
ಬೆಂಗಳೂರು, ಫೆ.11: ಬೆಂಗಳೂರಿನಲ್ಲಿ ತೆರೆದ ಚರಂಡಿ, ಗುಂಡಿ ರಸ್ತೆಗಳು, ಹೀಗೆ ಅನೇಕ ಮೂಲಸೌಕರ್ಯದ ಸಮಸ್ಯೆಗಳು ಇರಬೇಕಾದರೆ ಇಲ್ಲಿ ವಾಸಿಸುವುದು ಹೇಗೆ? ಇದೀಗ ಇಂತಹ ಪ್ರದೇಶಗಳಲ್ಲಿ ಮನೆಗಳಿಗೆ ಹೆಚ್ಚಿನ ಬಾಡಿಗೆ ಹೇಗೆ ನೀಡುವುದು ಎಂಬ ಪ್ರಶ್ನೆ ಎದ್ದಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಭಾರೀ ಚರ್ಚೆಗೆ ಕಾರಣವಾಗಿದೆ. ಕೋರಮಂಗಲದಲ್ಲಿ 2BHK ಮನೆಗೆ 70,000 ರೂ, ಬಾಡಿಗೆ ಇದೆ. ಆದರೆ ಇಲ್ಲಿನ ರಸ್ತೆ, ಚರಂಡಿಯನ್ನು ನೋಡಿದ್ರೆ ಇಷ್ಟೊಂದು ಬಾಡಿಗೆ ನೀಡುವುದರಲ್ಲಿ ಅರ್ಥವೇ ಇಲ್ಲ ಎಂದು ಲುಬ್ನಾ ಮಲ್ಹೋತ್ರಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಕೋರಮಂಗಲವು ತೆರೆದ ಒಳಚರಂಡಿ, ರಸ್ತೆಯ ಗುಂಡಿಗಳು ಮತ್ತು ಕೆಟ್ಟ ಸಂಚಾರ ವ್ಯವಸ್ಥೆ ಸೇರಿದಂತೆ ಹಲವಾರು ಸಮಸ್ಯೆಗಳಿಂದ ಕೂಡಿದೆ. ಇದರ ಹೊರತಾಗಿಯೂ, ಈ ಪ್ರದೇಶದಲ್ಲಿನ ಫ್ಲಾಟ್‌ಗಳ ಬಾಡಿಗೆ 2 ಮಲಗುವ ಕೋಣೆ-ಹಾಲ್-ಅಡುಗೆ ಮನೆಗೆ 70,000 ರೂ. ವರೆಗೆ ಬಾಡಿಗೆ ಇದೆ. 2 ಬಿಎಚ್‌ಕೆಗೆ 70 ಸಾವಿರ? ಕೋರಮಂಗಲದಲ್ಲಿ ಇಷ್ಟೊಂದು ಬಾಡಿಗೆ ಕೇಳಲು ನಾಚಿಕೆ ಆಗಬೇಕು. ಇಲ್ಲಿನ ಟ್ರಾಫಿಕ್, ತೆರೆದ ಒಳಚರಂಡಿ ಮತ್ತು ಹಾಳಾದ ರಸ್ತೆಗಳಿವೆ. ಯಾವ ಕಾರಣಕ್ಕೆ ಇಷ್ಟು ಹಣವನ್ನು ಪಾವತಿಸುತ್ತಿದ್ದೇವೆ? ಎಂದು ಮಲ್ಹೋತ್ರಾ ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.
70k for a 2bhk?
Koramangala have some shame – there’s traffic, open sewage, and broken roads. What are we paying the premium for?
— Lubna Malhotra (@lubnamalhotra) February 10, 2026
ಕೋರಮಂಗಲವು ಬೆಂಗಳೂರಿನ ಪ್ರಸಿದ್ಧ ಪ್ರದೇಶವಾಗಿದೆ. ಕೆಫೆಗಳು, ಪಬ್‌ಗಳು, ಸ್ಟಾರ್ಟ್-ಅಪ್‌ಗಳು, ಶಾಪಿಂಗ್ ಮಾಲ್ಗಳು, HSR ಲೇಔಟ್ ಮತ್ತು ಎಲೆಕ್ಟ್ರಾನಿಕ್ ಸಿಟಿಯಂತಹ ಪ್ರಮುಖ ತಂತ್ರಜ್ಞಾನ ಕೇಂದ್ರಗಳಿಗೆ ಹತ್ತಿರದಲ್ಲಿದೆ. ಬೆಂಗಳೂರು ಇತರ ದೊಡ್ಡ ಸಿಟಿಗಳು ಮತ್ತು ಎಲೆಕ್ಟ್ರಾನಿಕ್ ಸಿಟಿಗಳ ನಡುವೆಯೂ ಇದು ಒಂದು ದೊಡ್ಡ ನಗರವಾಗಿ ಹೊರಹೊಮ್ಮಿದೆ. 1990 ರ ದಶಕದ ಉತ್ತರಾರ್ಧದಲ್ಲಿ ಬೆಂಗಳೂರಿನ ತಂತ್ರಜ್ಞಾನ ಉತ್ಕರ್ಷದ ಸಮಯದಲ್ಲಿ ದೇಶಾದ್ಯಂತದ ವಲಸಿಗರು ಇಲ್ಲಿಗೆ ಆಕರ್ಷಿತರಾಗಿದ್ದರು. ಈ ಪೋಸ್ಟ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆಗಳು ಬಂದಿದೆ. ನೆಟ್ಟಿಗರಲ್ಲಿ ಕೆಲವರು ಲುಬ್ನಾ ಮಲ್ಹೋತ್ರಾ ಪರ ಮಾಡತನಾಡಿದ್ರೆ, ಇನ್ನು ಕೆಲವರು ಬೆಂಗಳೂರಿನಲ್ಲಿ ವಲಸಿಗರೇ ಹೆಚ್ಚಾಗಿದ್ದರೆ, ಹಾಗಾಗಿ ಬಾಡಿಗೆ ಹೆಚ್ಚಳಕ್ಕೆ ಕಾರಣ ಎಂದು ದೂಷಿಸಿದ್ದಾರೆ.
ಇದನ್ನೂ ಓದಿ: ‘Bengaluru is so crazy’ ಬ್ರೋ: ಇವರು ರಾಪಿಡೋ ಚಾಲಕ ಮಾತ್ರವಲ್ಲ, ಲಕ್ಷ ಲಕ್ಷ ದುಡಿಯುವ ಐಟಿ ಕಂಪನಿಯ ಉದ್ಯೋಗಿ
ಇಲ್ಲಿ ಲೂಟಿ ಮಾಡುವ ದಂಧೆ ಶುರುವಾಗಿದೆ. ಹೆಚ್ಚಿನ ಬಾಡಿಗೆ ತೆಗೆದುಕೊಂಡು ಶೋಷಿಸುತ್ತಿದ್ದಾರೆ ಎಂದು ಒಬ್ಬರು ಹೇಳಿದ್ದಾರೆ. ಭಾರತದಲ್ಲಿ ಈ ಬೆಲೆಗೆ ಯಾವುದೇ ಸಮರ್ಥನೆ ಇಲ್ಲ. ಇದಕ್ಕೆ ಈಗಲೇ ಮಿತಿ ಹೇರಬೇಕು, ಇಲ್ಲದಿದ್ದರೆ, ಇದು ನಡೆಯುತ್ತಲೇ ಇರುತ್ತದೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಉತ್ತರ ಭಾರತದಿಂದ ಬರುವ ಜನರಿಗೆ ಬೆಂಗಳೂರು ಇಂದಿರಾನಗರ ಮತ್ತು ಕೋರಮಂಗಲಕ್ಕೆ ಸೀಮಿತವಾಗಿದೆಯೇ? ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೊಬ್ಬರು ಈ ಬಾಡಿಗೆ ಉತ್ತಮ ಎಂದು ಹೇಳಿದ್ದಾರೆ. ವೈಟ್‌ಫೀಲ್ಡ್ ಪ್ರದೇಶದಲ್ಲಿ 2 BHK ಫ್ಲಾಟ್‌ಗೆ 75 ಸಾವಿರ ರೂ ಇರುತ್ತದೆ ಎಂದು ಹೇಳಿದ್ದಾರೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ