ಬೆಂಗಳೂರು: ವೈಟ್ ಟಾಪಿಂಗ್, ಬ್ಲಾಕ್ ಟಾಪಿಂಗ್, ಪಾರ್ಕ್, ಫ್ರೈ ಓವರ್ ಕಾಮಗಾರಿಯಲ್ಲಿ ಕೋಟಿ ಕೋಟಿ ಹಣ ಲೂಟಿ ಮಾಡಿದೆ. ಕಳಪೆ ರಸ್ತೆಗಳನ್ನು ನೀಡಿ ಹಣ ಕೊಳ್ಳೆ ಹೊಡೆಯುತ್ತಿದ್ದಾರೆ ಎಂದು ಬಿಬಿಎಂಪಿ ವಿರುದ್ಧ ಅನೇಕ ಆರೋಪಗಳು ಕೇಳಿ ಬಂದಿವೆ. ಸದ್ಯ ಈಗ ಬಿಬಿಎಂಪಿ ವಿರುದ್ಧ ಮತ್ತೊಂದು ಆರೋಪ ಸೇರಿಕೊಂಡಿದೆ. ಬಡ ಮಕ್ಕಳು ಕುಡಿಯುವ ನೀರಿನಲ್ಲೂ ಕಾಸು ಮಾಡಲು ಮುಂದಾಗಿದೆಯಂತೆ. ಬಿಬಿಎಂಪಿಯ ಶಾಲೆ-ಕಾಲೇಜುಗಳಲ್ಲಿ ಬಡ ಮಕ್ಕಳು ಶುದ್ಧವಾದ ನೀರನ್ನು ಕುಡಿಯಲು ಎಂದು ಪಾಲಿಕೆ ಕೋಟ್ಯಾಂತರ ರುಪಾಯಿ ಬಿಡುಗಡೆ ಮಾಡಿದೆ ಆದರೆ ಯಾವುದು ಗುಣಮಟ್ಟದಲ್ಲ. ದೊಡ್ಡ ದೊಡ್ಡದಾದ ಆರ್ಓ ವಾಟರ್ ಫಿಲ್ಟರ್ ಗಳು. ಹೊಚ್ಚ ಹೊಸದರಂತೆ ಪಳ ಪಳ ಎಂದು ಶೈನಿಂಗ್ ಬರ್ತಿದೆ ಆದರೆ ಯಾವುದಕ್ಕೂ ನೀರಿನ ಕನೆಕ್ಷನ್ ಕೂಡ ಇಲ್ಲ. ಈ ಫಿಲ್ಟರ್ ಗಳ ಮೇಲೆ ನೀರನ್ನು ಮಿತವಾಗಿ ಬಳಸಿ ಎಂದು ಬೋರ್ಡ್ ಮಾತ್ರ ಹಾಕಿದ್ದಾರೆ. ಆದರೆ ಈ ವಾಟರ್ ಫಿಲ್ಟರ್ ಗಳಲ್ಲಿ ಒಂದನೀ ನೀರು ಕೂಡ ಬರ್ತಿಲ್ಲ.
ಪಾಲಿಕೆ ಪ್ರತಿವರ್ಷ ಬಜೆಟ್ ನಲ್ಲಿ ಬಿಬಿಎಂಪಿಯ ಸ್ಕೂಲೂ ಕಾಲೇಜುಗಳಿಗಾಗಿ ಸಾವಿರಾರು ಕೋಟಿ ರುಪಾಯಿ ಹಣ ಮೀಸಲಿಡುತ್ತದೆ. ಆ ಹಣವನ್ನು ಹೇಗಾದರೂ ಮಾಡಿ ಹೊಡೆಯಬೇಕೆಂದು ಬಿಬಿಎಂಪಿ ಅಧಿಕಾರಿಗಳು ಬೇಡವಾದ ಯೋಜನೆಗಳನ್ನು ಜಾರಿಗೆ ತರುತ್ತಾರೆ. ಆದರೆ ಜಾರಿಗೆ ತರುವ ಯಾವ ಯೋಜನೆಯಲ್ಲೂ ಗುಣಮಟ್ಟ ಇರೋದಿಲ್ಲ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಅಂದರೆ ಬಿಬಿಎಂಪಿ ಸ್ಕೂಲ್ ಕಾಲೇಜುಗಳಲ್ಲಿ ಅಳವಡಿಸಿರುವ ವಾಟರ್ ಫಿಲ್ಟರ್ ಗಳು ಟೆಂಡರ್ ಪಡೆದಿದ್ದು ಟಾಪ್ ಕ್ವಾಲಿಟಿ ಹಾಕ್ತಿವೆಂದು. ಆದ್ರೆ ಹಾಕಿದ್ದು ಮಾತ್ರ ಶಿವಾಜಿನಗರ ಮಾಲ್. ಬಿಬಿಎಂಪಿಯ ಅಧಿಕಾರಿಗಳು ವಾಟರ್ ಫಿಲ್ಟರ್ ಹೆಸರಲ್ಲಿ ಕೋಟ್ಯಾಂತರ ರುಪಾಯಿ ಕಮೀಷನ್ ನುಂಗಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಲೋಕಾಯುಕ್ತ ಭರ್ಜರಿ ಬೇಟೆ: ಬಿಬಿಎಂಪಿ ಹೆಚ್ಚುವರಿ ನಿರ್ದೇಶಕ ಗಂಗಾಧರಯ್ಯ ಮನೆಯಲ್ಲಿ ಸಿಕ್ತು ವಿದೇಶಿ ಕರೆನ್ಸಿ, ನಗದು, ಚಿನ್ನ!
ಬಿಬಿಎಂಪಿಯಲ್ಲಿ ಪ್ರಾರ್ಥಮಿಕ ಶಾಲೆ, ಫ್ರೌಡ ಶಾಲೆ, ದ್ವಿತೀಯ ಪಿಯುಸಿ ಹಾಗೂ ಡಿಗ್ರಿ ಕಾಲೇಜುಗಳು ಸೇರಿ ಒಟ್ಟು 162 ಸ್ಕೂಲೂ ಕಾಲೇಜುಗಳಿವೆ. ಪ್ರತಿ ಸ್ಕೂಲ್ ಕಾಲೇಜುಗಳಿಗೆ ನಾಲ್ಕರಿಂದ ಐದು ವಾಟರ್ ಫಿಲ್ಟರ್ ಗಳನ್ನು ಅಳವಡಿಸಲಾಗಿದೆ. ಒಟ್ಟು 800 ರಿಂದ 850 ಹಾಕಲಾಗಿದೆ. ಆದರೆ ಒಂದು ಹನಿ ನೀರು ಕೂಡ ಇದರಲ್ಲಿ ಬರ್ತಿಲ್ಲ. ಇದರಲ್ಲಿ ದೊಡ್ಡ ಅಕ್ರಮ ನಡೆದಿದೆ ಎಂದು ಸಾಮಾಜಿಕ ಕಾರ್ಯಕರ್ತ ನಟೇಶ್ ಆರೋಪಿಸಿದ್ದಾರೆ.
ಇನ್ನೂ ಈಗಾಗಲೇ ಈ ಕಳಪೆ ಗುಣಮಟ್ಟದ ವಾಟರ್ ಫಿಲ್ಟರ್ ಅಳವಡಿಸಿದ ಕಂಪನಿಗೆ ಬಿಲ್ ಪಾವತಿ ಮಾಡಲಾಗಿದೆ. ಈ ಸ್ಕೂಲ್ ಕಾಲೇಜುಗಳಲ್ಲಿ 25 ಸಾವಿರಕ್ಕೂ ಹೆಚ್ಚು ಬಡ ಮಕ್ಕಳು ವಿಧ್ಯಾಭ್ಯಾಸ ಮಾಡ್ತಿದ್ದು ಕುಡಿಯಲು ನೀರಿಲ್ಲದೆ ಪರದಾಡುವಂತಾಗಿದೆ ಎಂದು ಬಡ ಮಕ್ಕಳಪರ ಹೋರಾಟಗಾರ ಸುರೇಶ್ ಆಕ್ರೋಶ ಹೊರ ಹಾಕಿದ್ದಾರೆ.
ಒಟ್ನಲ್ಲಿ ಮೊದಲೇ ಬಿಬಿಎಂಪಿ ಸ್ಕೂಲೂ ಕಾಲೇಜು ಅಂದರೆ ಮೂಗು ಮುರಿಯುವ ಪೋಷಕರ ಮತ್ತು ಮಕ್ಕಳಿಗೆ ಕುಡಿಯಲು ನೀರು ನೀಡದೆ ಅದರಲ್ಲೂ ಹಣ ಮಾಡ್ತಾರೆ ಅಂದರೆ ಈ ಭ್ರಷ್ಟ ಅಧಿಕಾರಿಗಳಿಗೇ ಅದೇನ್ ಹೇಳಬೇಕೋ ಗೊತ್ತಾಗ್ತಿಲ್ಲ.
ವರದಿ: ಕಿರಣ್ ಸೂರ್ಯ, ಟಿವಿ9 ಕನ್ನಡ
ಬೆಂಗಳೂರಿಗೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:17 am, Wed, 26 April 23