
ಬೆಂಗಳೂರು, ಅ.21: ಬೆಂಗಳೂರು ಬಿಡುತ್ತೇವೆ, ಇಲ್ಲಿ ಎಲ್ಲವೂ ದುಬಾರಿ, ಇಲ್ಲಿನ ಟ್ರಾಫಿಕ್ ಯಾರಿಗೆ ಬೇಕು ಎಂದೆಲ್ಲ ಹೇಳುವವರ ಮಧ್ಯೆ, ನನಗೆ ದೆಹಲಿಗಿಂತ ಬೆಂಗಳೂರು ಇಷ್ಟು ಎಂದು ಹೇಳುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಈ ವ್ಯಕ್ತಿ ವೈರಲ್ ಆಗಿದ್ದಾರೆ. ಇದೀಗ ಬೆಂಗಳೂರು ವರ್ಸಸ್ ದೆಹಲಿ (Bangalore vs Delhi) ಎಂಬ ಚರ್ಚೆಗೆ ಕಾರಣವಾಗಿದೆ. ದೆಹಲಿಯಿಂದ ಬೆಂಗಳೂರಿಗೆ ಶಿಫ್ಟ್ ಆಗಿರುವ ಈ ವ್ಯಕ್ತಿಗೆ ಬೆಂಗಳೂರು ಸಕಾರಾತ್ಮಕ ಅನುಭವ ನೀಡಿದೆಯಂತೆ. ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾನೆ. ದೆಹಲಿಯಲ್ಲಿ 10 ವರ್ಷಗಳಿಗೂ ಹೆಚ್ಚು ಕಾಲ ವಾಸಿಸಿದ್ದ ಈ ವ್ಯಕ್ತಿ ಇದೀಗ ಬೆಂಗಳೂರಿಗೆ ಬಂದಿದ್ದಾರೆ. ನಗರದ ಸಂಸ್ಕೃತಿ, ಇಲ್ಲಿ ಆಚರಣೆ ಹಾಗು ಇಲ್ಲಿನ ಜನ ಸುಂದರವಾಗಿದ್ದಾರೆ. ಇನ್ನು ಇದೊಂದು ಶ್ರೇಷ್ಠ ಪ್ರದೇಶವಾಗಿದೆ ಎಂದು ಹಾಡಿ ಹೊಗಳಿದ್ದಾರೆ.
ಬೆಂಗಳೂರಿಗೆ ವಲಸೆ ಬರುವ ಅನೇಕ ಉತ್ತರ ಭಾರತೀಯರು ಇಲ್ಲಿನ ವಿಚಾರಗಳಿಗೆ ಹೊಂದಿಕೊಳ್ಳುವುದಿಲ್ಲ. ಹಾಗೂ ಹಲವು ಬಾರಿ ಭಾಷೆ ವಿಚಾರವಾಗಿ ಇಲ್ಲಿ ಸಂಘರ್ಷ ನಡೆದದ್ದು ಇದೆ. ಆದರೆ ಈ ವ್ಯಕ್ತಿ ಇಲ್ಲಿನ ಸಂಪ್ರದಾಯಗಳು ಮತ್ತು ಮೌಲ್ಯಗಳನ್ನು ಅಳವಡಿಸಿಕೊಳ್ಳುವುದರಿಂದ ಇಲ್ಲಿ ಬದಕಲು ತುಂಬಾ ಸುಲಭವಾಗಬಹುದು ಎಂದು ಹೇಳಿದ್ದಾರೆ. ಇದನ್ನು ಎಕ್ಸ್ನಲ್ಲಿ ಅವರು ಹೀಗೆ ಹಂಚಿಕೊಂಡಿದ್ದಾರೆ. ” ನಾನು 10 ವರ್ಷಕ್ಕಿಂತಲ್ಲೂ ದೆಹಲಿಯಲ್ಲಿ ವಾಸವಾಗಿದ್ದೆ ಇತ್ತೀಚೆಗೆ ಬೆಂಗಳೂರಿಗೆ ಸ್ಥಳಾಂತರಗೊಂಡಿದ್ದೇನೆ. ನನಗೆ ದೆಹಲಿಗಿಂತ ಬೆಂಗಳೂರೇ ಇಷ್ಟ. ಹೆಚ್ಚಿನ ಉತ್ತರ ಭಾರತೀಯರು ಸ್ಥಳೀಯ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಲು ಇಷ್ಟಪಡುವುದಿಲ್ಲ, ಇದರಿಂದ ಅವರು ಬೆಂಗಳೂರಿನ ವಿಚಾರಗಳಿಗೆ ಹೊಂದಿಕೊಳ್ಳುವುದರಲ್ಲಿ ವಿಫಲವಾಗಿದ್ದಾರೆ. ಬೆಂಗಳೂರು ಮತ್ತು ಅದರ ಸಂಸ್ಕೃತಿ ಸುಂದರವಾಗಿದೆ. ಜನರು ಕೂಡ ಶ್ರೇಷ್ಠರು” ಎಂದು ಹೇಳಿದ್ದಾರೆ. ಈ ಪೋಸ್ಟ್ನ್ನು @gurudutt_biswal ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Closed a client recently – Lives in Bangalore, likes the weather, kid in a top school, both have great jobs Yet can’t wait to move back to Gurgaon. Said something I didn’t realise at that point…
“Being a North Indian in Bangalore reminds you every day that you’re an outsider” pic.twitter.com/8FCBgvs7WE
— Gaurav Gupta | Realtor (@GauravGupta_RE) October 19, 2025
ಈ ಪೋಸ್ಟ್ಗೆ ಹಲವು ಜನ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ವಾಸಿಸುವುದು ತುಂಬಾ ಖುಷಿಯೇ, ಇಲ್ಲಿನ ಆಹ್ಲಾದಕರ ಹವಾಮಾನ, ಮಗುವನ್ನು ಉನ್ನತ ಶಾಲೆಗೆ ಸೇರಿಸಿದ್ದಾನೆ. ನಾವು ಇಬ್ಬರೂ ಕೂಡ ಒಳ್ಳೆಯ ಸಂಬಳ ಪಡೆಯುವ ಕೆಲಸದಲ್ಲೂ ಇದ್ದೇವು, ಆದರೆ ಹೊರಗಿನವರು ಎಂಬ ಭಾವನೆಯನ್ನು ನಿರಂತರವಾಗಿ ಇಲ್ಲಿ ಅನುಭವಿಸುತ್ತಿರುವುದರಿಂದ ಮತ್ತೆ ಗುರುಗ್ರಾಮ್ ಹಿಂತಿರುಗಬೇಕಾಯಿತು ಎಂದು ಹಂಚಿಕೊಂಡಿದ್ದಾರೆ. ಇದೀಗ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಅನೇಕರು ಕಮೆಂಟ್ ಮಾಡಿದ್ದಾರೆ. ನಿಮಗೆ ಧನ್ಯವಾದಗಳು, ಬೆಂಗಳೂರಿನ ಬಗ್ಗೆ ಕೆಟ್ಟದಾಗಿ ಮಾತನಾಡುವ ಜನರ ಮಧ್ಯೆ, ಬೆಂಗಳೂರನ್ನು ಆಯ್ಕೆ ಮಾಡಿಕೊಂಡಿರುವುದು ತುಂಬಾ ಇಷ್ಟವಾಯಿತು ಎಂದು ಒಬ್ಬ ಬಳಕೆದಾರ ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರು-ಹೊಸೂರು ಮೆಟ್ರೋ: ಅಂತರರಾಜ್ಯ ಯೋಜನೆ ತಾಂತ್ರಿಕವಾಗಿ ಅಸಾಧ್ಯ ಎಂದ BMRCL
ಕನ್ನಡಿಗರು ಎಲ್ಲರನ್ನೂ ಸ್ವಾಗತಿಸುತ್ತಾರೆ. ಇಲ್ಲಿ ಎಲ್ಲದಕ್ಕೂ ಮುಕ್ತ ಅವಕಾಶ ಇದೆ. ಎಲ್ಲರನ್ನೂ ಬೆಳೆಸುವ ಜಗತ್ತು ಬೆಂಗಳೂರು, ಜತೆಗೆ ಎಲ್ಲವನ್ನು ವೇಗವಾಗಿ ಕಲಿಯಬಹುದು. ಆದರೆ ಇಲ್ಲಿರುವ ಅನೇಕ ಹೊರಗಿನ ಜನರಿಗೆ ಇಲ್ಲಿನ ವಿಚಾರಗಳನ್ನು ತಿಳಿದುಕೊಳ್ಳಲು ಇಷ್ಟವಿಲ್ಲ ಎಂದು ಮತ್ತೊಬ್ಬ ಬಳಕೆದಾರ ಹೇಳಿದ್ದಾರೆ. ಬೆಂಗಳೂರ 10-15 ವರ್ಷಗಳ ಹಿಂದಿನ ನಗರವಲ್ಲ. ಮೊದಲು ಇದು ಮೋಜಿಗೆ ಹೆಸರುವಾಸಿಯಾಗಿತ್ತು, ಆದರೆ ಇಂದು ರಾಜ್ಯ ಸರ್ಕಾರದ ಸೆಸ್ ಮತ್ತು ತೆರಿಗೆಗಳಿಂದಾಗಿ ದೊಡ್ಡ ಸಂಚಾರ ಸಮಸ್ಯೆ ಮತ್ತು ಹೆಚ್ಚಿನ ಜೀವನ ವೆಚ್ಚವನ್ನು ಹಾಕುತ್ತಿದೆ. ಇದರ ಜತೆಗೆ ಭಾಷಾಭಿಮಾನಿಗಳು ಸಹ ಬ್ರಾಂಡ್ ನಗರವನ್ನು ನಾಶಪಡಿಸುತ್ತಿದ್ದಾರೆ ಎಂದು ಮತ್ತೊಬ್ಬ ಬಳಕೆದಾರ ಹೇಳಿದ್ದಾರೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ