‘ನೀವು ಮತ್ತು ಆ ಹುಡುಗಿ ಬೇರೆ ಬೇರೆ ಮಲಗಿ’: ಪೊಲೀಸರಿಗೆ ದೂರು ನೀಡುವುದಾಗಿ ಬೆದರಿಕೆ ಹಾಕಿದ ಬಸ್ ಕಂಡಕ್ಟರ್

ಬೆಂಗಳೂರಿನಲ್ಲಿ ಖಾಸಗಿ ಸ್ಲೀಪರ್ ಬಸ್‌ನಲ್ಲಿ ಯುವ ದಂಪತಿಗೆ ನೈತಿಕ ಪೊಲೀಸ್‌ಗಿರಿ ಕಿರಿಕಿರಿ ಅನುಭವವಾಗಿದೆ. ಮೂರು ಬರ್ತ್ ಬುಕ್ ಮಾಡಿದ್ದರೂ, ಕಂಡಕ್ಟರ್ ಅವರನ್ನು ಪ್ರತ್ಯೇಕವಾಗಿ ಕೂರಿಸಲು ಒತ್ತಾಯಿಸಿದ್ದಾರೆ. ಇದು ಪ್ರಯಾಣಿಕರ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದ್ದು, ಇಂತಹ ಘಟನೆಗಳ ವಿರುದ್ಧ ಜಾಗೃತಿ ಮೂಡಿಸುವುದು ಮತ್ತು ನಿಮ್ಮ ಹಕ್ಕುಗಳನ್ನು ತಿಳಿದುಕೊಳ್ಳುವುದು ಅವಶ್ಯಕ. ಕೆಎಸ್‌ಆರ್‌ಟಿಸಿ ಬಸ್‌ಗಳು ಸುರಕ್ಷಿತ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ನೀವು ಮತ್ತು ಆ ಹುಡುಗಿ ಬೇರೆ ಬೇರೆ ಮಲಗಿ: ಪೊಲೀಸರಿಗೆ ದೂರು ನೀಡುವುದಾಗಿ ಬೆದರಿಕೆ ಹಾಕಿದ ಬಸ್ ಕಂಡಕ್ಟರ್
ಸಾಂದರ್ಭಿಕ ಚಿತ್ರ

Updated on: Feb 25, 2026 | 10:06 AM

ಬೆಂಗಳೂರು, ಫೆ.25: ಬಸ್ಸಿನಲ್ಲಿ ಆಗುವ ಕೆಲವೊಂದು ವಿಚಾರಗಳು ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡುತ್ತದೆ. ದೀರ್ಘ ಸಮಯದವರಗೆ ಪ್ರಯಾಣ ಮಾಡುವಾಗ ಬಸ್ಸಿನಲ್ಲಿ ತುಂಬಾ ಆರಾಮದಾಯಕವಾಗಿರಬೇಕು ಎನ್ನುವುದು ಅನೇಕರ ಯೋಚನೆ, ಅದಕ್ಕೆ ಎರಡು ಸೀಟ್​​, ಅಥವಾ ಸಿಂಗಲ್​​​ ಸೀಟ್​​​ಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇನ್ನು ದಂಪತಿಗಳು, ಮಕ್ಕಳು ಇದ್ರೆ ಡಬಲ್​​​​, ತ್ರಿಬಲ್​​​​​ ಸೀಟ್​​ಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಸೇರಿದಂತೆ ಅನೇಕ ಕಡೆ ಹುಡುಗ-ಹುಡುಗಿ ಒಂದೇ ಸೀಟ್​​​ನಲ್ಲಿ ಜತೆಯಾಗಿ ಪ್ರಯಾಣ ಮಾಡುವುದನ್ನು ವಿರೋಧಿಸುತ್ತಾರೆ. ಇದೀಗ ಇಂತಹದೇ ಕಿರಿಕಿರಿಯನ್ನು ಬೆಂಗಳೂರಿನ ವ್ಯಕ್ತಿಯೊಬ್ಬರು ಅನುಭವಿಸಿದ್ದಾರೆ.

22 ವರ್ಷದ ಯುವಕ ಮತ್ತು ಆತನ ಗೆಳತಿ ಬೆಂಗಳೂರಿನಿಂದ ಪ್ರಯಾಣಿಸಲು ಖಾಸಗಿ ಸ್ಲೀಪರ್ ಬಸ್‌ನಲ್ಲಿ 3 ಬರ್ತ್‌ಗಳನ್ನು ಬುಕ್ ಮಾಡಿದ್ದರು. ಹೆಚ್ಚು ಜಾಗವಿರಲಿ ಮತ್ತು ಆರಾಮದಾಯಕವಾಗಿ ಪ್ರಯಾಣಿಸಲಿ ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದ್ದರು. ಆದರೆ ಬಸ್ ಹತ್ತಿದ ನಂತರ ಕಂಡಕ್ಟರ್ ಇವರಿಬ್ಬರನ್ನು ಒಟ್ಟಿಗೆ ಕುಳಿತುಕೊಳ್ಳದಂತೆ ತಡೆದಿದ್ದಾರೆ. ಇಬ್ಬರೂ ವಯಸ್ಕರಾಗಿದ್ದರೂ ಮತ್ತು ಅಧಿಕೃತ ಟಿಕೆಟ್ ಹೊಂದಿದ್ದರೂ, ಕಂಡಕ್ಟರ್ ಇಬ್ಬರನ್ನು ಪ್ರತ್ಯೇಕ ಸೀಟುಗಳಲ್ಲಿ ಮಲಗುವಂತೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ‘iPhone ಬಾಯ್‌ಫ್ರೆಂಡ್ ಕೊಡಿಸಿದ್ದಾ’?: ಹುಡುಗಿಯರು ಸ್ವಂತ ಹಣದಲ್ಲಿ ಏನು ಖರೀದಿಸುವುದಿಲ್ವಾ? ಸಿಟ್ಟಾದ ಬೆಂಗಳೂರಿನ ಯುವತಿ

ವೈರಲ್​​ ಪೋಸ್ಟ್​​ ಇಲ್ಲಿದೆ ನೋಡಿ:

Bengaluru Bus Moral Policing

“ನಿಮ್ಮ ಪೋಷಕರಿಗೆ ಫೋನ್ ಮಾಡಿ” ಇಲ್ಲವೆಂದರೆ “ಪೊಲೀಸರಿಗೆ ದೂರು ನೀಡುತ್ತೇವೆ” ಎಂದು ಕಂಡಕ್ಟರ್ ಬೆದರಿಕೆ ಹಾಕಿದ್ದರಿಂದ ಆತಂಕಗೊಂಡ ಜೋಡಿ, ವಿವಾದ ಬೇಡವೆಂದು ದೂರ ಕುಳಿತಿದ್ದಾರೆ.ಈ ಘಟನೆ ರೆಡ್ಡಿಟ್‌ನಲ್ಲಿ ಪೋಸ್ಟ್ ಆದ ಬೆನ್ನಲ್ಲೇ ನೂರಾರು ಜನರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. “ಕಂಡಕ್ಟರ್ ನೀವು ಖಾಲಿ ಬಿಟ್ಟಿದ್ದ ಒಂದು ಸೀಟನ್ನು ಬೇರೆಯವರಿಗೆ ಮಾರಿ ಹಣ ಮಾಡಲು ಈ ರೀತಿ ನಾಟಕ ಆಡಿರಬಹುದು” ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. “ವಯಸ್ಕರು ಒಟ್ಟಿಗೆ ಪ್ರಯಾಣಿಸುವುದು ಕಾನೂನುಬಾಹಿರವಲ್ಲ. ನೀವು ಟಿಕೆಟ್ ಹಣ ಪಾವತಿಸಿರುವಾಗ ನಿಮ್ಮ ಸೀಟಿನ ಮೇಲೆ ಕಂಡಕ್ಟರ್‌ಗೆ ಯಾವುದೇ ಹಕ್ಕಿಲ್ಲ” ಎಂದು ಒಬ್ಬರು ಹೇಳಿದ್ದಾರೆ. ಖಾಸಗಿ ಬಸ್‌ಗಳಿಗಿಂತ ಕೆಎಸ್ಆರ್‌ಟಿಸಿ (KSRTC) ಸ್ಲೀಪರ್ ಬಸ್‌ಗಳು ಸುರಕ್ಷಿತ ಮತ್ತು ಅಲ್ಲಿ ಇಂತಹ ನೈತಿಕ ಪೊಲೀಸ್‌ಗಿರಿ ನಡೆಯುವುದಿಲ್ಲ ಎಂದು ಮತ್ತೊಬ್ಬರು ಹೇಳಿದ್ದಾರೆ. ಪೋಷಕರಿಗೆ ಕರೆ ಮಾಡುವುದಾಗಿ ಬೆದರಿಸಿದಾಗ ‘ಮಾಡಿ’ ಎಂದು ಧೈರ್ಯವಾಗಿ ಹೇಳಬೇಕಿತ್ತು. ನೀವು ಯಾವುದೇ ತಪ್ಪು ಮಾಡದಿದ್ದಾಗ ಹೆದರುವ ಅಗತ್ಯವಿಲ್ಲ ಎಂದು ಮತ್ತೊಬ್ಬರು ಸಲಹೆ ನೀಡಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Loading...
Unable to load recommendations.
Follow Us