ಬೆಂಗಳೂರಿನಲ್ಲಿ ನಡೆದ ಲಿಂಗ ಸಮಾನತೆ ಪ್ರತಿಭಟನೆಯಲ್ಲಿ ಆಜಾದಿ ಘೋಷಣೆ; ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ

|

Updated on: Dec 01, 2023 | 8:16 PM

ಲಿಂಗ ಸಮಾನತೆಗೆ ಆಗ್ರಹಿಸಿ ಬೆಂಗಳೂರಿ(Bengaluru)ನಲ್ಲಿ ಭಾನುವಾರ(ನ.26) ನಡೆದ ಪ್ರತಿಭಟನೆಯಲ್ಲಿ 'ಆಜಾದಿ' ಘೋಷಣೆಗಳು ವೈರಲ್​ ಆಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ.

ಬೆಂಗಳೂರಿನಲ್ಲಿ ನಡೆದ ಲಿಂಗ ಸಮಾನತೆ ಪ್ರತಿಭಟನೆಯಲ್ಲಿ ಆಜಾದಿ ಘೋಷಣೆ; ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ
ಬೆಂಗಳೂರು
Follow us on

ಬೆಂಗಳೂರು, ಡಿ.01: ಲಿಂಗ ಸಮಾನತೆಗೆ ಆಗ್ರಹಿಸಿ ಬೆಂಗಳೂರಿ(Bengaluru)ನಲ್ಲಿ ಭಾನುವಾರ(ನ.26) ನಡೆದ ಪ್ರತಿಭಟನೆಯಲ್ಲಿ ‘ಆಜಾದಿ’ ಘೋಷಣೆಗಳು ವೈರಲ್​ ಆಗಿದ್ದು, ಸಾಮಾಜಿಕ ಮಾಧ್ಯಮ(Social Media)ಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಇನ್ನು ಕರ್ನಾಟಕ, ದೆಹಲಿ, ಚೆನ್ನೈ ಮತ್ತು ಮುಂಬೈನ ಸಾವಿರಾರು ಜನರು ಭಾಗವಹಿಸಿದ್ದರು. ಈ ವೇಳೆ ಕಂಠೀರವ ಹೊರಾಂಗಣ ಕ್ರೀಡಾಂಗಣದ ಬಳಿ “ಮನುವಾದ್ ಸೇ ಆಜಾದಿ, “ಬ್ರಹ್ಮಣವಾದ್ ಸೇ ಆಜಾದಿ  ಮತ್ತು “ಹಿಂದುತ್ವವಾದ್ ಸೇ ಆಜಾದಿ” ಎಂಬ ಘೋಷಣೆಯನ್ನು ಕೂಗಿದ್ದಾರೆ.

ಇನ್ನು ಈ ಘೋಷಣೆ ಕೂಗಿದ ವಿಡಿಯೋ ಶುಕ್ರವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗಿದ್ದು, ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಈ ವಿಡಿಯೋದಲ್ಲಿ ಬ್ಯಾನರ್​ಗಳನ್ನು ಹಿಡಿದು ಬೀದಿಗಳಲ್ಲಿ ಮೆರವಣಿಗೆ ನಡೆಸುತ್ತಿದ್ದ ವೇಳೆ ಒಬ್ಬ ವ್ಯಕ್ತಿ “ಆಜಾದಿ” ಘೋಷಣೆಗಳನ್ನು ಪ್ರಾರಂಭಿಸಿದ್ದನ್ನು ಕಾಣಬಹುದು. ಇದಾದ ಬಳಿಕ ಅನೇಕರು ಇತನೊಟ್ಟಿಗೆ ಸೇರಿಕೊಂಡು “ಹಿಂದುತ್ವವಾದ್ ಸೇ ಆಜಾದಿ” ಎಂದು ಘೋಷಣೆ ಕೂಗುವುದನ್ನು ಕಾಣಬಹುದು.

ಈ ವಿಡಿಯೋ ಕೆಲವು ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆಗೆ ಗುರಿಯಾಗಿದೆ. ಈ ಪ್ರತಿಭಟನೆಯಲ್ಲಿ “ಹಿಂದುತ್ವ ಸೇ ಆಜಾದಿ” ಘೋಷಣೆ, ಇಲ್ಲಿ ನಡೆಯುತ್ತಿರುವ ಮಾರ್ಚ್​ಗೆ ಏನು ಸಂಬಂಧ. “ಲಿಂಗ-ಸಮಾನತೆ” ಹೆಸರಿನಲ್ಲಿ ನೀವು ಯಾರ ಅಜೆಂಡಾವನ್ನು ಹರಡಲು ಪ್ರಯತ್ನಿಸುತ್ತಿದ್ದೀರಿ? ” ಎಂದು  ಬಳಕೆದಾರರು ಪ್ರಶ್ನಿಸಿದ್ದಾರೆ. ಮತ್ತೊಬ್ಬರು “ಬೆಂಗಳೂರಿನಲ್ಲಿ ಇದು ಹೆಮ್ಮೆಯ ಮೆರವಣಿಗೆ? ಆದರೆ, ಕೆಲವರು ಸ್ವಾತಂತ್ರ್ಯ ಕೇಳುತ್ತಾ ದಾರಿ ತಪ್ಪಿದಂತಿದೆ ಎಂದು ಬರೆದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:05 pm, Fri, 1 December 23