ನವೆಂಬರ್ 29ರಿಂದ ಡಿಸೆಂಬರ್ 1ರವರೆಗೆ ಬೆಂಗಳೂರು ಟೆಕ್​ ಸಮ್ಮಿಟ್ ಆಯೋಜನೆ

| Updated By: ವಿವೇಕ ಬಿರಾದಾರ

Updated on: Nov 25, 2023 | 2:06 PM

ನವೆಂಬರ್ 29ರಿಂದ ಡಿಸೆಂಬರ್ 1ರವರೆಗೆ ಬೆಂಗಳೂರು ಟೆಕ್​ ಸಮ್ಮಿಟ್ ನಡೆಯಲಿದೆ. ಸಮ್ಮಿಟ್​ನಲ್ಲಿ 30 ದೇಶಗಳ 350ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ. ಏಷ್ಯಾದ ಅತಿದೊಡ್ಡ ಟೆಕ್ ಸಮ್ಮಿಟ್ ಇದಾಗಿದೆ ಎಂದರು. ಕಳೆದ 25 ಸಮ್ಮಿಟ್​​ಗಳಲ್ಲಿ ತೆಗೆದುಕೊಂಡ ನಿರ್ಣಯ ಸಕ್ಸಸ್ ಆಗಿದೆ ಎಂದು ​ಐಟಿ-ಬಿಟಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ನವೆಂಬರ್ 29ರಿಂದ ಡಿಸೆಂಬರ್ 1ರವರೆಗೆ ಬೆಂಗಳೂರು ಟೆಕ್​ ಸಮ್ಮಿಟ್ ಆಯೋಜನೆ
ಸಚಿವ ಪ್ರಿಯಾಂಕ್​ ಖರ್ಗೆ
Follow us on

ಬೆಂಗಳೂರು ನ.25: ನವೆಂಬರ್ 29ರಿಂದ ಡಿಸೆಂಬರ್ 1ರವರೆಗೆ ಬೆಂಗಳೂರು ಟೆಕ್​ ಸಮ್ಮಿಟ್ (Bengaluru Tech Summit) ನಡೆಯಲಿದೆ ಎಂದು ​ಐಟಿ-ಬಿಟಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಹೇಳಿದರು. ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಬೆಂಗಳೂರಿನ ಅರಮನೆ ಮೈದಾನದಲ್ಲಿ ಟೆಕ್​ ಸಮ್ಮಿಟ್​ ನಡೆಯಲಿದೆ. ‘ಬ್ರೇಕಿಂಗ್ ಬೌಂಡರಿ’ ಘೋಷ ವಾಕ್ಯದೊಂದಿಗೆ ಸಮ್ಮಿಟ್ ನಡೆಯುತ್ತೆ. ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು 26ನೇ ಟೆಕ್ ಸಮ್ಮಿಟ್ ಉದ್ಘಾಟಿಸಲಿದ್ದಾರೆ.

ಸಮ್ಮಿಟ್​ನಲ್ಲಿ 30 ದೇಶಗಳ 350ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ. ಏಷ್ಯಾದ ಅತಿದೊಡ್ಡ ಟೆಕ್ ಸಮ್ಮಿಟ್ ಇದಾಗಿದೆ ಎಂದರು. ಕಳೆದ 25 ಸಮ್ಮಿಟ್​​ಗಳಲ್ಲಿ ತೆಗೆದುಕೊಂಡ ನಿರ್ಣಯ ಸಕ್ಸಸ್ ಆಗಿದೆ. ಚಂದ್ರಯಾನ-3 ಪಯಣದ ಕುರಿತು ವಿಶೇಷ ಪ್ರದರ್ಶನ ಇರಲಿದೆ. ಚಂದ್ರಯಾನದಲ್ಲಿ ಭಾಗಿಯಾದ ಸಣ್ಣ ಸಣ್ಣ ಕಂಪನಿಗಳಿಗೆ ಸಹ ಸಮ್ಮಿಟ್​ನಲ್ಲಿ ಪ್ರದರ್ಶನಕ್ಕೆ ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದರು.

ಐಟಿ ಮತ್ತು DeepTech, Metaverse ಮತ್ತು WEB 3.0, ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್‌ಗಳು, ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್, ಟೆಲಿಕಾಂ ಮತ್ತು 6G ನಂತಹ ತಂತ್ರಜ್ಞಾನ-ಸಂಬಂಧಿತ ಕ್ಷೇತ್ರಗಳಲ್ಲಿ ಭಾರತದ ಕ್ಷಿಪ್ರ ಪ್ರಗತಿಯನ್ನು ಪ್ರದರ್ಶಿಸುವ ಇದು ವೇದಿಕೆಯಾಗಲಿದೆ.

ಈ ಟೆಕ್​ ಸಮ್ಮಿಟ್​ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಹೆಚ್ಚುತ್ತಿರುವ ಪ್ರಭಾವಕ್ಕೆ ಸಾಕ್ಷಿಯಾಗಲಿದೆ. ಈ ಟೆಕ್​ ಸಮ್ಮಿಟ್​ನಲ್ಲಿ ಇಸ್ರೋದ ಗಮನಾರ್ಹ ಸಾಧನೆಗಳು ಮತ್ತು ಬಾಹ್ಯಾಕಾಶ ಪರಿಶೋಧನೆಗೆ ನೀಡಿದ ಕೊಡುಗೆಗಳ ಪ್ರದರ್ಶನವಾಗಲಿದೆ. ಟೆಕ್​ ಸಮ್ಮಿಟ್​​ ಬಾಹ್ಯಾಕಾಶ ಉದ್ಯಮದಲ್ಲಿ ಖಾಸಗಿ ಹೂಡಿಕೆದಾರರನ್ನು ಆಕರ್ಷಿಸುವ ಸರ್ಕಾರದ ಮುಂದುವರೆದ ಭಾಗವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ