ಬೆಂಗಳೂರು: ರಾಜ್ಯದಲ್ಲಿ ಶೀಘ್ರದಲ್ಲೇ ಇಂದಿರಾ ಕ್ಯಾಂಟೀನ್ನಲ್ಲಿ (Indira Canteen) ಇಸ್ಕಾನ್ ತಿಂಡಿ, ಊಟ ನೀಡಲು ಗುತ್ತಿಗೆ ಬದಲಾವಣೆಗೆ ಬೆಂಗಳೂರು ಮಹಾನಗರ ಪಾಲಿಕೆ (BBMP) ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತದೆ. ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರಿಂದ ಕಳ್ಳ ಲೆಕ್ಕ, ಗ್ರಾಹಕರ ಸಂಖ್ಯೆಯಲ್ಲಿ ಗೋಲ್ಮಾಲ್, ಕಳಪೆ ಆಹಾರ ಪೂರೈಕೆಯಾಗುತ್ತಿರುವ ಹಿನ್ನೆಲೆ ಕ್ಯಾಂಟೀನ್ಗಳ ಗುತ್ತಿಗೆ ಇಸ್ಕಾನ್ಗೆ ನೀಡುವುದಕ್ಕೆ ಪ್ರಸ್ತಾವನೆ ಸಲ್ಲಿಸಲು ಮುಂದಾಗಿದೆ. ಬಡವರಿಗೆ, ನಿರ್ಗತಿಕರಿಗೆ ನೆರವಾಗಲೆಂದು ಕಾಂಗ್ರೆಸ್ ಸರ್ಕಾರ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಿತ್ತು. ಆದರೆ ಇಲ್ಲೂ ಕೂಡಾ ಕೋಟಿ ಕೋಟಿ ಭ್ರಷ್ಟಚಾರ ನಡೆದಿವೆ ಎಂಬ ಆರೋಪಗಳು ಕೇಳಿಬಂದಿದ್ದವು.
ಆರಂಭವಾದ ಮೊದಲು ಕಡಿಮೆ ಬೆಲೆಗೆ ಒಳ್ಳೆಯ ಆಹಾರ ಅಂತ ಜನರು ಕ್ಯಾಂಟೀನ್ಗೆ ಹೋಗುತ್ತಿದ್ದರು. 5 ರೂಪಾಯಿಗೆ ತಿಂಡಿ, 10 ರೂಪಾಯಿಗೆ ಊಟ ದೊರೆಯುತ್ತದೆ. ಕೊರೊನಾ ಸಂದರ್ಭದಲ್ಲಿ ಉಚಿತವಾಗಿ ವಿತರಣೆ ಮಾಡಲಾಗುತ್ತಿತ್ತು. ಈ ವೇಳೆ ಕ್ಯಾಂಟೀನ್ ಮುಂದೆ ಜನರು ಸಾಲುಗಟ್ಟಿ ನಿಲ್ಲುತ್ತಿದ್ದರು. ಆದರೆ ತದನಂತರದಲ್ಲಿ ಕ್ಯಾಂಟೀನ್ಗೆ ಹೋಗುವವರ ಸಂಖ್ಯೆ ಕಡಿಮೆಯಾಯಿತು. ಇದಕ್ಕೆ ಮುಖ್ಯ ಕಾರಣ. ಆಹಾರದಲ್ಲು ಗುಣಮಟ್ಟದ ಕೊರತೆ. ಈ ಹಿಂದೆ ಇಂದಿರಾ ಕ್ಯಾಂಟಿನ್ನಲ್ಲಿ ಕೋಟಿ ಕೋಟಿ ಲೂಟಿ ಆಗಿದೆ ಎಂದು ಮೇಯರ್ ಮತ್ತು ಸಚಿವರ ಹೆಸರು ಕೇಳಿಬಂದಿದ್ದವು.
ರಾಜ್ಯದ ಹತ್ತು ಜಿಲ್ಲೆಗಳಲ್ಲಿ ಇಂದಿರಾ ಕ್ಯಾಂಟೀನ್ಗಳನ್ನ ರಿವಾಡ್ರ್ಸ್ ಹಾಗೂ ಭಾರತೀಯ ಮಾನವ ಕಲ್ಯಾಣ ಪರಿಷತ್ತು ಕಂಪನಿ ಗುತ್ತಿಗೆ ಪಡೆದಿದೆ. ಸರ್ಕಾರ ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆಗೆ ಅಂತಾ ಒಟ್ಟು 1400 ಪ್ಲೇಟ್ ಊಟ, ತಿಂಡಿಗೆ ಗುತ್ತಿಗೆ ನೀಡಿದೆ.
ಬೆಳಗ್ಗೆ 7.30 ರಿಂದ 10.30 ವರೆಗೆ ತಿಂಡಿ, ಮಧ್ಯಾಹ್ನ 12.30ರಿಂದ 2.30ರವರೆಗೆ ಮಧ್ಯಾಹ್ನದ ಊಟ, ರಾತ್ರಿ 7.30 ರಿಂದ 8.30ರವರೆಗೆ ಊಟ ಲಭ್ಯವಿರುತ್ತದೆ.
ಅಡ್ಡ ದಾರಿ ಹಿಡಿದ ಸಿಬ್ಬಂದಿ:
ಇಂದಿರಾ ಸದ್ಯ ಕ್ಯಾಂಟೀನ್ ಕಡೆ ಬರುವ ಜನರ ಸಂಖ್ಯೆ ಕಡಿಮೆಯಾಗಿದೆ. ಹೀಗಾಗಿ ಕ್ಯಾಂಟೀನ್ ಸಿಬ್ಬಂದಿ ಅಡ್ಡ ದಾರ ಹಿಡಿದಂತೆ ಕಾಣುತ್ತಿದೆ. ಆಹಾರ ಮಾರಾಟವಾಗದ ಹಿನ್ನೆಲೆ ಖಾಸಗಿ ಹೋಟೆಲ್ಗಳಿಗೆ ಮಾರಾಟ ಮಾಡಿ ಹಣ ಪಡೆಯುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:07 am, Tue, 17 May 22