ಬೆಂಗಳೂರಿನಲ್ಲಿ ಹೆಚ್ಚಾದ ಸೈಬರ್ ಕ್ರೈಂ; ಹದಿನೆಂಟು ಮಾದರಿಯಲ್ಲಿ ಜನರನ್ನು ವಂಚಿಸುತ್ತಿದ್ದ ಖದೀಮರು

| Updated By: ಆಯೇಷಾ ಬಾನು

Updated on: Oct 14, 2023 | 12:48 PM

ಈಗ ಬೆಂಗಳೂರಿನಲ್ಲಿ ಅತಿಹೆಚ್ಚು ದಾಖಲಾಗ್ತಿರುವ ಕೇಸ್ ಗಳು ಅಂದ್ರೆ ಅದು ಸೈಬರ್ ಕ್ರೈಮ್. ಈ ಸೈಬರ್ ಕ್ರೈಮ್ ನಲ್ಲಿ ಇದುವರೆಗೆ ನಗರದಲ್ಲಿ ಪೊಲೀಸರು ಎಷ್ಟು ಕೇಸ್ ದಾಖಲು ಮಾಡಿದ್ದಾರೆ. ಎಷ್ಟು ಮಾದರಿಯಲ್ಲಿ ವಂಚನೆ ಆಗಿದೆ ಅನ್ನೊ ಡೀಟೇಲ್ಸ್ ಇಲ್ಲಿದೆ.

ಬೆಂಗಳೂರಿನಲ್ಲಿ ಹೆಚ್ಚಾದ ಸೈಬರ್ ಕ್ರೈಂ; ಹದಿನೆಂಟು ಮಾದರಿಯಲ್ಲಿ ಜನರನ್ನು ವಂಚಿಸುತ್ತಿದ್ದ ಖದೀಮರು
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಅ.14: ನಗರ ಎಲ್ಲಾ ಪೊಲೀಸ್ ಠಾಣೆಯಲ್ಲಿ ಈಗ ಸೈಬರ್ ಕ್ರೈಮ್ (Cyber Crime) ದೂರುಗಳನ್ನು ದಾಖಲು ಮಾಡಲಾಗ್ತಿದೆ, ಇದ್ರಿಂದ ಸೈಬರ್ ಕ್ರೈಮ್ ವ್ಯಾಪಕತೆ ಎಷ್ಟೆದೆ ಅನ್ನೊದು ಗೊತ್ತಾಗುತ್ತಿದೆ. ಜೊತೆಗೆ ಇದುವರೆಗೆ 18 ಮಾದರಿಯಲ್ಲಿ ಸೈಬರ್ ಕ್ರೈಮ್ ಮಾಡಲಾಗ್ತಿದೆ ಅನ್ನೊದು ಗೊತ್ತಾಗಿದೆ. ಒಟ್ಟು 12,615 ಕೇಸ್ ಇದುವರೆಗೆ ನಗರದಲ್ಲಿ ದಾಖಲಾಗಿದೆ. ಈ ಪೈಕಿ 470 ಕೋಟಿ ಹಣ ವಂಚನೆ ಮಾಡಲಾಗಿದೆ. ಇದರಲ್ಲಿ 201 ಕೋಟಿ ಹಣವನ್ನು ಆರೋಪಿಗಳ ಅಕೌಂಟ್ ನಲ್ಲಿ ಫ್ರೀಜ್ ಮಾಡಲಾಗಿದೆ. 27 ಕೋಟಿ ಹಣವನ್ನು ವಪಸ್ಸು ಕಳೆದುಕೊಂಡವರಿಗೆ ನೀಡಲಾಗಿದೆ.

ಯಾವುವು ಈ ಹದಿನೆಂಟು ಮಾದರಿಯ ಸೈಬರ್ ಕ್ರೈಮ್ ಅನ್ನೊ ಮಾಹಿತಿ ಇಲ್ಲಿದೆ.

  1. ಆನ್ಲೈನ್ ಜಾಬ್ ಫ್ರಾಡ್: ಸಾಮಾಜಿಕ ಜಾಲತಾಣ, ಮತ್ತು ನೌಕರಿ ಡಾಟ್ ಕಾಮ್, ಲಿಂಕ್ ಡಿನ್ ಸೇರಿ ಹಲವು ಕಡೆ ಕೆಲಸ ಇದೆ ಎಂದು ನಂಬಿಸಿ ಅಭ್ಯರ್ಥಿಗಳಿಗೆ ಫೇಕ್ ಇಂಟರ್ವ್ಯೂ ನಡೆಸಿ ಹಣ ಪಡೆದು ವಂಚನೆ. ಮತ್ತು ಯೂಟ್ಯೂಬ್ ನಲ್ಲಿ ವಿಡಿಯೋ ಲೈಕ್ ಮಾಡುವುದು. ಗೂಗಲ್ ನಲ್ಲಿ ರಿವೀವ್ ಹಾಕುವ ಕೆಲಸ ಎಂದೆಲ್ಲಾ ಹೇಳಿ ಹಣ ಪಡೆದು ವಂಚನೆ ನಡೆಸಲಾಗಿದೆ. ಇದುವರೆಗೆ ನಗರದಲ್ಲಿ ಈ ರೀತಿಯಲ್ಲಿ ಹತ್ತು ತಿಂಗಳಲ್ಲಿ 3346 ಕೇಸ್ ದಾಖಲಾಗಿದೆ. ಸಾರ್ವಜನಿಕರ ಬಳಿ ಇನ್ನೂರು ಕೋಟಿಗೂ ಅಧಿಕ ಹಣ ವಂಚನೆ ಮಾಡಲಾಗಿದೆ.
  2. ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ವಂಚನೆ: ಫೋನ್ ಮತ್ತು ಮೆಸೇಜ್ ಮೂಲಕ ಸಂಪರ್ಕ ಮಾಡಿ ನಿಮ್ಮ ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಅವಧಿ ಮುಗಿದಿದೆ ಅಥವಾ ಗಿಫ್ಟ್ ಬಂದಿದೆ. ಅಥವ ಸೆಕ್ಯುರಿಟಿ ಚೆಕ್ ಎಂದು ಹೇಳಿ ನಂಬಿಸಿ ಅದನ್ನು ಅಪ್ಡೇಟ್ ಮಾಡಬೇಕು ಅದಕ್ಕೆ ಒಟಿಪಿ ಬೇಕು ಎಂದು ಹೇಳಿ ಮಾಹಿತಿ ಪಡೆದು ಬ್ಯಾಂಕ್ ಅಕೌಂಟ್ ನಲ್ಲಿನ ಹಣವನ್ನು ಪಡೆದು ವಂಚನೆ ಮಾಡ್ತಾರೆ. ಈ ಮಾದರಿಯಲ್ಲಿ ಕಳೆದ ಜನವರಿ ಯಿಂದ ಇಲ್ಲಿಯವರೆಗೆ 3102 ಜನರಿಗೆ ವಂಚನೆ ಮಾಡಲಾಗಿದ್ದು ಸಾರ್ವಜನಿಕರ ಅರವತ್ತು ಕೋಟಿಗು ಹೆಚ್ಚು ಹಣ ವಂಚನೆ ಮಾಡಲಾಗಿದೆ.
  3. ಬಿಸಿನೆಸ್ಆಫರ್ ವಂಚನೆ: ಆನ್ಲೈನ್ ನಲ್ಲಿ ಹೊಸ ವ್ಯವಹಾರಗಳನ್ನು ನಡೆಸಬಹುದು ಎಂದು ಸಂಪರ್ಕ ಮಾಡಿ ನಂಬಿಸುತ್ತಾರೆ. ಉದಾಹರಣೆಗೆ ಬಲ್ಪ್ ತಯಾರು ಮಾಡಿ, ಪೆನ್ಸಿಲ್ ವ್ಯವಹಾರ ಮಾಡಿ ನಾವು ಗ್ರಾಹಕರ ಕೊಡುತ್ತೇವೆ ಎಂದು ನಂಬಿಸಿ ಅದಕ್ಕೆ ಇಂತಿಷ್ಟು ಎಂದು ಹೂಡಿಕೆ ಮಾಡಿಸಿ ಹಣ ವಂಚನೆ ಮಾಡ್ತಾರೆ. ಈ ರೀತಿ ನಗರದಲ್ಲಿ ಈಗ 1133 ಕೇಸ್ ದಾಖಲಾಗಿದ್ದು‌ ಸಾರ್ವಜನಿಕರ ಅರವತ್ತು ಕೋಟಿ ಐವತ್ತಮೂರು ಲಕ್ಷ ಹಣ ವಂಚನೆ ಮಾಡಲಾಗಿದೆ.
  4. ಗಿಫ್ಟ್, ಐಫೋನ್ ,ಒ ಎಲ್ ಎಕ್ಸ್ : ಈ ಮಾದರಿಯಲ್ಲಿ ನಗರದಲ್ಲಿ ಇದುವರೆಗೆ 1132 ಕೇಸ್ ದಾಖಲಾಗಿದೆ. ಜನರ ಬಳಿ ಒಟ್ಟು ಇಪತ್ತೆರಡು ಕೋಟಿ ನಲವತ್ತು ಲಕ್ಷ ಹಣ ವಂಚನೆ ಮಾಡಲಾಗಿದೆ. ಇಲ್ಲಿ ವಂಚಕರು ಫೋನ್ ಮತ್ತೆ ಮೆಸೇಜ್ ಮೂಲಕ ತಮಗೆ ಗಿಫ್ಟ್ ಬಂದಿದೆ ಎಂದು ಹೇಳಿ ಸಂಪರ್ಕ ಮಾಡಿ ಅದನ್ನು ನಂಬಿಸುತ್ತಾರೆ, ಬಳಿಕ ಡೆಲಿವರಿ ಚಾರ್ಜ್ ಎಂದು ಹಣವನ್ನು ಪಡೆಯಲು ಶುರುಮಾಡಿ ಈ ಪ್ರಕ್ರಿಯಲ್ಲಿ ಬ್ಯಾಂಕ್ ಮಾಹಿತಿ ಪಡೆದು ಲಿಂಕ್ ಕಳಿಸಿ ಅಕೌಂಟ್ ನಲ್ಲಿ ಇದ್ದ ಹಣವನ್ನು ದೋಚುತ್ತಾರೆ. ಮತ್ತು ಒ ಎಲ್ ಎಕ್ಸ್ ನಲ್ಲಿ ನಕಲಿ ಜಾಹಿರಾತು ನೀಡಿ ಕಡಿಮೆ ಬೆಲೆಗೆ ಮಾರಟ ಮಾಡುವ ಆಸೆ ಹುಟ್ಟಿಸಿ ಅರ್ಮಿ ಹೆಸರು ಹೇಳಿ ನಂಬಿಸಿದ ನಂತ್ರ ಹಣ ಪಡೆದು ಮಾಲು ನೀಡದೆ ವಂಚನೆ ಮಾಡ್ತಾರೆ.
  5. ಸೋಶಿಯಲ್ ಮೀಡಿಯಾ ಕೇಸ್ : ಸೋಶಿಯಲ್ ಮೀಡಿಯದಲ್ಲಿ ನೀವು ನೋಡಿರ್ತಿರಾ ನನ್ನ ಫೇಕ್ ಅಕೌಂಟ್ ಒಂದು ಬಂದಿದೆ ಯಾರು ಹಣ ನೀಡಬೇಡಿ ಎಂದು. ಇಲ್ಲಿ ಆಗುವುದು ಅದೇ ರೀತಿ ಒರ್ವ ವ್ಯಕ್ತಿಯ ಖಾರೆ ತೆರೆದು ಕಷ್ಟ ಇದೆ ಸಾಲ ಬೇಕು ಎಂದು ನಂಬಿಸಿ ಅವರ ಗೆಳೆಯರಿಂದ ಹಣ ವಸೂಲಿ ಮಾಡ್ತಾರೆ. ಈ ರೀತಿ ನಗರದಲ್ಲಿ 511 ಕೇಸ್ ದಾಖಲಾಗಿದೆ. ಅದ್ರಲ್ಲಿ ಮೂರು ಕೋಟಿ ಹನ್ನೆರಡು ಲಕ್ಷ ಹಣ ವಂಚನೆ ಆಗಿದೆ. ಬಹುತೇಕ ಪೈಕಿ ಈ ರೀತಿ ಆಗಿರುವವರು ದೂರನ್ನೆ ದಾಖಲು ಮಾಡುವುದಿಲ್ಲಾ.
  6. ಲೋನ್ ಆಪ್ : ತಕ್ಷಣಕ್ಕೆ ಲೋನ್ ಸಿಗತ್ತೆ ಅನ್ನೊ ಆಸೆಗೆ ಲೋನ್ ಆಪ್ ಗಳನ್ನು ಜನರು ಬಳಸುತ್ತಾರೆ, ನಂತ್ರ ಕೊಟ್ಟ ಸಾಲಕ್ಕಿಂತ ಹೆಚ್ಚು ಹಣ ಮತ್ತು ಬಡ್ಡಿ ವಸೂಲಿ ಮಾಡ್ತಾರೆ. ಹಣ ಬರದೆ ಇರುವಾಗ ಕುಟುಂಬಕ್ಕೆ ಹಾಗೂ ಗೆಳೆಯರಿಗೆ ನಿಮ್ಮ ಫೋಟೊ ಮಾರ್ಫ್ ಮಾಡಿ ಕಳಿಸಿ ಬೆದರಿಸಿ ಹಣ ವಸೂಲಿ ಮಾಡ್ತಾರೆ. ಈ ರೀತಿ ನಗರದಲ್ಲಿ 277 ಕೇಸ್ ದಾಖಲಾಗಿದ್ದು ಮೂರು ಕೋಟಿ ನಲವತ್ತು ಲಕ್ಷಕ್ಕೂ ಹೆಚ್ಚು ಹಣವನ್ನು ವಂಚನೆ ಮಾಡಲಾಗಿದೆ.
  7. ಬಿಟ್ ಕಾಯಿನ್ ಮತ್ತು ಕ್ರಿಪ್ಟೋ ಕರೆನ್ಸಿ ಕೇಸ್: ಈಗ ಹಣವನ್ನು ಬಿಟ್ ಕಾಯಿನ್ ಮತ್ತು ಕ್ರಿಪ್ಟೋ ರೀತಿಯಲ್ಲಿ ಹೂಡಿಕೆ ಮಾಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಜಾಹಿರಾತು ನೀಡಿ ನಂತ್ರ ಹಂತ ಹಂತವಾಗಿ ಲಾಭ ನೀಡ್ತಿವಿ ಎಂದು ಹೇಳಿ ಪ್ರಾಥಮಿಕ ಹಂತದಲ್ಲಿ ಲಾಭ ನೀಡಿ ನಂತ್ರ ಹೆಚ್ಚು ಹಣ ಹೂಡಿಕೆ ಮಾಡಿಸಿ ವಂಚನೆ ಮಾಡ್ತಾರೆ. ಈ ರೀತಿ ಒಟ್ಟು 195 ಕೇಸ್ ದಾಖಲಾಗಿದ್ದು ಜನರಿಂದ ಇಪತ್ತು ಕೋಟಿ ಇಪತ್ತನಾಲ್ಕು ಲಕ್ಷ ಹಣ ವಂಚನೆ ಮಾಡಲಾಗಿದೆ.
  8. ಕಾರ್ಡ್ ಸ್ಕಿಮ್ಮಿಂಗ್ : ಇದು ಟೆಕ್ನಾಲಜಿ ಬಳಸಿ ಫಿಸಿಕಲ್ ಕೆಲಸವನ್ನು ಮಾಡಿ ನಡೆಸುವ ವಂಚನೆ. ಎಟಿಎಂ ಮಿಷನ್ ಗಳಲ್ಲಿ ಕಾರ್ಡ್ ಸಿಕ್ಕಿಮರ್ ಗಳನ್ನು ಹಾಕಿ ಕ್ಯಾಮರ ಹಾಕಿರುತ್ತಾರೆ. ಅಲ್ಲಿ ಕಾರ್ಡ್ ಡೇಟಾ ಮತ್ತು ಪಾಸ್ ವರ್ಡ್ ಪಡೆದು ಹೊಸಾ ಕಾರ್ಡ್ ಸೃಷ್ಟಿ ಮಾಡಿಕೊಂಡು ಪಾಸ್ ವರ್ಡ್ ಬಳಸಿ ಹಣ ದೋಚುತ್ತಾರೆ. ಈ ರೀತಿ ಒಟ್ಟು 158 ಕೇಸ್ ದಾಖಲಾಗಿ ಜನರ ಒಂದು ಮುಕ್ಕಾಲು ಕೋಟಿ ಹಣ ವಂಚನೆ ಮಾಡಿದ್ದಾರೆ.
  9. ಡೇಟಾ ತೆಫ್ಟ್: ಸಾಮಾನ್ಯವಾಗಿ ಕಾರ್ಪೋರೇಟ್ ಕಂಪನಿಗಳಲ್ಲಿ ನಡೆಯುವ ಡೇಟಾ ಕಳ್ಳತನ ಇದು. ಇಲ್ಲಿ ಕಂಪನಿಗೆ ಸಂಬಂಧ ಪಟ್ಟ ಡೇಟಾ ವನ್ನು ಹ್ಯಾಕ್ ಮಾಡಿ ಅಥವ ಕಂಪನಿಯೊಳಗೆ ಇದ್ದವ ಓರ್ವರ ಸಹಕಾರದಿಂದ ಕಳ್ಳತನ ಮಾಡಿ. ನಂತ್ರ ಹಣಕ್ಕೆ ಬೇಡಿಕೆ ಇಟ್ಟು ಪಡೆಯುವುದು. ಈ ರೀತಿ ವಂಚನೆ ಮಾಡಿರುವ ಬಗ್ಗೆ 83 ಕೇಸ್ ದಾಕಲಾಗಿದ್ದು ಒಟ್ಟು ಹದಿನೆಂಟು ಕೋಟಿ ಹನ್ನೆರಡು ಲಕ್ಷ ಹಣ ವಂಚನೆ ಮಾಡಲಾಗಿದೆ.

ಇಷ್ಟಲ್ಲದೆ , ಅಡ್ವಾನ್ಸ್ ಫೀ ಸ್ಲ್ಯಾಮ್, ಮ್ಯಾಟ್ರಿಮೋನಿ ಫ್ರಾಡ್, ಸೆಕ್ಸಾಟ್ರಷನ್ ,ಇ ಮೇಲ್ ಸ್ಪೀಫಿಂಗ್ , ಲಾಟರಿ ಫ್ರಾಡ್, ಇಂಪೋರ್ಟ ಅಂಡ್ ಎಕ್ಸಪೋರ್ಟ್ ಫ್ರಾಡ್, ಅನ್ಲೈನ್ ಗೇಮಿಂಗ್ ಫ್ರಾಡ್ ಮತ್ತು ಸಿಮ್ ಕ್ಲೋನಿಂಗ್ ಎಂಬ ಹದಿನೆಂಟು ಮಾದರಿಯಲ್ಲಿ ವಂಚನೆ ಮಾಡ್ತಾರೆ. ಸಾರ್ವಜನಿಕರ ಅನವಶ್ಯಕ ವಿಚಾರಗಳಿಗೆ ಇಂಟರ್ನೆಟ್ ನಲ್ಲಿ ಕ್ಲಿಕ್ ಮಾಡದೇ ಹೋದ್ರೆ ಹಾಗು ಬೇರೆ ಯಾರೋ ಕರೆ ಮಾಡಿ ಪರ್ಸನಲ್ ಡೇಟಾ ಕೇಳಿದಾಗ ನೀಡದೆ ಹೋದ್ರೆ ಒಳ್ಳೆಯದು ಇಲ್ಲವಾದ್ರೆ ದುಡಿದ ಹಣ ಸೈಬರ್ ಚೋರರ ಪಾಲಾಗುತ್ತೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ