PM Modi US Tour: 10 ಬಿಲಿಯನ್ ಡಾಲರ್ ಹೂಡಿಕೆ, ಗುಜುರಾತ್ನಲ್ಲಿ ಜಾಗತಿಕ ಫಿನ್ಟೆಕ್ ಕೇಂದ್ರ – ಸುಂದರ್ ಪಿಚೈ
ಇಂಟರ್ನೆಟ್ ದೈತ್ಯ ಗೂಗಲ್ ಗುಜರಾತ್ನ ಗುಜರಾತ್ ಇಂಟರ್ನ್ಯಾಷನಲ್ ಫೈನಾನ್ಸ್ ಟೆಕ್-ಸಿಟಿ (ಗಿಫ್ಟ್) ನಗರದಲ್ಲಿ "ಜಾಗತಿಕ ಫಿನ್ಟೆಕ್" ಕೇಂದ್ರ ಸ್ಥಾಪಿಸಲು ನಿರ್ಧರಿಸಿದೆ.
ವಾಷಿಂಗ್ಟನ್: ಇಂಟರ್ನೆಟ್ ದೈತ್ಯ ಗೂಗಲ್ (Google) ಗುಜರಾತ್ನ (Gujurat) ಗುಜರಾತ್ ಇಂಟರ್ನ್ಯಾಷನಲ್ ಫೈನಾನ್ಸ್ ಟೆಕ್-ಸಿಟಿ (ಗಿಫ್ಟ್) ನಗರದಲ್ಲಿ “ಜಾಗತಿಕ ಫಿನ್ಟೆಕ್” (Global Fintech) ಕೇಂದ್ರ ಸ್ಥಾಪಿಸಲು ನಿರ್ಧರಿಸಿದೆ. ಅಲ್ಲದೇ 10 ಬಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ಗೂಗಲ್ನ ಸಿಇಒ ಸುಂದರ್ ಪಿಚೈ (Sundar Pichai) ಹೇಳಿದ್ದಾರೆ. ಶುಕ್ರವಾರ (ಜೂ.23) ರಂದು ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಅಮೆರಿಕಾದ ಶ್ವೇತಭವನದಲ್ಲಿ (White House) ಭಾರತ ಹಾಗೂ ಅಮೆರಿಕಾದ ಸಿಇಒಗಳ ಜೊತೆ ಸಂವಾದ ನಡೆಸಿದರು.
ಸಭೆ ಬಳಿಕ ಮಾತನಾಡಿದ ಸುಂದರ್ ಪಿಚೈ ಈ ಬಗ್ಗೆ ನಾವು ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಮಾತನಾಡಿದ್ದೇವೆ. ಅದರ ಮುಂದುವರೆದ ಭಾಗವೇ ಈ ಮಾತುಕತೆ. ಭಾರತದಲ್ಲಿ ಗೂಗಲ್ 10 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ನಿರ್ಧರಿಸಿದೆ. ಗುಜರಾತ್ನಲ್ಲಿ ಜಾಗತಿಕ ಫಿನ್ಟೆಕ್ ಕೇಂದ್ರವನ್ನು ಆರಂಭಿಸುತ್ತೇವೆ ಎಂದರು.
ಇದನ್ನೂ ಓದಿ: ಭಾರತೀಯ ಪ್ರತಿಭೆ ಮತ್ತು ಅಮೆರಿಕದ ತಂತ್ರಜ್ಞಾನ ಸಂಯೋಜನೆಯಿಂದ ಜಗತ್ತಿನ ಭವಿಷ್ಯ ಉಜ್ವಲ
AI (America-India) ಅಡಿ ಕಾರ್ಯನಿರ್ವಹಿಸಲು ಹಲವು ಕಂಪನಿಗಳು ಕಾರ್ಯನಿರ್ವಹಿಸಲಿವೆ. ಅಲ್ಲದೇ ಅತಿಶೀಘ್ರದಲ್ಲಿ ಗೂಗಲ್ನಲ್ಲಿ ಭಾರತದ ಇನ್ನು ಅನೇಕ ಭಾಷೆಗಳನ್ನು ಸೇರಿಸುತ್ತೇವೆ. ಭಾರತವೂ ಡಿಜಿಟಲ್ ಉದ್ಯಮದಲ್ಲಿ ದೊಡ್ಡ ಹೆಜ್ಜೆ ಇಡುತ್ತಿದೆ. ಡಿಜಿಟಲ್ ಇಂಡಿಯಾ ವಿಚಾರದಲ್ಲಿ ಪ್ರಧಾನಿ ಮೋದಿಯವರ ದೂರದೃಷ್ಟಿ ಇಷ್ಟವಾಯಿತು. ಭಾರತ ಬಹಳಷ್ಟು ವೇಗದಲ್ಲಿ ಆರ್ಥಿಕವಾಗಿ ಅಭಿವೃದ್ಧಿಯಾಗುತ್ತಿದೆ. ಭಾರತದ ಡಿಜಿಟಲ್ ಕ್ಷೇತ್ರ ಅನ್ಯ ದೇಶಗಳಿಗು ಮಾದರಿಯಾಗಿದೆ. ಡಿಜಿಟಲ್ ಕ್ಷೆತ್ರದ UPI ಮತ್ತು Adharಗೆ ಧನ್ಯವಾದಗಳು ಎಂದು ಹೇಳಿದರು.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ