TV9 Kannada Karnataka Bengaluru Bangalore Traffic Police put fine of more than Rs 16 lakh in three days for violation traffic rules
ಬೆಂಗಳೂರು ಸಂಚಾರಿ ಪೊಲೀಸರ ಭರ್ಜರಿ ಕಾರ್ಯಾಚರಣೆ; ಮೂರು ದಿನಗಳಲ್ಲಿ 16 ಲಕ್ಷಕ್ಕೂ ಹೆಚ್ಚು ರೂ ದಂಡ
ಜನವರಿ 29 ರಿಂದ ಜ.31ರ ವರೆಗೆ ಮೂರು ದಿನಗಳ ಕಾಲ ಬೆಂಗಳೂರು ಸಂಚಾರಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು ಮೂರು ದಿನದಲ್ಲಿ ಒಟ್ಟು 16,91,300ರೂ ನಷ್ಟು ದಂಡ ವಿಧಿಸಿದ್ದಾರೆ. ನಿಯಮ ಉಲ್ಲಂಘಿಸಿದ ಆಟೋ, ಟ್ರ್ಯಾಕ್ಟರ್, ವಾಹನ ಸವಾರರಿಗೆ ದಂಡದ ಬಿಸಿ ಮುಟ್ಟಿಸಿದ್ದಾರೆ. ಜ.29ರಂದು ಒಟ್ಟು 2 ಸಾವಿರ ಪ್ರಕರಣಗಳು ದಾಖಲಾಗಿದ್ದು ಒಟ್ಟು 9,85,000 ದಂಡ ವಸೂಲಿ ಮಾಡಲಾಗಿದೆ.
ಬೆಂಗಳೂರು, ಫೆ.01: ನಗರದಾದ್ಯಂತ ಸಂಚಾರಿ ಪೊಲೀಸರು (Bengaluru Traffic Police) ಸಾಲು ಸಾಲು ಸ್ಪೆಷಲ್ ಡ್ರೈವ್ಗಳನ್ನು ಕೈಗೊಳ್ಳುತ್ತ ಲಕ್ಷಾಂತರ ರೂ ದಂಡ ವಸೂಲಿಗೆ ಇಳಿದಿದ್ದಾರೆ. ಜನವರಿ 26ರಂದು ಶಾಲಾ-ಕಾಲೇಜುಗಳ ಸುತ್ತಮುತ್ತ ನಿಯಮ ಉಲ್ಲಂಘಿಸಿದವರಿಗೆ ದಂಡದ (Fine) ಬಿಸಿ ಮುಟ್ಟಿಸಿದ್ದಾರೆ. ಹಾಗೂ ಜನವರಿ 30ರಂದು ನಿಯಮ ಉಲ್ಲಂಘಿಸಿದ ಟ್ರ್ಯಾಕ್ಟರ್ಗಳ ವಿರುದ್ಧ, ಜನವರಿ 31ರಂದು ನಿಯಮ ಉಲ್ಲಂಘಿಸಿದ ಆಟೋಗಳ ವಿರುದ್ಧ ಕಳೆದ ಮೂರು ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸಂಚಾರಿ ಪೊಲೀಸರು ಮೂರು ದಿನದಲ್ಲಿ ಒಟ್ಟು 16,91,300ರೂ ನಷ್ಟು ದಂಡ ವಿಧಿಸಿದ್ದಾರೆ.
ಕಳೆದ ಮೂರು ದಿನದಿಂದ ಸಂಚಾರಿ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದು ದಂಡ ವಿಧಿಸುತ್ತಿದ್ದಾರೆ. ಜ.29ರಂದು ಶಾಲಾ-ಕಾಲೇಜು ಸುತ್ತಮುತ್ತ ಸಂಚಾರಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು ನಗರದ ವಿವಿಧ ಕಡೆಗಳಿಂದ ಒಟ್ಟು 2 ಸಾವಿರ ಪ್ರಕರಣಗಳನ್ನು ದಾಖಲಿಸಿದ್ದಾರೆ. ನಿಯಮ ಉಲ್ಲಂಘಿಸಿದವರ ವಿರುದ್ದ ಒಟ್ಟು 9,85,000 ದಂಡ ವಸೂಲಿ ಮಾಡಲಾಗಿದೆ.
ಜ.29ರಂದು ವಸೂಲಿಯಾದ ದಂಡ
ಹೆಲ್ಮೆಟ್ ರಹಿತ ಸವಾರಿಯ 132 ಪ್ರಕರಣ ಸಂಬಂಧ 64,800 ರೂ ದಂಡ ವಸೂಲಿಯಾಗಿದೆ.
ಟ್ರಿಪೆಲ್ ರೈಡಿಂಗ್ ನ 375 ಪ್ರಕರಣ ಸಂಬಂಧ 1,84,100 ರೂ ದಂಡ.
ನೋ ಎಂಟ್ರಿ ಉಲ್ಲಂಘನೆಯ 27 ಪ್ರಕರಣ ಸಂಬಂಧ 13,500 ರೂ ದಂಡ.
ಫುಟ್ ಪಾತ್ ನಲ್ಲಿ ಸವಾರಿ ಸಂಬಂಧ 1,466 ಪ್ರಕರಣ ದಾಖಲಿಸಿ 7,22,600 ರೂ ದಂಡ ವಸೂಲಿ ಮಾಡಲಾಗಿದೆ.
ಜ.30ರಂದು ನೀರಿನ ಟ್ಯಾಂಕರ್ಗಳ ವಿರುದ್ಧ ಕಾರ್ಯಾಚರಣೆ ನಡೆಸಲಾಗಿದ್ದು ನಗರದಾದ್ಯಂತ ವಿವಿಧ ಕಡೆಗಳಲ್ಲಿ 595 ಪ್ರಕರಣ ದಾಖಲಿಸಲಾಗಿದೆ. ಸಂಚಾರಿ ಪೊಲೀಸರು ಬರೋಬ್ಬರಿ 3,33,500 ರೂ ದಂಡ ವಿಧಿಸಿದ್ದಾರೆ.
ಜ.30ರಂದು ಹಾಕಲಾದ ದಂಡ
ಸಮವಸ್ತ್ರ ಧರಿಸದೇ ಚಾಲನೆಯ 252 ಪ್ರಕರಣ ಸಂಬಂಧ 1,26,000ರೂ ದಂಡ
ಸೀಟ್ ಬೆಲ್ಟ್ ಹಾಕದೇ ಇರುವ 40 ಪ್ರಕರಣ ಸಂಬಂಧ 20,000 ರೂ ದಂಡ
ನೋ ಎಂಟ್ರಿಯ 134 ಪ್ರಕರಣ ಸಂಬಂಧ 67,000 ರೂ ದಂಡ
ದೋಷಪೂರಿತ ನಂಬರ್ ಪ್ಲೇಟ್ ಬಳಕೆ ಹಿನ್ನಲೆ 48 ಪ್ರಕರಣ ಸಂಬಂಧ 24 ಸಾವಿರ ರೂ ದಂಡ
ಲೇನ್ ಶಿಸ್ತು ಉಲ್ಲಂಘನೆಯ 6 ಪ್ರಕರಣ ಸಂಬಂಧ 3,000 ರೂ ದಂಡ.
ನೋ ಪಾರ್ಕಿಂಗ್ ನ 64 ಪ್ರಕರಣ ಸಂಬಂಧ 64,000 ರೂ ದಂಡ.
ಫುಟ್ ಪಾತ್ ಬಳಿ ಪಾರ್ಕಿಂಗ್ ನ 4 ಪ್ರಕರಣ ಸಂಬಂಧ 4,000 ರೂ ದಂಡ.
ಕರ್ಕಶ ಹಾರ್ನ್ ಹಿನ್ನಲೆ 13 ಪ್ರಕರಣ ಸಂಬಂಧ 6,500 ರೂ ದಂಡ.
ಮಧ್ಯಪಾನ ಮಾಡಿ ವಾಹನ ಚಲಾಯಿಸಿದ ಒಂದು ವಾಹನದ ಮೇಲೆ ಕ್ರಮಕೈಗೊಂಡಿದ್ದು, ನ್ಯಾಯಾಲಯದಲ್ಲಿ ದಂಡ ಪಾವತಿಸಬೇಕಾಗಿದೆ.
ಇತರೆ 33 ಕೇಸ್ ಗಳು ದಾಖಲಾಗಿದ್ದು, ಈ ಸಂಬಂಧ 19,000ರೂ ದಂಡ ವಿಧಿಸಲಾಗಿದೆ.
ಜ.31ರಂದು ಆಟೋ ಚಾಲಕರ ವಿರುದ್ಧ ಸಂಚಾರಿ ಪೊಲೀಸರು ಸ್ಪೆಷಲ್ ಡ್ರೈವ್ ಕೈಗೊಂಡಿದ್ದು ನಗರದ ವಿವಿಧೆಡೆ ಒಟ್ಟು 1,226 ಕೇಸ್ ದಾಖಲಿಸಿ 6,35,200 ರೂ ದಂಡ ವಿಧಿಸಿದ್ದಾರೆ.
ಜ.31ರಂದು ಹಾಕಲಾದ ದಂಡದ ವಿವರ
ಕರೆದಲ್ಲಿಗೆ ಹೋಗಲು ನಿರಾಕರೆಣೆ ಹಿನ್ನಲೆ 336 ಪ್ರಕರಣಗಳ ದಾಖಲಿಸಿ 1,68,000ರೂ ದಂಡ.
ನೋ ಎಂಟ್ರಿ ಹಾಗೂ ಒನ್ ವೇ ರೂಲ್ಸ್ ಉಲ್ಲಂಘನೆಯ 357 ಪ್ರಕರಣ ಸಂಬಂಧ 1,78,500 ರೂ ದಂಡ.
ಮಧ್ಯಪಾನ ಮಾಡಿ ಆಟೋ ಚಲಾಯಿಸಿದ ಹಿನ್ನಲೆ ಒಂದು ಆಟೋ ವಿರುದ್ಧ ಕ್ರಮಕೈಗೊಂಡು ಕೋರ್ಟ್ ನಲ್ಲಿ ದಂಡ ಪಾವತಿಗೆ ಸೂಚನೆ.
ಇತರೆ 234 ಪ್ರಕರಣ ಸಂಬಂಧ 1,39,200 ರೂ ದಂಡ ವಿಧಿಸಲಾಗಿದೆ.ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ಮಾಡಿ
Jagadisha B
ಜಗದೀಶ್ ಬಸವರಾಜು ಟಿವಿ9 ಕನ್ನಡದ ವರದಿಗಾರರಲ್ಲಿ ಒಬ್ಬರು. ಪ್ರಸ್ತುತ ಅವರು ತುಮಕುರು ಜಿಲ್ಲಾ ಸುದ್ದಿಗಳ ವರದಿ ಮಾಡುತ್ತಿದ್ದಾರೆ.