ಬೆಂಗಳೂರು, ಅ.04: ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಹೊಸ ಅವಿಷ್ಕಾರಗಳಿಗೆ ಕೊರತೆ ಇಲ್ಲ. ಅದ್ರಲ್ಲೂ ಅಡ್ವಾನ್ಸ್ ಟೆಕ್ನಾಲಜಿಯಿಂದ ಬೆಂಗಳೂರು ಹೆಲ್ತ್ ಹಬ್ ಅಂತಾನೇ ಪ್ರಸಿದ್ಧಿ ಪಡೆದಿದೆ (Health Hub). ಬೆಂಗಳೂರಿನ ಕ್ವಾಲಿಟಿ ಹೆಲ್ತ್ಕೇರ್ ಸರ್ವಿಸ್ ಪಡೆಯಲು ದೇಶ, ವಿದೇಶಗಳಿಂದ ರೋಗಿಗಳು ಬರ್ತಿದ್ದಾರೆ. ಇಷ್ಟೆಲ್ಲಾ ಮುಂದುವರೆದಿರುವ ಉದ್ಯಾನ ನಗರಿಯಲ್ಲಿ ಜನ ಮಾತ್ರ ಇನ್ನೂ ಮೂಢನಂಬಿಕೆಯಲ್ಲಿ ಮುಳುಗಿದ್ದಾರೆ. ಮಾರ್ಡನ್ ಮೈಂಡ್ ಸೆಟ್ ಇದ್ರೂ, ಅಂಗಾಂಗ ದಾನ (Organ Donation) ಮಾಡಿದ್ರೆ ಮುಂಬರುವ ಜನ್ಮದಲ್ಲಿ ಅಂಗವೈಕಲ್ಯತೆ ಕಾಡಬಹುದು ಎಂಬ ಮೂಢನಂಬಿಕೆಯಲ್ಲಿ ಸಿಟಿ ಜನ ಮುಳುಗಿದ್ದಾರೆ. ತಪ್ಪು ಕಲ್ಪನೆಗಳಿಂದ ಅಂಗಾಂಗ ದಾನಕ್ಕೆ ಜನರು ಹಿಂದೇಟು ಹಾಕುತ್ತಿದ್ದಾರೆ.
ಬೆಂಗಳೂರು ಐಟಿ ಸಿಟಿ ಅನ್ನೊ ಖ್ಯಾತಿ ಪಡೆದಿದೆ. ಸಿಟಿ ಜನ ಸಖತ್ ಫಾಸ್ಟ್ ಅಂಡ್ ಮಾರ್ಡನ್ ಎಂಬ ಪಟ್ಟಿ ಪಡೆದಿದ್ದಾರೆ. ಇಷ್ಟಿದ್ದರೂ ಆರ್ಗನ್ ಡೊನೇಷನ್ ವಿಚಾರದಲ್ಲಿ ಸಿಟಿ ಜನ ಸಖತ್ ವೀಕ್ ಎಂಬ ಅಚ್ಚರಿಯ ಅಂಶ ಹೊರಬಿದ್ದಿದೆ. ಕೋವಿಡ್ ನಂತರದಲ್ಲಿ ಅಂಗಾಂಗ ದಾನದ ಬಗ್ಗೆ ಸಿಟಿ ಜನ ಹಿಂದೇಟು ಹಾಕ್ತಿದ್ದು, ಇದಕ್ಕೆಲ್ಲ ಮೂಢನಂಬಿಕೆ ಕಾರಣ ಎಂಬುದು ತಿಳಿದು ಬಂದಿದೆ.
ಇದನ್ನೂ ಓದಿ: ಅಂಗಾಂಗ ದಾನದ ಮಹತ್ವ ಸಾರಿದ ಕಾರುಣ್ಯ ರಾಮ್, ಅಶ್ವಿನಿ ಪುನೀತ್ ರಾಜ್ಕುಮಾರ್, ಧ್ರುವ ಸರ್ಜಾ
ಅಂಗಾಂಗ ದಾನದ ಬಗ್ಗೆ ವೈದ್ಯರು ಸಾಕಷ್ಟು ಅರಿವು ಮೂಡಿಸುತ್ತಿದ್ದಾರೆ. ಜೊತೆಗೆ ಕರ್ನಾಟಕ ರತ್ನ ಪುನೀತ್ ರಾಜ್ಕುಮಾರ್ ಅವರು ಅಗಲಿದ ವೇಳೆ ಅಭಿಮಾನಿಗಳು ಪುನೀತ್ ಅವರ ಹಾದಿಯಲ್ಲಿ ನಡೆದು ಕಣ್ಣುದಾನ ಮಾಡಿದ್ದರು. ಆದರೆ ಅಂಗಾಂಗ ದಾನಕ್ಕೆ ಜನರು ಹಿಂದೇಟು ಹಾಕುತ್ತಿದ್ದಾರೆ. ಇಷ್ಟಾದರೂ ವೈದ್ಯರ ಪ್ರಯತ್ನಕ್ಕೆ ಮೂಢನಂಬಿಕೆಗಳು ಅಡ್ಡಿ ಉಂಟು ಮಾಡುತ್ತಿದೆ. ಈ ಜನ್ಮದಲ್ಲಿ ಕಣ್ಣು, ಕಿಡ್ನಿ, ಚರ್ಮ, ಲಿವರ್, ಹೃದಯ, ಕರುಳು ಹೀಗೆ ಅಂಗಾಂಗಳನ್ನು ನೀಡಿದರೆ ಮುಂಬರುವ ಜನ್ಮದಲ್ಲಿ ಅಂಗವೈಕಲ್ಯತೆ ಕಾಡಬಹುದು ಎಂದು ಸಿಟಿ ಜನ ಭಯ ಪಡುತ್ತಿದ್ದಾರೆ. ಹೀಗಾಗಿ ಕಳೆದ ಎರಡು ವರ್ಷಗಳಿಂದ ಆರ್ಗನ್ ಡೊನೇಷನ್ ಶೇಕಾಡ 50 ರಷ್ಟು ಕುಸಿತ ಕಂಡಿದೆ. ಕಳೆದ ಕೆಲವು ದಿನಗಳಿಂದ ಜಾಗೃತಿ ಬಳಿಕ ಕೊಂಚ ಸುಧಾರಣೆಯಾಗಿದೆ ಆದ್ರೂ ಜನರ ಮೂಢನಂಬಿಕೆ ಅಂಗಾಂಗ ಕುಸಿತಕ್ಕೆ ಕಾರಣವಾಗಿದ್ದು ಜನರು ಇದರಿಂದ ಹೊರ ಬರಬೇಕಿದೆ.
ಅಂಗಾಂಗ ದಾನಗಳ ಪೈಕಿ ಕಿಡ್ನಿ ದಾನದ ಸಂಖ್ಯೆ ತೀರಾ ಇಳಮುಖ ಕಂಡಿದೆ. ಆಗರ್ನ್ ಡೊನೇಷನ್ ಸಿಗದ ಕಾರಣ ಸರಿಸುಮಾರು 5 ವರ್ಷ ಕಿಡ್ನಿಗಾಗಿ ರೋಗಿಗಳು ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ. ಯಕೃತ್ತು ಪಡೆಯಲು ನಾಲ್ಕುವರೆ ವರ್ಷ ವೈಟಿಂಗ್ ಪಿರಿಯಡ್ ಇದ್ದು, ಸರ್ಕಾರದ ಮಹತ್ವಾಕಾಂಕ್ಷೆ ಜೀವನ ಸಾರ್ಥಕತೆ ಯೋಜನೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ