ಊಟಿ, ಮಡಿಕೇರಿಯಂತಾದ ಬೆಂಗಳೂರು; ಕೂಲ್ ವೆದರ್​ಗೆ ಮನ ಸೋತ ಜನ

ಒಂದು ದಿನದ ಹಿಂದೆ 15 ರಿಂದ 17 ಡಿಗ್ರಿಯಷ್ಟು ಕನಿಷ್ಠ ಉಷ್ಣಾಂಶ ದಾಖಾಲಾಗಿತ್ತು. ಇದೀಗಾ ನಗರದಲ್ಲಿ ಮುಸುಕಿನ ವಾತಾವರಣ ಕಂಡುಬರುತ್ತಿದ್ದು ಬೆಂಗಳೂರು ಈಗ ಊಟಿ, ಕೊಡಗಿನಂತಾಗಿದೆ. ಹೀಗಾಗಿ ಕಬ್ಬನ್ ಪಾರ್ಕ್, ಲಾಲ್ ಬಾಗ್​ಗಳಲ್ಲಿ ಕೂಲ್ ವೆದರನ್ನ ಸಿಲಿಕಾನ್ ಸಿಟಿ ಮಂದಿ ಎಂಜಾಯ್ ಮಾಡುತ್ತಿದ್ದಾರೆ.

ಊಟಿ, ಮಡಿಕೇರಿಯಂತಾದ ಬೆಂಗಳೂರು; ಕೂಲ್ ವೆದರ್​ಗೆ ಮನ ಸೋತ ಜನ
ಸಾಂದರ್ಭಿಕ ಚಿತ್ರ
Edited By: ಆಯೇಷಾ ಬಾನು

Updated on: Dec 17, 2023 | 7:52 AM

ಬೆಂಗಳೂರು, ಡಿ.17: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಫುಲ್ ಕೂಲ್ ಕೂಲ್ ವೆದರ್ ಇದೆ (Bengaluru Weather). ನಗರದಲ್ಲಿ ಅಧಿಕೃತವಾಗಿ ಚಳಿಗಾಲ ಆರಂಭವಾಗಿದ್ದು ವಾತಾವರಣ ತಂಪಾಗಿದೆ. ಕಳೆದ ಎರಡು ದಿನದಿಂದ ಚಳಿಯ ವಾತಾವರಣ ಹೆಚ್ಚಾಗುತ್ತಿದೆ. ಬೆಳಗ್ಗೆ ಮತ್ತು ಸಂಜೆ ಚಳಿಯ ವಾತಾವರಣ ಕಂಡುಬರುತ್ತಿದೆ. ಹಗಲಲ್ಲೂ ಮೋಡ ಕವಿದ ವಾತಾವರಣ ಇದೆ. ಬಿಸಿಲಿನಲ್ಲಿಯೂ ಚಳಿಯ ಅನುಭವವಾಗುತ್ತಿದೆ. ಸಿಲಿಕಾನ್ ಸಿಟಿ ಈಗ ಕೂಲ್ ಸಿಟಿಯಾಗಿದೆ.

ನಗರದಲ್ಲಿ ಗರಿಷ್ಠ ಉಷ್ಣಾಂಶ 27 ಡಿಗ್ರಿ, ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ಇದ್ದು ಉತ್ತರ ಒಳನಾಡು, ದಕ್ಷಿಣ ಒಳನಾಡು, ಕರಾವಳಿ, ಬೆಂಗಳೂರಿನಲ್ಲಿಯು ಉಷ್ಣಾಂಶ ಇಳಿಕೆಯಾಗಿದೆ. ಕಳೆದ ಎರಡು ದಿನಗಳಲ್ಲಿ ಬೆಂಗಳೂರು ನಗರ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಹೆಚ್​ಎಎಲ್​ನಲ್ಲಿ ಕನಿಷ್ಠ ಉಷ್ಣಾಂಶ ಕಂಡುಬಂದಿದೆ. ಒಂದು ದಿನದ ಹಿಂದೆ 15 ರಿಂದ 17 ಡಿಗ್ರಿಯಷ್ಟು ಕನಿಷ್ಠ ಉಷ್ಣಾಂಶ ದಾಖಾಲಾಗಿತ್ತು. ಇದೀಗಾ ನಗರದಲ್ಲಿ ಮುಸುಕಿನ ವಾತಾವರಣ ಕಂಡುಬರುತ್ತಿದ್ದು ಬೆಂಗಳೂರು ಈಗ ಊಟಿ, ಕೊಡಗಿನಂತಾಗಿದೆ. ಹೀಗಾಗಿ ಕಬ್ಬನ್ ಪಾರ್ಕ್, ಲಾಲ್ ಬಾಗ್​ಗಳಲ್ಲಿ ಕೂಲ್ ವೆದರನ್ನ ಸಿಲಿಕಾನ್ ಸಿಟಿ ಮಂದಿ ಎಂಜಾಯ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ಕೇರಳದಲ್ಲಿ ಮತ್ತೆ ಕೊರೊನಾ ಹೆಚ್ಚಳ; ರಾಜ್ಯಕ್ಕೆ ಕೋವಿಡ್ ಆತಂಕ, ಆರೋಗ್ಯ ಇಲಾಖೆಯಿಂದ ಸಭೆ

ಇನ್ನು ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು ಹಾಗೂ ಕರಾವಳಿಯ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ,ಧಾರವಾಡ, ಬಾಗಲಕೋಟೆ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಮಳೆಯಾಗಲಿದೆ.

ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡಕವಿದ ವಾತಾವರಣವಿರಲಿದ್ದು, ಸಂಜೆ ವೇಳೆಗೆ ಕೆಲವು ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಮಳೆಯಾಗಲಿದೆ ಡಿಸೆಂಬರ್ 20ರವರೆಗೂ ಮಳೆಯಾಗಲಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

TV9 Web

TV9 Kannada

Read More
Loading...
Unable to load recommendations.
Follow Us