AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಭ್ರೂಣ ಹತ್ಯೆ ಪ್ರಕರಣ; ಇಬ್ಬರು ಅಧಿಕಾರಿಗಳ ಅಮಾನತು

ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ(Female feticide) ಪ್ರಕರಣಕ್ಕೆ ಸಂಬಂಧಪಟ್ಟಂತೆ ಕರ್ತವ್ಯಲೋಪ ಆರೋಪದಡಿ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ(Department of health and family welfare) ಆದೇಶಿಸಿದೆ.

ಬೆಂಗಳೂರು: ಭ್ರೂಣ ಹತ್ಯೆ ಪ್ರಕರಣ; ಇಬ್ಬರು ಅಧಿಕಾರಿಗಳ ಅಮಾನತು
ಪ್ರಾತಿನಿಧಿಕ ಚಿತ್ರ
Vinay Kashappanavar
| Edited By: |

Updated on: Dec 01, 2023 | 10:04 PM

Share

ಬೆಂಗಳೂರು, ಡಿ.01: ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ(Female feticide) ಪ್ರಕರಣಕ್ಕೆ ಸಂಬಂಧಪಟ್ಟಂತೆ ಕರ್ತವ್ಯಲೋಪ ಆರೋಪದಡಿ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ(Department of health and family welfare) ಆದೇಶಿಸಿದೆ. ಜಿಲ್ಲಾ ವ್ಯಾಪ್ತಿಯಲ್ಲಿ ಭ್ರೂಣ ಹತ್ಯೆ ನಡೆಯುತ್ತಿದ್ದರೂ ನಿರ್ಲಕ್ಷ್ಯ ಹಿನ್ನೆಲೆ ಮೈಸೂರು ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಪಿ.ರಾಜು ಹಾಗೂ ಮೈಸೂರು ತಾಲೂಕು ಆರೋಗ್ಯಾಧಿಕಾರಿ ಡಾ.ರಾಜೇಶ್ವರಿ ಅವರನ್ನು ಅಮಾನತುಗೊಳಿಸಿದ್ದಾರೆ.

ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಪ್ರಕರಣವನ್ನು ಸಿಐಡಿ ತನಿಖೆಗೆ ನೀಡಿದೆ. ಇನ್ನು ಭ್ರೂಣ ಲಿಂಗ ಪತ್ತೆ ಕುರಿತಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್​, ‘ಇದು ರಾಜ್ಯಾದ್ಯಂತ ಇರುವ ಜಾಲ. ಭ್ರೂಣ ಹತ್ಯೆ ತಡೆಯಲು ಅಧಿಕಾರಿಗಳು ವಿಫಲ ಆಗಿದ್ದಾರೆ. ನಮ್ಮ ಇಲಾಖೆಯಲ್ಲಿ ಆಗಿರುವ ಲೋಪದ ಬಗ್ಗೆ ಮುಚ್ಚುಮರೆ ಇಲ್ಲ. ಯಾರು ತಪ್ಪು ಮಾಡಿದ್ದಾರೆ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮವಾಗುತ್ತೆ. ಯಾವುದೇ ಮುಲಾಜು ನೋಡಬೇಡಿ ಎಂದು ಸಿಎಂ ಹೇಳಿದ್ದಾರೆ ಎಂದಿದ್ದರು.

ಇದನ್ನೂ ಓದಿ:ರಾಜ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ: ಸಿಐಡಿ ತನಿಖೆಗೆ ಒಪ್ಪಿಸಿದ ರಾಜ್ಯ ಸರ್ಕಾರ

ಲಿಂಗಾನುಪಾತ ನೋಡಿದಾಗ ಹೆಣ್ಣುಮಕ್ಕಳ ಸಂಖ್ಯೆಯೂ ಕಡಿಮೆಯಿದೆ. ಸಮಾಜದಲ್ಲಿ ಹೆಣ್ಣು ಮಗು ಅಂದಾಕ್ಷಣ ಬೇಡ ಎನ್ನುವ ಪರಿಸ್ಥಿತಿ ಇದೆ. ಭ್ರೂಣ ಲಿಂಗ ಹತ್ಯೆ ತಡೆಗಟ್ಟಲು ಇಲಾಖೆ ಹೆಚ್ಚು ಗಮನ ಹರಿಸುತ್ತದೆ. ಪ್ರಕರಣ ಸಂಬಂಧ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ಹೇಳಿದ್ದಾರೆ. ಇನ್ನು ಇದೇ ವೇಳೆ ‘ಪರಮೇಶ್ವರ್ ನಮ್ಮ ನಾಯಕರು, ಅವರ ಜತೆ ನಾವು ಬೆಳೆದಿದ್ದೇವೆ. ಡಾ.ಪರಮೇಶ್ವರ್​ ಅಧ್ಯಕ್ಷರಾಗಿದ್ದಾಗ ಸಾಕಷ್ಟು ಸಹಾಯ ಮಾಡಿದ್ದರು. ಅವರ ಸಹಾಯದಿಂದ ಎರಡು ಬಾರಿ ಸಚಿವನಾಗಿ ಕೆಲಸ ಮಾಡಿದ್ದೇನೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ವೆಸ್ಟ್ ಇಂಡೀಸ್ ಸ್ಕೋರ್ 114 ರನ್: 118 ರನ್ ಬಾರಿಸಿ ಸೋತ ಸೌತ್ ಆಫ್ರಿಕಾ
ವೆಸ್ಟ್ ಇಂಡೀಸ್ ಸ್ಕೋರ್ 114 ರನ್: 118 ರನ್ ಬಾರಿಸಿ ಸೋತ ಸೌತ್ ಆಫ್ರಿಕಾ
ಮಹಿಳಾ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಗೆ ವಿಶೇಷ ಒತ್ತು
ಮಹಿಳಾ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಗೆ ವಿಶೇಷ ಒತ್ತು
ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ
ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ
ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
ಮಾಘ ಹುಣ್ಣಿಮೆ: ಕಾವೇರಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತಸಾಗರ
ಮಾಘ ಹುಣ್ಣಿಮೆ: ಕಾವೇರಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತಸಾಗರ
ನಿರ್ಮಲಾ ಸೀತಾರಾಮನ್​​​​​ಗೆ ಚಾರ್ಕೋಲ್ ಸ್ಕೆಚ್ ಮೂಲಕ ಸ್ವಾಗತ
ನಿರ್ಮಲಾ ಸೀತಾರಾಮನ್​​​​​ಗೆ ಚಾರ್ಕೋಲ್ ಸ್ಕೆಚ್ ಮೂಲಕ ಸ್ವಾಗತ
5 ವಿಕೆಟ್​ ಕಬಳಿಸಿ ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್
5 ವಿಕೆಟ್​ ಕಬಳಿಸಿ ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್
‘ಕಲ್ಟ್’ ಸಿನಿಮಾ ನೋಡಿ ಕಣ್ಣೀರು ಹಾಕಿದ ಸಿಎಂ ಸಿದ್ದರಾಮಯ್ಯ
‘ಕಲ್ಟ್’ ಸಿನಿಮಾ ನೋಡಿ ಕಣ್ಣೀರು ಹಾಕಿದ ಸಿಎಂ ಸಿದ್ದರಾಮಯ್ಯ
ಇದು ಯಾವ ಸೀಮೆಯ ಬೌಲಿಂಗ್: ಪಾಕ್ ಸ್ಪಿನ್ನರ್ ಶೈಲಿಗೆ ಗ್ರೀನ್​ ಆಕ್ರೋಶ
ಇದು ಯಾವ ಸೀಮೆಯ ಬೌಲಿಂಗ್: ಪಾಕ್ ಸ್ಪಿನ್ನರ್ ಶೈಲಿಗೆ ಗ್ರೀನ್​ ಆಕ್ರೋಶ