ಬೆಂಗಳೂರು: ಪತ್ನಿಯನ್ನ ಕೊಲೆ ಮಾಡಿದ್ದ ಪತಿಗೆ ಜೀವಾವಧಿ ಶಿಕ್ಷೆ, 2 ಸಾವಿರ ರೂ. ದಂಡ
ಪತ್ನಿಯನ್ನ ಕೊಲೆ ಮಾಡಿದ್ದ ಪತಿಗೆ ಬೆಂಗಳೂರಿನ 46ನೇ ಸಿಸಿಹೆಚ್ ನ್ಯಾಯಾಲಯವು ಜೀವಾವಧಿ ಶಿಕ್ಷೆ, ಜೊತೆಗೆ 2 ಸಾವಿರ ರೂ. ದಂಡ ವಿಧಿಸಿದೆ.
ಬೆಂಗಳೂರು: ಪತ್ನಿಯನ್ನ ಕೊಲೆ ಮಾಡಿದ್ದ ಪತಿಗೆ ಬೆಂಗಳೂರಿನ 46ನೇ ಸಿಸಿಹೆಚ್ ನ್ಯಾಯಾಲಯವು ಜೀವಾವಧಿ ಶಿಕ್ಷೆ, ಜೊತೆಗೆ 2 ಸಾವಿರ ರೂ. ದಂಡ ವಿಧಿಸಿದೆ. 2013ರಲ್ಲಿ ಅಪರಾಧಿ ಪತಿ ರಾಜೇಶ್, ತನ್ನ ಪತ್ನಿ ಶಾರದಾ ಎಂಬುವವರನ್ನ ಕೊಲೆ ಮಾಡಿದ್ದ. ಈ ಸಂಬಂಧ ಕುಮಾರಸ್ವಾಮಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಪೊಲೀಸರು ತನಿಖೆ ನಡೆಸಿ ಕೋರ್ಟ್ಗೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಇದೀಗ 10 ವರ್ಷದ ಬಳಿಕ ಆರೋಪ ಸಾಬೀತಾದ ಹಿನ್ನೆಲೆ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಕೋರ್ಟ್ ಆದೇಶ ನೀಡಿದೆ.
ಇನ್ನು ಇತ ಕೊಲೆ ಮಾಡುವುದಕ್ಕೂ ಮುನ್ನ ರಾಜೇಶ್ ಹಾಗೂ ಶಾರದಾಗೆ ಕೋರ್ಟ್ ವಿಚ್ಛೇದನ ನೀಡಿತ್ತು. ಬಳಿಕ ಪತ್ನಿಗೆ ಜೀವನಾಂಶ ನೀಡುವಂತೆ ಕೋರ್ಟ್ ರಾಜೇಶ್ನಿಗೆ ಆದೇಶಿಸಿತ್ತು. ಜೀವನಾಂಶ ನೀಡದಿದ್ದಕ್ಕೆ ರಾಜೇಶ್ನನ್ನು ಜೈಲಿಗೆ ಕಳಿಸಿದ್ದ ಕೋರ್ಟ್, ಜೈಲಿನಿಂದ ಬಿಡುಗಡೆಯಾದ ಬಳಿಕ ಚಾಕುವಿನಿಂದ 52 ಬಾರಿ ಇರಿದು ಪತ್ನಿಯನ್ನ ಕೊಲೆ ಮಾಡಿದ್ದ. ಬಳಿಕ ಆರೋಪಿಯನ್ನ ಬಂಧಿಸಿ, ತನಿಖೆ ನಡೆಸಿ. ಕೋರ್ಟ್ಗೆ ಸಲ್ಲಿಸಿದ್ದು, ಇದೀಗ ಆರೋಪಿಗೆ ಜೀವಾವಧಿ ಶಿಕ್ಷೆ ನೀಡಿದೆ.
ಇದನ್ನೂ ಓದಿ: ಕೊಲೆ ಪ್ರಕರಣದ ಅಪರಾಧಿಯೊಂದಿಗೆ ವಿವಾಹವಾಗಲು ಬಯಸಿದ ಯುವತಿ; ಪ್ರಿಯಕರನಿಗೆ ಪೆರೋಲ್ ನೀಡಿ ಆದೇಶಿಸಿದ ಕರ್ನಾಟಕ ಹೈಕೋರ್ಟ್
ವಿಸಿ ನಾಲೆಗೆ ಈಜಲು ತೆರಳಿದ್ದ ಬೆಂಗಳೂರಿನ ಐವರು ನೀರುಪಾಲು
ಮಂಡ್ಯ: ತಾಲೂಕಿನ ದೊಡ್ಡ ಕೊತ್ತಗೆರೆ ಗ್ರಾಮದ ಬಳಿ ವಿಸಿ ನಾಲೆಯಲ್ಲಿ ಈಜಲು ತೆರಳಿದ್ದ ಐವರು ನೀರುಪಾಲಾದ ಘಟನೆ ಮಂಗಳವಾರ ನಡೆದಿದೆ. ಮೃತ ದುರ್ದೈವಿಗಳು ಬೆಂಗಳೂರಿನ ನೀಲಸಂದ್ರ ಮೂಲದ ನಿವಾಸಿಗಳಾಗಿದ್ದು, ಮೆಹತಾ (10), ಅನಿಷಾ ಬೇಗಂ (34), ತಸ್ಮಿಯಾ (22), ಅಶ್ರಕ್ (28), ಅತೀಕ್ (22) ಎಂದು ಗುರುತಿಸಲಾಗಿದೆ. ಇವರು ರಂಜಾನ್ ಬಳಿಕ ರಜೆಗೆಂದು ಹಲ್ಲಗೆರೆಯ ಅಜ್ಜಿ ಮನೆಗೆ ಬಂದಿದ್ದರು. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು ಮೂರು ಮೃತದೇಹಗಳನ್ನು ವಿಸಿ ನಾಲೆಯಿಂದ ಹೊರ ತೆಗೆಯಲಾಗಿದೆ. ಉಳಿದ ಎರಡು ಮೃತದೇಹಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಬಸರಾಳು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ