Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುಜರಾತ್​ನಲ್ಲಿ ಹೂಡಿಕೆ ಮಾಡಲು ಮುಂದಾದ ವಿದೇಶಿ ಹೂಡಿಕೆದಾರರಿಗೆ ಆಗ ಕೇಂದ್ರ ಸಚಿವರು ಬೆದರಿಕೆ ಹಾಕ್ತಿದ್ರು :ಮೋದಿ

Vibrant Gujarat Summit: ಗುಜರಾತ್​ನಲ್ಲಿ ಹೂಡಿಕೆ ಮಾಡಲು ಮುಂದಾಗುವ ಪ್ರತಿಯೊಬ್ಬ ವಿದೇಶಿ ಹೂಡಿಕೆದಾರರಿಗೆ ಆಗಿನ ಕೇಂದ್ರ ಸಚಿವರು ಬೆದರಿಕೆ ಹಾಕುತ್ತಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ. ಮೋದಿ ಗುಜರಾತ್ ಪ್ರವಾಸದಲ್ಲಿದ್ದಾರೆ. ಇಂದು ಬುಧವಾರ (ಸೆಪ್ಟೆಂಬರ್ 27) ಅಹಮದಾಬಾದ್‌ನಲ್ಲಿ ನಡೆದ ವೈಬ್ರೆಂಟ್ ಗುಜರಾತ್ ಗ್ಲೋಬಲ್ ಶೃಂಗಸಭೆಯ 20 ವರ್ಷಗಳ ನೆನಪಿಗಾಗಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಅವರು, 20 ವರ್ಷಗಳ ಹಿಂದೆ ಬಿತ್ತಿದ ಬೀಜ ಈಗ ದೊಡ್ಡ ಮರವಾಗಿ ಬೆಳೆದಿದೆ ಎಂದರು.

ಗುಜರಾತ್​ನಲ್ಲಿ ಹೂಡಿಕೆ ಮಾಡಲು ಮುಂದಾದ ವಿದೇಶಿ ಹೂಡಿಕೆದಾರರಿಗೆ ಆಗ ಕೇಂದ್ರ ಸಚಿವರು ಬೆದರಿಕೆ ಹಾಕ್ತಿದ್ರು :ಮೋದಿ
ನರೇಂದ್ರ ಮೋದಿ
Follow us
ನಯನಾ ರಾಜೀವ್
|

Updated on: Sep 27, 2023 | 1:10 PM

ಗುಜರಾತ್​ನಲ್ಲಿ ಹೂಡಿಕೆ ಮಾಡಲು ಮುಂದಾಗುವ ಪ್ರತಿಯೊಬ್ಬ ವಿದೇಶಿ ಹೂಡಿಕೆದಾರರಿಗೆ ಆಗಿನ ಕೇಂದ್ರ ಸಚಿವರು ಬೆದರಿಕೆ ಹಾಕುತ್ತಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ. ಮೋದಿ ಗುಜರಾತ್ ಪ್ರವಾಸದಲ್ಲಿದ್ದಾರೆ. ಇಂದು ಬುಧವಾರ (ಸೆಪ್ಟೆಂಬರ್ 27) ಅಹಮದಾಬಾದ್‌ನಲ್ಲಿ ನಡೆದ ವೈಬ್ರೆಂಟ್ ಗುಜರಾತ್ ಗ್ಲೋಬಲ್ ಶೃಂಗಸಭೆಯ 20 ವರ್ಷಗಳ ನೆನಪಿಗಾಗಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಅವರು, 20 ವರ್ಷಗಳ ಹಿಂದೆ ಬಿತ್ತಿದ ಬೀಜ ಈಗ ದೊಡ್ಡ ಮರವಾಗಿ ಬೆಳೆದಿದೆ ಎಂದರು.

ಈ ಹಿಂದೆ ಕೇಂದ್ರದಲ್ಲಿ ಅಧಿಕಾರದಲ್ಲಿದ್ದವರು ಗುಜರಾತ್ ಅಭಿವೃದ್ಧಿಯನ್ನು ರಾಜಕೀಯದೊಂದಿಗೆ ಜೋಡಿಸುತ್ತಿದ್ದರು. ಆಗಿನ ಸರ್ಕಾರದ ಸಚಿವರು ವೈಬ್ರೆಂಟ್ ಗುಜರಾತ್​ಗೆ ಬರಲು ನಿರಾಕರಿಸುತ್ತಿದ್ದರು. ವಿದೇಶಿ ಹೂಡಿಕೆದಾರರಿಗೆ ಬೆದರಿಕೆ ಹಾಕಿ ಅವರನ್ನು ತಡೆಯುವ ಪ್ರಯತ್ನ ಮಾಡುತ್ತಿದ್ದರು ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

20 ವರ್ಷಗಳ ಹಿಂದೆ ನಾವು ಸಣ್ಣ ಬೀಜ ಬಿತ್ತಿದ್ದೆವು, ಇಂದು ಅದು ಬೃಹತ್ ಮರವಾಗಿ ಬೆಳೆದಿದೆ. ಇಂದು ವೈಬ್ರಂಟ್ ಗುಜರಾತ್ 20 ವರ್ಷಗಳನ್ನು ಪೂರೈಸುತ್ತಿರುವಾಗ ವೈಬ್ರೆಂಟ್ ಗುಜರಾತ್ ಕೇವಲ ಬ್ರ್ಯಾಂಡಿಂಗ್ ಅಲ್ಲ, ನಮ್ಮ ಪಾಲಿಗೆ ಇದು ಬಲವಾದ ಬಾಂಧವ್ಯದ ಸಂಕೇತವಾಗಿದೆ ಎಂದರು. ಇದು 7 ಕೋಟಿ ನಾಗರಿಕರಿಗೆ ಸಂಪರ್ಕ ಹೊಂದಿದೆ. ಸಂಭವಿಸಿದ ಭೂಕಂಪದಲ್ಲಿ ಸಾವಿರಾರು ಜನರು ಸತ್ತರು, ಕ್ಷಾಮದ ಜತೆಗೆ ಒಂದು ಬ್ಯಾಂಕ್ ಕೂಡ ಮುಳುಗಿತು ಗುಜರಾತ್​ನ ಪರಿಸ್ಥಿತಿ ಏನಾಗಬಹುದು ಎಂದು ಯಾರಿಂದಲೂ ಊಹಿಸಲು ಸಾಧ್ಯವಿರಲಿಲ್ಲ.

ಆಗ ನಾನು ಮೊದಲ ಬಾರಿಗೆ ಶಾಸಕನಾಗಿದ್ದೆ, ನನಗೆ ಎಲ್ಲವೂ ಹೊಸದು ಆದರೆ ಸವಾಲು ದೊಡ್ಡದಾಗಿತ್ತು, ಅಷ್ಟರಲ್ಲಿ ಗೋದ್ರಾ ಘಟನೆ ನಡೆದಿತ್ತು ಆದರೆ ನನಗೆ ಗುಜರಾತ್ ಮತ್ತು ಅಲ್ಲಿನ ಜನರ ಮೇಲೆ ಅಚಲವಾದ ನಂಬಿಕೆ ಇತ್ತು.

ಆದರೆ, ಅಜೆಂಡಾವನ್ನು ಹೊತ್ತವರು ಘಟನೆಯನ್ನು ವಿಶ್ಲೇಷಿಸುವುದರಲ್ಲಿ ನಿರತರಾಗಿದ್ದರು. ನಮ್ಮ ಬಿಕ್ಕಟ್ಟಿನಲ್ಲೂ ನಾನು ಗುಜರಾತ್ ಅನ್ನು ಅದರಿಂದ ಹೊರತರಲು ಪ್ರತಿಜ್ಞೆ ಮಾಡಿದ್ದೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಉದ್ಯಮ ಸಮೂಹಗಳು, ವ್ಯಾಪಾರ ಮತ್ತು ವಾಣಿಜ್ಯ ಕ್ಷೇತ್ರಗಳ ಪ್ರಮುಖರು, ಯುವ ಉದ್ಯಮಿಗಳು, ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಇತರರು ಆಗಮಿಸಿದ್ದಾರೆ. ಮೊದಲ ವೈಬ್ರೆಂಟ್ ಗುಜರಾತ್ ಜಾಗತಿಕ ಹೂಡಿಕೆದಾರರ ಶೃಂಗಸಭೆಯನ್ನು 2003 ರಲ್ಲಿ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆಸಲಾಯಿತು.

ಮತ್ತಷ್ಟು ಓದಿ: PM Modi US Tour: 10 ಬಿಲಿಯನ್​ ಡಾಲರ್​ ಹೂಡಿಕೆ, ಗುಜುರಾತ್​ನಲ್ಲಿ ಜಾಗತಿಕ​ ಫಿನ್​ಟೆಕ್​ ಕೇಂದ್ರ – ಸುಂದರ್​ ಪಿಚೈ

ಇಂದು ಪ್ರಧಾನಿ ನರೇಂದ್ರ ಮೋದಿಯವರ ಗುಜರಾತ್ ಪ್ರವಾಸದ ಎರಡನೇ ದಿನ. ಪ್ರಧಾನಿ ಮೋದಿ ಅವರು ಅಹಮದಾಬಾದ್‌ನ ಸೈನ್ಸ್ ಸಿಟಿಯಲ್ಲಿ ರೋಬೋಟಿಕ್ ಗ್ಯಾಲರಿ ಮತ್ತು ವಿವಿಧ ಯೋಜನೆಗಳನ್ನು ಪರಿಶೀಲಿಸಿದರು. ಬಳಿಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಇಂದು ವೈಬ್ರಂಟ್ ಗುಜರಾತ್​ನ ಯಶಸ್ಸನ್ನು ಜಗತ್ತು ನೋಡುತ್ತಿದೆ.

ವೈಬ್ರೆಂಟ್ ಶೃಂಗಸಭೆಯು ವಿಷಮ ಪರಿಸ್ಥಿತಿಯಲ್ಲಿ ಗುಜರಾತ್‌ನಲ್ಲಿ ಪ್ರಾರಂಭವಾಯಿತು. ಆಗ ಗುಜರಾತ್​ನಲ್ಲಿ ದೊಡ್ಡ ಹೋಟೆಲ್​ಗಳಿರಲಿಲ್ಲ, ಗುಜರಾತಿನಲ್ಲಿ ವೈಬ್ರಂಟ್ ಶೃಂಗಸಭೆ ಆರಂಭವಾದಾಗ ಕೇಂದ್ರ ಸರ್ಕಾರಕ್ಕೆ ಅದರ ಬಗ್ಗೆ ಆಸಕ್ತಿಯೇ ಇರಲಿಲ್ಲ. ಕಾಲಾನಂತರದಲ್ಲಿ ಪ್ರತಿಯೊಬ್ಬರೂ ವೈಬ್ರೆಂಟ್‌ನ ಮಹತ್ವವನ್ನು ಅರಿತುಕೊಂಡರು. 2003 ರಲ್ಲಿ ಕೇವಲ 100 ಜನರು ವೈಬ್ರಂಟ್ ಗುಜರಾತ್‌ಗೆ ಸೇರಿದರು. ಇಂದು 135 ದೇಶಗಳು ಸೇರಿಕೊಂಡಿವೆ.

ಗುಜರಾತ್ ಭಾರತದ ಕೈಗಾರಿಕಾ ಸಾಮರ್ಥ್ಯವನ್ನು ಪ್ರದರ್ಶಿಸುವ ಮಾಧ್ಯಮವಾಗಿದೆ. ವೈಬ್ರೆಂಟ್ ಗುಜರಾತ್‌ನ 20 ವರ್ಷಗಳ ಯಶಸ್ಸಿನ ಸಂಭ್ರಮವನ್ನು ಸೈನ್ಸ್ ಸಿಟಿಯಲ್ಲಿ ಆಚರಿಸಲಾಗುತ್ತಿದೆ. ಇದೇ ವೇಳೆ ‘ಸಮ್ಮಿಟ್ ಆಫ್ ಸಕ್ಸಸ್’ ಪೆವಿಲಿಯನ್ ಅನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

VIDEO: LSG ಫೀಲ್ಡರ್​ಗಳ ಕಮಾಲ್: ವಾಟ್ ಎ ಕ್ಯಾಚ್..!
VIDEO: LSG ಫೀಲ್ಡರ್​ಗಳ ಕಮಾಲ್: ವಾಟ್ ಎ ಕ್ಯಾಚ್..!
ಚಿಕ್ಕಬಳ್ಳಾಪುರದಲ್ಲಿ ಅಗ್ನಿ ಅವಘಡ: ಬಸ್​, ಬೈಕ್​ಗಳು ಬೆಂಕಿಗಾಹುತಿ
ಚಿಕ್ಕಬಳ್ಳಾಪುರದಲ್ಲಿ ಅಗ್ನಿ ಅವಘಡ: ಬಸ್​, ಬೈಕ್​ಗಳು ಬೆಂಕಿಗಾಹುತಿ
Daily Devotional: ಕಾಲಭೈರವೇಶ್ವರನಿಗೆ ನೈವೇದ್ಯೆ ಹೇಗೆ ಸಮರ್ಪಿಸಬೇಕು?
Daily Devotional: ಕಾಲಭೈರವೇಶ್ವರನಿಗೆ ನೈವೇದ್ಯೆ ಹೇಗೆ ಸಮರ್ಪಿಸಬೇಕು?
Daily Horoscope: ಈ ರಾಶಿಯವರು ಆರ್ಥಿಕವಾಗಿ ಸ್ವಲ್ಪ ಸಂಕಷ್ಟ ಎದುರಿಸಬಹುದು
Daily Horoscope: ಈ ರಾಶಿಯವರು ಆರ್ಥಿಕವಾಗಿ ಸ್ವಲ್ಪ ಸಂಕಷ್ಟ ಎದುರಿಸಬಹುದು
ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ