕಳು ಸೇರಿದಂತೆ ಜಲಸಾಹಸ ಕ್ರೀಡೆಯಲ್ಲಿ ತೊಡಗಿದ್ದಾರೆ.
ಮೈಸೂರು: ಸಾಂಸ್ಕೃತೀಕ ನಗರಿ ಮೈಸೂರಿನ ಕಾಸ್ಮೋಪಾಲಿಟಾನ್ ಕ್ಲಬ್ನಲ್ಲಿ ಹೊಸ ವರ್ಷ ಸಂಭ್ರಮಕ್ಕೆ ಬರದ ಸಿದ್ದತೆ ಮಾಡಿಕೊಳ್ಳಲಾಗಿದೆ. ರೆಡ್ ಕಾರ್ಪೆಟ್ ಥೀಮ್ನಲ್ಲಿ ಬೆಂಗಳೂರಿನ ಕಲಾವಿದರಿಂದ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸಂಪೂರ್ಣ ಕ್ಲಬ್ನ್ನು ಕೆಂಪು ಮತ್ತು ಕಪ್ಪು ಬಣ್ಣದಿಂದ ಶೃಂಗಾರ ಮಾಡಲಾಗಿದ್ದು, ಬರುವಂತಹ ಕ್ಲಬ್ ಸದಸ್ಯರು ಹಾಗೂ ಗ್ರಾಹಕರಿಗೆ ರೌಂಡ್ ಟೇಬಲ್ ವ್ಯವಸ್ಥೆ ಮಾಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:51 pm, Sun, 31 December 23