AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PM Modi in US: ಭಾರತೀಯ ಪ್ರತಿಭೆ ಮತ್ತು ಅಮೆರಿಕದ ತಂತ್ರಜ್ಞಾನ ಸಂಯೋಜನೆಯಿಂದ ಜಗತ್ತಿನ ಭವಿಷ್ಯ ಉಜ್ವಲ: ಸಿಇಒಗಳೊಂದಿಗಿನ ಸಂವಾದದಲ್ಲಿ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿಯವರು ನಿನ್ನೆ ಜೂ.23 ಶ್ವೇತಭವನದಲ್ಲಿ ಅಮೆರಿಕಾ ಹಾಗೂ ಭಾರತದ ಸಿಇಒ ಹಾಗೂ ಹಲವು ಸಂಸ್ಥೆಗಳ ಅಧ್ಯಕ್ಷರುಗಳನ್ನು ಭೇಟಿ ಮಾಡಿ ಸಂವಾದ ನಡೆಸಿದರು.

PM Modi in US: ಭಾರತೀಯ ಪ್ರತಿಭೆ ಮತ್ತು ಅಮೆರಿಕದ ತಂತ್ರಜ್ಞಾನ ಸಂಯೋಜನೆಯಿಂದ ಜಗತ್ತಿನ ಭವಿಷ್ಯ ಉಜ್ವಲ: ಸಿಇಒಗಳೊಂದಿಗಿನ ಸಂವಾದದಲ್ಲಿ ಪ್ರಧಾನಿ ಮೋದಿ
ವೈಟ್​ಹೌಸ್​ನಲ್ಲಿ ಸಿಇಒಗಳ ಜತೆ ಪ್ರಧಾನಿ ಮೋದಿ ಸಂವಾದ
ವಿವೇಕ ಬಿರಾದಾರ
|

Updated on:Jun 24, 2023 | 7:17 AM

Share

ವಾಷಿಂಗ್ಟನ್​​: ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಭಾರತೀಯ ಕಾಲಮಾನ ಪ್ರಕಾರ ಕಳೆದ ರಾತ್ರಿ ನಿನ್ನೆ (ಜೂ.23) ಶ್ವೇತಭವನದಲ್ಲಿ (White house) ಅಮೆರಿಕಾ (America) ಹಾಗೂ ಭಾರತದ ಸಿಇಒ (CEO) ಹಾಗೂ ಹಲವು ಸಂಸ್ಥೆಗಳ ಅಧ್ಯಕ್ಷರುಗಳನ್ನು ಭೇಟಿ ಮಾಡಿ ಸಂವಾದ ನಡೆಸಿದರು. ಭಾರತೀಯ ಪ್ರತಿಭೆ ಮತ್ತು ಅಮೆರಿಕದ ತಂತ್ರಜ್ಞಾನ ಸಂಯೋಜನೆಯಿಂದ ಜಗತ್ತಿನ ಭವಿಷ್ಯ ಉಜ್ವಲವಿದೆ ಎಂದು ಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದರು.

ಈ ಬೆಳಗಿನ ಸಭೆ ಕೆಲವೇ ಸ್ನೇಹಿತರ ನಡುವೆ ಮಾತ್ರ ನಡೆಯುತ್ತಿದೆ. ಆದರೆ ಇದು ಉಜ್ವಲ ಭವಿಷ್ಯದ ಭರವಸೆಯನ್ನು ನೀಡಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಕ್ಕೆ ಬೈಡನ್​ ತೆಲೆದೂಗಿದರು. ಅಧ್ಯಕ್ಷ ಬಿಡೆನ್ ಅವರ ದೃಷ್ಟಿಕೋನ ಮತ್ತು ಸಾಮರ್ಥ್ಯಗಳು ಮತ್ತು ಭಾರತದ ಆಕಾಂಕ್ಷೆಗಳು ಮತ್ತು ಸಾಧ್ಯತೆಗಳನ್ನು ತೆಗೆದುಕೊಂಡು ಹೋಗಲು ಇದು ಉತ್ತಮ ಅವಕಾಶವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಈ ಕಾರ್ಯಕ್ರಮ “ಹೊನ್ಹಾರ್, ಶಾಂದಾರ್, ಧರ್ದಾರ್” (ಭರಸವೆ, ಭವ್ಯವಾದ, ತೀಕ್ಷ್ಣವಾದ) ಕಾರ್ಯಕ್ರಮವಾಗಿದೆ. ಇನ್ನು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಕ್ಕಾಗಿ ಅಮೆರಿಕಾ ಅಧ್ಯಕ್ಷರಿಗೆ ಪ್ರಧಾನಿ ಮೋದಿ ಧನ್ಯವಾದ ತಿಳಿಸಿದರು.

ಇದನ್ನೂ ಓದಿ: ರಾಷ್ಟ್ರಕ್ಕಾಗಿ ಮಾತನಾಡುವಾಗ ಎಲ್ಲರೂ ಒಂದಾಗಬೇಕು: ಅಮೆರಿಕದಲ್ಲಿ ರಾಹುಲ್ ಗಾಂಧಿಗೆ ಮೋದಿ ಟಾಂಗ್?

ಈ ವೇಳೆ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಮಾತನಾಡಿ ಭಾರತ-ಅಮೆರಿಕಾ ಪಾಲುದಾರಿಕೆಯು ಮುಂಬರುವ ಪೀಳಿಗೆಗೆ ಮುಕ್ತ, ಹೆಚ್ಚು ಸುರಕ್ಷಿತ ಮತ್ತು ಸಮೃದ್ಧ ಭವಿಷ್ಯವನ್ನು ಖಚಿತಪಡಿಸುತ್ತದೆ ಎಂದು ಹೇಳಿದರು.

“ನಮ್ಮ ಸಹಕಾರವು ನಮ್ಮ ಜನರಿಗೆ ಮಾತ್ರವಲ್ಲದೆ ಇಡೀ ಜಗತ್ತಿಗೆ ಮುಖ್ಯವಾಗಿದೆ. ಏಕೆಂದರೆ ನಮ್ಮ ಪಾಲುದಾರಿಕೆಯು ಮುಂದಿನ ಪ್ರಗತಿ ಅಥವಾ ಮುಂದಿನ ಒಪ್ಪಂದಕ್ಕಿಂತ ದೊಡ್ಡದಾಗಿದೆ” ಎಂದು ಅಧ್ಯಕ್ಷ ಬಿಡೆನ್ ಹೇಳಿದರು.

ಈ ಸಂವಾದ ಕಾರ್ಯಕ್ರಮದಲ್ಲಿ ಮೈಕ್ರೋಸಾಫ್ಟ್ ನ ಸಿಇಒ ಸತ್ಯ ನಾದೆಳ್ಲ, ಗೂಗಲ್ ಸಿಇಒ ಸುಂದರ್ ಪಿಚ್ಚೈ, ನಾಸಾ ಗಗನಯಾತ್ರಿ ಸುನಿತಾ ವಿಲಿಯಮ್ಸ್, ಮಹೀಂದ್ರ ಸಮೂಹದ ಅಧ್ಯಕ್ಷ ಆನಂದ್ ಮಹೀಂದ್ರ, ರಿಲಾಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಹಾಗೂ ಎಂಡಿ ಮುಖೇಶ್ ಅಂಬಾನಿ, ಜೆರೋದಾ ಹಾಗೂ ಟ್ರೂ ಬೀಕನ್ ಸಹ ಸಂಸ್ಥಾಪಕ ನಿಖಿಲ್ ಕಾಮತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಈ ವೇಳೆ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ AI (America-India) ಎ.ಬ ವಿಶೇಷ ಟಿ-ಶರ್ಟ್ ಅನ್ನು ಉಡುಗೊರೆಯಾಗಿ ನೀಡಿದರು.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ 

Published On - 7:09 am, Sat, 24 June 23